Kande kandenu Krishna

Composer : Shri Vadirajaru

By Smt.Shubhalakshmi Rao

ಕಂಡೆ ಕಂಡೆನು ಕೃಷ್ಣ ನಿನ್ನಯ
ದಿವ್ಯ ಮಂಗಳ ಮೂರ್ತಿಯ |
ಕಂಡು ಬದುಕಿದೆ ಇಂದು ನಾನು
ಕರುಣಿಸೊ ಎನ್ನೊಡೆಯನೆ [ಪ.]

ಉಟ್ಟ ದಟ್ಟಿಯು ಪಿಡಿದ ವಂಕಿಯು
ತೊಟ್ಟ ಕೌಸ್ತುಭ ಭೂಷಣ
ಮೆಟ್ಟಿದ ನವರತ್ನದ್ ಹಾವಿಗೆ
ಇಟ್ಟ ಕಸ್ತೂರಿ ತಿಲಕವು (೧)

ಮಂದ ಹಾಸವು ದಂತ ಪಂಕಿತಿಯು
ಚೆಲುವ ಕಡೆಗಣ್ಣ ನೋಟವು
ಅಂದವಾದ ಕುರುಳು ಗೂದಲು
ಮುದ್ದು ಸುರಿವೋ ಮುಖವನೇ (೨)

ಮುಲ್ಲೆ ಮಲ್ಲಿಗೆ ದಂಡೆ
ಕೊರಳಲಿ ಚೆಲ್ವ ಕಂಕಣ ಕೈಯಲಿ
ಗೊಲ್ಲ ಸತಿಯರ ಕುಚಗಳಲ್ಲಿ
ಜಲ್ಲು ಜಲ್ಲುತ ನಲಿವನೂ (೩)

ಸುರರು ಪುಷ್ಪದ ವೃಷ್ಟಿ ಕರೆಯಲು
ಅ-ಸುರರೆಲ್ಲರು ಓಡಲು
ಕ್ರೂರ ಕಾಳಿಯ ಫಣಗಳಲ್ಲಿ
ಧೀರ ನಲಿನಲಿದಾಡಲು (೪)

ಇಂದು ಎನ್ನ ಬಂದ ತೀರಿತು ಇಂದು
ಎನ್ನ ಕ್ಲೇಶ ಹೊಯಿತು
ಇನ್ನು ಅನ್ಯರ ಭಜಿಸಲೇಕೊ
ಮನ್ನಿಸೊ ಹಯವದನನೇ (೩)


kaMDe kaMDenu kRuShNa ninnaya
divya maMgaLa mUrtiya |
kaMDu badukide iMdu nAnu
karuNiso ennoDeyane [pa.]

uTTa daTTiyu piDida vaMkiyu
toTTa kaustuBa BUShaNa
meTTida navaratnad hAvige
iTTa kastUri tilakavu (1)

maMda hAsavu daMta paMkitiyu
cheluva kaDegaNNa nOTavu
aMdavAda kuruLu gUdalu
muddu surivO muKavanE (2)

mulle mallige daMDe
koraLali celva kaMkaNa kaiyali
golla satiyara kucagaLalli
jallu jalluta nalivanU (3)

suraru puShpada vRuShTi kareyalu
a-surarellaru ODalu
krUra kALiya PaNagaLalli
dhIra nalinalidADalu (4)

iMdu enna baMda tIritu iMdu
enna klEsha hoyitu
innu anyara bhajisalEko
manniso hayavadananE (3)

Leave a Reply

Your email address will not be published. Required fields are marked *

You might also like

error: Content is protected !!