Composer : Shri Vadirajaru
ಹಡಗಿನೋಳಗಿಂದ ಬಂದ ಕಡುಮುದ್ದು
ಶ್ರೀಕೃಷ್ಣ ಕಡಗೋಲಾಣೆನಾ ಪಿಡಿದಾಣೆ [ಪ]
ಕಡಗೋಲಾಣೆನಾ ಪಿಡಿದಾನೆ ದೇವಕಿಯ
ತನಯಗಾರತಿಯ ಬೆಳಗೀರೇ ಶೋಭಾನೆ [ಅ.ಪ].
ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬ
ಮುದ್ದು ರುಕ್ಮಿಣಿಯರ ಅರಸನೇ
ಮುದ್ದು ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆ
ಮುತ್ತಿನಾರತಿಯ ಬೆಳಗಿರೆ (೧)
ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬ
ಕಾಂತೆ ರುಕ್ಮಿಣಿಯಾರ ಅರಸನೇ
ಕಾಂತೆ ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆ
ಕಾಂಚನದಾರತಿಯ ಬೆಳಗಿರೇ (೨)
ಪಾಂಡವರ ಪ್ರಿಯನೆ ಚಾಣೂರ ಮರ್ದನನೆ
ಸತ್ಯಭಾಮೆಯರ ಅರಸನೇ
ಸತ್ಯಭಾಮೆಯರ ಅರಸನೆ ಶ್ರೀಕೃಷ್ಣಗೆ
ನವರತ್ನದಾರತಿಯ ಬೆಳಗಿರೇ (೩)
ಸೋದರ ಮಾವನ ಮಧುರೇಲಿ ಮಡುಹಿದ
ತಾಯಿಯ ಸೆರೆಯ ಬಿಡಿಸಿದ
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರತಿಯ ಬೆಳಗಿರೇ (೪)
haDaginOLagiMda baMda kaDumuddu
SrIkRuShNa kaDagOlANenA piDidANe [pa]
kaDagOlANenA piDidAne dEvakiya
tanayagAratiya beLagIrE SOBAne [a.pa].
madhvasarOvaradalli Suddha pUjeyagoMba
muddu rukmiNiyara arasanE
muddu rukmiNiyara arasane SrIkRuShNage
muttinAratiya beLagire (1)
AcAryara kaiyiMda adhika pUjeyagoMba
kAMte rukmiNiyAra arasanE
kAMte rukmiNiyara arasane SrIkRuShNage
kAMcanadAratiya beLagirE (2)
pAMDavara priyane cANUra mardanane
satyaBAmeyara arasanE
satyaBAmeyara arasane SrIkRuShNage
navaratnadAratiya beLagirE (3)
sOdara mAvana madhurEli maDuhida
tAyiya sereya biDisida
tAyiya sereya biDisida hayavadana
dEvagAratiya beLagirE (4)
Leave a Reply