Composer : Shri Vadirajaru
ದಿನಗಳನು ಕಳೆವ ಜನರೇ ಸುಜನರು [ ಪ]
ವನಜನಾಭನ ದಾಸರ ಸಮಾಗಮದಿಂದ [ಅ.ಪ]
ಅರುಣೋದಯದಳೆದ್ದು ಆಚಮನಕ್ರುತಿಯಿನ್ದ |
ಪರಿಶುದ್ಧರಾಗಿ ಇಹಪರಗಳಿಂದ |
ಎರಡುವಿಧ ಸುಖವೀವ ಗುರುಮಧ್ವಮುನಿವರನ |
ಪರಮ ಮತ ವಿಡಿದು ಹರಿಕಥಮ್ರುತ ಸವಿದು |೧|
ಸ್ನಾನವನು ಮಾಡಿ ಸಂಕಲ್ಪ ಪೂರ್ವಕದಿ |
ಸಂಧ್ಯಾನ ಗಾಯತ್ರಿ ಗುರುಮಂತ್ರ ಜಪವು |
ಭಾನು ನಾಮಕ ನಾದ ಪರಮಾತ್ಮ ನಂಘ್ರಿಯ |
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ |೨|
ಶ್ರೀ ವಾಸುದೇವನ, ಅಡಿಗಡಿಗೆ ನೆನೆದು |
ಪಾವಕಗೆ ಪ್ರಾತರಾಹುತಿಯನಿತ್ತು |
ಭಾವಗ್ಯರಲಿ ಸಕಲ ಪುರಾಣಗಳಾ ಕೇಳಿ |
ಹೂವು ಶ್ರೀ ತುಳಸಿ ವನಗಳ ಸೇವೆಯನು ಮಾದಿ |೩|
ಸಾವಧಾನದಿ ತಂತ್ರ ಸಾರೋಕ್ತ ವಿಧಿಯಿಂದ |
ದೇವಪೂಜೆಯನು ಮಾಡಿ ದೇವೇಶಗೆ |
ನೈವೇದ್ಯಗಳನಿತ್ತು ನಿತ್ಯ ತೃಪ್ತಗೆ |
ವೈಶ್ವದೇವ ಬಲಿಹರಣ, ಅತಿಥಿ ಪೂಜೆಗಳಿನ್ದ |೪|
ಪರಮ ಹರುಷದಿನ್ದ ದೇವ ಪ್ರಸಾದವನು |
ವರ ಮಾತೃ ಪಿತ ಸೋದರರ ಸಹಿತ |
ಪರಮ ಸಖರ ಪಂಕ್ತಿ ಪಾವನರೊಡಗೂಡಿ |
ನರಹರೇ ಎನುತ ಭೋಜನಮಾಡಿ ಮೋದಿಸುತ|೫|
ತನುಮನವ ಶ್ರೀ ಹರಿ ಆಧೀನವ ಮಾದಿ
ಅನುಸರಿಸಿ ಭಾಗ್ಯ ಬಡತನ ಎಣಿಸದೆ
ಮನವರಿತು ಹರಿ ಕೊತ್ತದು ತನ್ನದಲ್ಲದೆ ಅಧಿಕ
ಅಣುಮಾತ್ರ ಬಾರದೆನ್ದು ಅಲ್ಪ ಸನ್ತುಶ್ಟನಾಗಿ |೬|
ಈ ವಿಧಧಿ ಅನುದಿನವಾಚರಿಸಿ ರಾತ್ರಿಯಲೊಂದು
ಝಾವದಲಿ ತೋಶದಿಮ್ ನಿದ್ರೆ ಗೈದು |
ಝಾವ ಝಾವಕೆ ಎದ್ದು ನೆರೆಹೊರೆಯು ಕೇಳ್ವಂತೆ |
ಪಾವನ ಚರಿತ ಹಯವದನನ ನೆನೆದು |೭|
dinagaLanu kaLeva janarE sujanaru [ pa]
vanajanaabhana daasara samaagamadiMda [a.pa]
aruNOdayadaLeddu aacamanakrutiyinda |
parishuddharaagi ihaparagaLiMda |
eraDuvidha sukhavIva gurumadhvamunivarana |
parama mata viDidu harikathamruta savidu |1|
snaanavanu maaDi saMkalpa pUrvakadi |
saMdhyaana gaayatri gurumaMtra japavu |
bhaanu naamaka naada paramaatma naMghriya |
dhyaanavanu maaDi adhyayana paaThagaLiMda |2|
shrI vaasudEvana, aDigaDige nenedu |
paavakage praataraahutiyanittu |
bhaavagyarali sakala puraaNagaLaa kELi |
hUvu shrI tuLasi vanagaLa sEveyanu maadi |3|
saavadhaanadi taMtra saarOkta vidhiyiMda |
dEvapUjeyanu maaDi dEvEshage |
naivEdyagaLanittu nitya tRuptage |
vaishvadEva baliharaNa, atithi pUjegaLinda |4|
parama haruShadinda dEva prasaadavanu |
vara maatRu pita sOdarara sahita |
parama sakhara paMkti paavanaroDagUDi |
naraharE enuta bhOjanamaaDi mOdisuta|5|
tanumanava shrI hari aadheenava maadi
anusarisi bhaagya baDatana eNisade
manavaritu hari kottadu tannadallade adhika
aNumaatra baaradendu alpa santushTanaagi |6|
I vidhadhi anudinavaacharisi raatriyaloMdu
jhaavadali tOshadim nidre gaidu |
jhaava jhaavake eddu nerehoreyu kELvaMte |
paavana carita hayavadanana nenedu |7|
Leave a Reply