Composer : Shri Vadirajaru
ಬಿಂದುಮಾಧವ ಮಾಡದಿರೆನಗೆ ತಂದೆ ಭೇದವ
ಕಂದುಗೊರಳಾಧೀಶ ಕಾಶಿಯ ಪುರವಾಸ
ಕಂದನ್ನ ತಡೆಯದೆ ಕಾಯನುದ್ಧರಿಸೊ [ಪ]
ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀ ನಾಯಕ
ಕುಕ್ಷಿಯೀರೇಳು ಭುವನವ ತಾಳ್ವನ
ಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ (೧)
ಪಾಪನಾಶನ ಪಾಲಿಸೊ ಎನ್ನ ಸರ್ಪ ಭೂಷಣ
ತಾತನೆಂದೆನಿಸಿ ತವ-ನಾಮ ಸ್ಮರಣೆಯ
ಪಾರ್ವತೀಪತಿ ಯತಿ ಧ್ಯಾನದೊಳಿರಿಸೊ (೨)
ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿ
ವೀರನೆಂದೆನಿಸುವ ಸೋದೆಯ ಪುರವಾಸ
ವಾದಿರಾಜ ವರದ ವಂದೇ ಹಯವದನ (೩)
biMdumAdhava mADadirenage taMde BEdava
kaMdugoraLAdhISa kASiya puravAsa
kaMdanna taDeyade kAyanuddhariso [pa]
mOkShadAyaka rakShiso enna lakShmI nAyaka
kukShiyIrELu Buvanava tALvana
BikShApAtra Sivana dhyAnadoLiriso (1)
pApanASana pAliso enna sarpa BUShaNa
tAtaneMdenisi tava-nAma smaraNeya
pArvatIpati yati dhyAnadoLiriso (2)
AdimUruti viSvESa viShNu-pAdave gati
vIraneMdenisuva sOdeya puravAsa
vAdirAja varada vaMdE hayavadana (3)
Leave a Reply