Bhoori nigamava kadda

Composer : Shri Vadirajaru

By Smt.Shubhalakshmi Rao

ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದ
ಸಾರ ವೇದಗಳ ವಿಧಿಗಿತ್ತ
ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-
ತಾರಗಾರತಿಯ ಬೆಳಗಿರೆ (೧)

ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ
ತೋರಿ ಬೆನ್ನಾಂತ ಸುರನುತ
ತೋರಿ ಬೆನ್ನಾಂತ ಸುರನುತ ಕೂರ್ಮಾವ-
ತಾರಗಾರತಿಯ ಬೆಳಗಿರೆ (೨)

ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದ
ಎತ್ತಿ ದಾಡೆಯಲಿ ನೆಗಹಿದ
ಎತ್ತಿ ದಾಡೆಯಲಿ ನೆಗಹಿದ ವರಾಹ-
ಮೂರ್ತಿಗಾರತಿಯ ಬೆಳಗಿರೆ (೩)

ಕಡು ಬಾಲಕನ ನುಡಿಗೆ ಒಡೆದು ಕಂಬದೊಳುದಿಸಿ
ಒಡಲ ಸೀಳಿದ ಹಿರಣ್ಯಕನ
ಒಡಲ ಸೀಳಿದ ಹಿರಣ್ಯಕನ ನರಸಿಂಹ
ಒಡೆಯಗಾರತಿಯ ಬೆಳಗಿರೆ (೪)

ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ
ಈ ಮೂರು ಜಗವ ಈರಡಿಯ
ಈ ಮೂರು ಜಗವ ಈರಡಿ ಮಾಡಿ ಅಳೆದ
ವಾಮನಗಾರತಿಯ ಬೆಳಗಿರೆ (೫)

ಕುಮ್ಭಿಣಿ ಸುರರಿಗಾಗಿ ಕ್ಷತ್ರಿಯರ
ಸಂಭ್ರಮ ಕುಲವ ಸವರಿದ
ಸಂಭ್ರಮ ಕುಲವ ಸವರಿದ ಪರಶುರಾ-
ಮೆಂಬಗಾರತಿಯ ಬೆಳಗಿರೆ (೬)

ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ
ತಂದ ರಾವಣನ ತಲೆಹೊಯ್ದ
ತಂದ ರಾವಣನ ತಲೆಹೊಯ್ದ ರಘುರಾಮ-
ಚಂದ್ರಗಾರತಿಯ ಬೆಳಗಿರೆ (೭)

ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ
ದುಷ್ಟ ಕಂಸನ್ನ ಕೆಡಹಿದ
ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ
ಕೃಷ್ಣಗಾರತಿಯ ಬೆಳಗಿರೆ (೮)

ರುದ್ರನ್ನ ತ್ರಿಪುರದೊಳಿದ್ದ ಸತಿಯರ
ಬುದ್ಧಿ ಭೇದಮಾಡಿ ಕೆಡಿಸಿದ
ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ
ಬೌದ್ಧಗಾರತಿಯ ಬೆಳಗಿರೆ (೯)

ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು
ತಾ ಪಿಡಿದು ಖಡ್ಗ ತುರಗವ
ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ-
ರೂಪಗಾರತಿಯ ಬೆಳಗಿರೆ (೧೦)

ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ
ಹತ್ತವತಾರಿ ಹಯವದನ
ಹತ್ತವತಾರಿ ಹಯವದನನ ಪಾಡುತ
ಚಿತ್ರದಾರತಿಯ ಬೆಳಗಿರೆ (೧೧)


BUri nigamava kadda cOra daityana gedda
sAra vEdagaLa vidhigitta
sAra vEdagaLa vidhigitta matsyAva-
tAragAratiya beLagire (1)

vAridhi mathanadi nIroLu giri muLuge
tOri bennAMta suranuta
tOri bennAMta suranuta kUrmAva-
tAragAratiya beLagire (2)

dhAtriya kaddoyda daityana maDuhida
etti dADeyali negahida
etti dADeyali negahida varAha-
mUrtigAratiya beLagire (3)

kaDu bAlakana nuDige oDedu kaMbadoLudisi
oDala sILida hiraNyakana
oDala sILida hiraNyakana narasiMha
oDeyagAratiya beLagire (4)

sImAdhipati baliya BUmi mUraDi bEDi
I mUru jagava IraDiya
I mUru jagava IraDi mADi aLeda
vAmanagAratiya beLagire (5)

kumbhiNi surarigAgi kShatriyara
saMBrama kulava savarida
saMBrama kulava savarida paraSurA-
meMbagAratiya beLagire (6)

taMde kaLuhalu vanake baMdalli sIteya
taMda rAvaNana talehoyda
taMda rAvaNana talehoyda raGurAma-
caMdragAratiya beLagire (7)

SiShTa yamaLArjunaraBIShTava salisida
duShTa kaMsanna keDahida
duShTa kaMsanna keDahida namma SrI
kRuShNagAratiya beLagire (8)

rudranna tripuradoLidda satiyara
buddhi BEdamADi keDisida
buddhi BEdamADi keDisi battale niMda
bauddhagAratiya beLagire (9)

pApijana BArakke I pRuthvi kusiyalu
tA piDidu KaDga turagava
tA piDidu KaDga turagavErida kalki-
rUpagAratiya beLagire (10)

muttaide nAriyaru muttinArati mADi
hattavatAri hayavadana
hattavatAri hayavadanana pADuta
citradAratiya beLagire (11)

Leave a Reply

Your email address will not be published. Required fields are marked *

You might also like

error: Content is protected !!