Ava kadeyinda bande

Composer : Shri Vadirajaru

By Smt.Shubhalakshmi Rao

ಆವ ಕಡೆಯಿಂದ ಬಂದೆ ವಾಜಿ ವದನನೆ
ಭಾವಿಸುವ ವಾದಿರಾಜ ಮುನಿಯ ಕಾಣುತ /ಪ/

ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲು
ನೈವೇದ್ಯವನ್ನು ಇತ್ತು ಭಜಿಸುವೆ /ಅ.ಪ/

ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ
ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ
ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ
ಶಕುತಿ ಸಂತೋಷ ಮಹಿಮೆ ತೋರಬಂದೆಯ /೧/

ಹೆತ್ತತುಪ್ಪ ಸಕ್ಕರೆಯ ಮಾಡಿ ಮುದ್ದೆಯ
ತುತ್ತು ಮಾಡಿಕೊಡಲು ಅದನು ಮೆಲುತ ಮೆಚ್ಚುತ
ಅತ್ಯಂತ ಸಂತೋಷ ನೀನು ಆಟ ತೋರುತ
ಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯಾ /೨/

ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆ
ನಿಲುವೋ ಜ್ಞಾನ ಭಕ್ತಿ ಯನ್ನು ನೀಡಬಂದೆಯಾ
ಸುಲಭ ಸುಮುಖ ಸುಪ್ರಸನ್ನ ಹಯವದನನೆ
ಚೆಲುವ ಚಿನ್ಮಯ ಮೂರ್ತಿ ನಮ್ಮ ಸಲಹ ಬಂದೆಯಾ /೩/


Ava kaDeyiMda baMde vAji vadanane
BAvisuva vAdirAja muniya kANuta /pa/

nEvarisi maiya taDavi nEhadiMdali mElu
naivEdyavannu ittu Bajisuve /a.pa/

Bakuti kaDale j~jAna vairAgya bellada
mukuti AnaMda suKada kShIra laDDige
yukuti dhyAna koTTu nInu ella mAtali
Sakuti saMtOSha mahime tOrabaMdeya /1/

hettatuppa sakkareya mADi muddeya
tuttu mADikoDalu adanu meluta meccuta
atyaMta saMtOSha nInu ATa tOruta
BRutya vAdirAja muniya salaha baMdeyA /2/

Palava koTTu rakShisidi vAjivadanane
niluvO j~jAna Bakti yannu nIDabaMdeyA
sulaBa sumuKa suprasanna hayavadanane
celuva cinmaya mUrti namma salaha baMdeyA /3/

Leave a Reply

Your email address will not be published. Required fields are marked *

You might also like

error: Content is protected !!