Composer : Shri Shripadarajaru
ತಾ ತಾ ತಾ ತಾ ತಾ ರಂಗ ನಿನ್ನ ಪಾದ
ಥೈ ಥೈ ಥೈ ಥೈ ಥೈ ಎಂದು ಕುಣಿಯುತ ||ಪ||
ನಿಗಮವ ತಂದು ನಗವ ಬೆನ್ನಲಿ ಹೊತ್ತು
ಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ||೧||
ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿ
ಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ||೨||
ಅಂಗನೆಯರ ವ್ರತಭಂಗವ ಮಾಡಿದೆ
ತುಂಗ ಕುದುರೆಯೇರಿದ ರಂಗವಿಠಲನೆ ||೩||
tA tA tA tA tA raMga ninna pAda
thai thai thai thai thai eMdu kuNiyuta ||pa||
nigamava taMdu nagava bennali hottu
agedu bEru tiMdu bAlana salahide aMdu ||1||
poDavi IraDi mADi koDali piDidu muni
maDadiya salahide ennoDeya SrIkRuShNa ||2||
aMganeyara vrataBaMgava mADide
tuMga kudureyErida raMgaviThalane ||3||
Leave a Reply