Composer : Shri Vyasarajaru
ರಂಗಯ್ಯ ಮನೆಗೆ ಬಂದನೆ ಅಂತ-
ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ |
ಬಿಸಿಲು ಬೆಳದಿಂಗಳಾಯಿತು, ತಾ-
ಮಸ ಹೋಗಿ ಜ್ಞಾನೋದಯವಾಯಿತು
ಕುಸುಮನಾಭನು ತಾ ಬಂದಿರೆ ಅಲ್ಲಿ ವಿಷ
ಹೋಗಿ ಅಮೃತವಾಯಿತು ನೋಡ |೧|
ಹಾವು ನ್ಯಾವಳವಾಯಿತು ಅಲ್ಲಿ
ದಾವಾನಳ ತಂಪಾಯಿತು
ಬೇವು ಸಕ್ಕರೆಯಾಯಿತು ನಮ್ಮ
ದೇವಕಿ ಸುತನು ಬಂದರೆ ನೋಡ |೨|
ಜಾಣೇಯರರಸ ನೊಡು ರಂಗನು ತಾನಾಗಿ
ಬೆನ್ನ ಬಿಡ ನಮ್ಮನು
ಏನಾದರೂ ಅಗಲದಲೆ ನಮ್ಮ
ಮಾನಾಭಿಮಾನಗಳಿಗೆ ಶ್ರೀಕೃಷ್ಣ ನೋಡ |೩|
raMgayya manege baMdane aMta-
raMgadi guDi kaTTi kuNive nA | pa |
bisilu beLadiMgaLAyitu, tA-
masa hOgi j~jAnOdayavAyitu
kusumanABanu tA baMdire alli viSha
hOgi amRutavAyitu nODa |1|
hAvu nyAvaLavAyitu alli
dAvAnaLa taMpAyitu
bEvu sakkareyAyitu namma
dEvaki sutanu baMdare nODa |2|
jANEyararasa noDu raMganu tAnAgi
benna biDa nammanu
EnAdarU agaladale namma
mAnABimAnagaLige SrIkRuShNa nODa |3|
Leave a Reply