Ena bedalo ninna

Composer : Shri Vyasarajaru

By Smt.Shubhalakshmi Rao

ಜಾರರ ಸಂಗದಿಂದ ಬಂದ ಪಾತಕಗೆ
ಗೋಪಿ ಜಾರನೆಂದರೆ ಸಾಲದೆ ?

ಚೋರರ ಸಂಗದಿಂದ ಬಂದ ಪಾತಕಗೆ
ನವನೀತ ಚೋರ ಎಂದರೆ ಸಾಲದೆ ?

ಹಿಂಸಕರ ಸಂಗದಿಂದ ಬಂದ ಪಾತಕಗೆ
ಕಂಸ ಹಿಂಸಕನೆಂದರೆ ಸಾಲದೆ ?

ಜಾರನೆಂದು ಚೋರನೇಂದು ಹಿಂಸಕಾರನೆಂದು
ನಾ ನೆನೆಯಲು ನಮೋ ನಮೋ ನಮೋ ಸಿರಿ ಕೃಷ್ಣ ||


ಏನ ಬೇಡಲೊ ನಿನ್ನ ದೇವಾಧಿ ದೇವ [ಪ]
ಏನಹುದೊ ನಿನ್ನೊಳಗೆ ಮಹಾನುಭಾವ [ಅ.ಪ]

ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರ
ವನಿತೆಯರ ಬೇಡಲೆ ಬ್ರಹ್ಮಚಾರಿ
ಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆ
ತಿನುವುದಕೆ ಕೇಳುವೆನೆ ನವನೀತಚೋರ [೧]

ಒಡವೆಗಳ ಬಯಸೆ ಶಿಖಿ ಪಿಂಛ ತುಳಸಿ ಪತ್ರ
ಕಡು ಸೈನ್ಯವನೆ ಬಯಸೆ ಗೋಪಾಲನು
ಬಿಡದೆ ರೂಪವ ಬಯಸೆ ನೀಲಮೇಘಶ್ಯಾಮ
ಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ [೨]

ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆ
ಭಕ್ತಿಯನು ಸತ್ಯವಂತರಿಗಿತ್ತಿಹೆ
ಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವ
ಮುಕ್ತಿ ಕಾಂತೆಯ ಕೊಡೊ ಸುಖಿಪೆನೊ ಶ್ರೀಕೃಷ್ಣ [೩]


jArara saMgadiMda baMda pAtakage
gOpi jAraneMdare sAlade ?

cOrara saMgadiMda baMda pAtakage
navanIta cOra eMdare sAlade ?

hiMsakara saMgadiMda baMda pAtakage
kaMsa hiMsakaneMdare sAlade ?

jAraneMdu chOranEMdu hiMsakAraneMdu
nA neneyalu namO namO namO siri kRuShNa ||


Ena bEDalo ninna dEvAdhi dEva [pa]
Enahudo ninnoLage mahAnuBAva [a.pa]

maneya bEDale vanadhi hAsigeyu vaTapatra
vaniteyara bEDale brahmacAri
Gana saKyavanu bayase neneyuvara manadalihe
tinuvudake kELuvene navanItacOra [1]

oDavegaLa bayase SiKi piMCa tuLasi patra
kaDu sainyavane bayase gOpAlanu
biDade rUpava bayase nIlamEGaSyAma
uDuvudake kELuvene strIvasana cOra [2]

Saktiyanu gOpikA strIyarali vrayagaide
Baktiyanu satyavaMtarigittihe
Baktaranu vaMcisuta nInu bacciTTiruva
mukti kAMteya koDo suKipeno SrIkRuShNa [3]

Leave a Reply

Your email address will not be published. Required fields are marked *

You might also like

error: Content is protected !!