Bidade Nimmanu poojisuva

Composer : Shri Vyasarajaru

By Smt.Shubhalakshmi Rao

ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ [ಪ]
ತಡೆಯದೆ ವೈಕುಂಠವಹುದು ಸೋಜಿಗವೆ [ಅ.ಪ.]

ಬಡತನವಾಗೆ ಬಾಲತ್ವದ ಸಖನೆಂದು
ಮಡದಿ ಪೋಗೆನ್ನೆ ಕುಚೇಲ ಬಂದು
ಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗ
ಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ [೧]

ಷಡುರಸಾಯನದೂಟ ರಚಿಸಿರಲು ಕುರುಪತಿಯು
ಬಡವಿದುರನ ಮನೆಯ ಕುಡುತೆ ಪಾಲ್ಕುಡಿದು
ಪೊಡವಿಯ ಮೆಟ್ಟಿ ಪಾಪಿಷ್ಠನ ಕೆಡಹಿದೆ
ಬಡವರಾಧಾರಿಯೆಂಬ ಬಿರುದನು ಪಡೆದೆ [೨]

ಕಡಲ ಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿ
ಒಡನೆ ಅವಳನು ಸುರೂಪಿಯ ಮಾಡಿದೆ
ಸಡಗರದಿ ಅನವರತ ಬಿಡದೆ ಪೂಜಿಸುವಂಥ
ದೃಢ ಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ [೩]


biDade nimmanu pUjisuva dAsarige [pa]
taDeyade vaikuMThavahudu sOjigave [a.pa.]

baDatanavAge bAlatvada saKaneMdu
maDadi pOgenne kucEla baMdu
piDituMba avalakkiya taMdu koDalAga
kaDu mecci avanige sauBAgyavanitte [1]

ShaDurasAyanadUTa racisiralu kurupatiyu
baDavidurana maneya kuDute pAlkuDidu
poDaviya meTTi pApiShThana keDahide
baDavarAdhAriyeMba birudanu paDede [2]

kaDala Sayanane kubuje taMda gaMdhake mecci
oDane avaLanu surUpiya mADide
saDagaradi anavarata biDade pUjisuvaMtha
dRuDha BaktagEnuMTu Enilla sirikRuShNa [3]

Leave a Reply

Your email address will not be published. Required fields are marked *

You might also like

error: Content is protected !!