Vyasaraya Asmadguru

Composer : Shri Gurujagannatha dasaru

By Smt.Shubhalakshmi Rao

ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ |ಪ|

ವ್ಯಾಸರಾಯಾ ತವೋಪಾಸನ ಮಾಳ್ಪ
ವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ |ಅ.ಪ|

ದಾಸನಾಮಕ ದ್ವಿಜ ದೇಶ ಮುಖನ ಮನಿ
ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ |೧|

ಶ್ರೀಪಾದರಾಯರು ಈ ಪರಿ ನಿನ್ನನು
ಕಾಪಾಡಿ ನವ ವರ್ಷ ಭೂಪತಿ ಮಾಡಿದರೋ |೨|

ದಶಮ ವತ್ಸರದಲ್ಲಿ ಅಸಮ ಜ್ಞಾನಿ ಎನಿಸಿ
ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ |೩|

ಅಲವಭೋಧರ ಮತ ಜಲಧಿ ನಿಶಾಕರ
ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ |೪|

ಚಂಪಕ ತರು ಮುಖ್ಯ ಕಂಪಿತ ನದಿಯುತ
ಪಂಪಾ ಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ |೫|

ಚಕ್ರ ತೀರ್ಥದಲಿ ಮರ್ಕಟ ಬರಲಂದು
ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ |೬|

ಪದ್ಮ ತೀರ್ಥದಲಿ ಇದ್ದ ನಿಜಗುರು
ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ |೭|

ಮಂದ ಜನಕೆ ಸುಧಾ ಛಂದಾಗಿ ಇದರರ್ಥ
ಪೊಂದದೆಂದು ನೀನು ಚಂದ್ರಿಕೆ ರಚಿಸಿದೆ |೮|

ಇನಿತು ಮಹಾಮಹಿಮೆ ಘನವಾಗಿ ಜನರಿಗೆ
ಅನುಭವ ಮಾಡಿಸಿದೆ ಅನುಪಮ ಚರಿತನೆ |೯|

ಇಭಗುಹ ವರತುಂಗ ಉಭಯ ಪ್ರವಾಹ ಮಧ್ಯ
ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ |೧೦|

ಬಂದ ಜನರಘ ನಿಂದ್ರಾದೆ ಕಳೆಯುತ
ಛಂದದ ನವ ಶುಭ ವೃಂದಾವನದೊಳಿದ್ದೆ |೧೧|

ಇಂದು ನಿಮ್ಮಯ ಪಾದ ಪೊಂದಿ ಎನ್ನಯ ವೃಜಿನ
ವೃಂದ ಪೋದವು ಅರ್ಕನಿಂದ ತಿಮಿರದಂತೆ|೧೨|

ಮಂದಜನರಿಗೆ ಅಮಂದ ಭಾಗ್ಯನಿಧೆ
ವಂದಿಸಿ ಬೇಡುವೆ ನಂದದಿ ಸಲಹಯ್ಯ |೧೩|

ತಂದೆ ತಾಯಿಗಳು ಅಂದೆ ಬಿಟ್ಟರೆನ್ನ
ಇಂದು ರಕ್ಷಕರಿಲ್ಲವೆಂದು ನಿನ್ನನು ಸಾರ್ದೆ |೧೪|

ಪೊಂದಿ ಕೊಂಡಿರುವವನೆಂದು ಎನ್ನನು ಕೃಪೆ
ಯಿಂದ ಕರೆದು ಕಾಯೋ ನಂದಾದಾಯಕ ನೀನೆ|೧೫|

ಇಷ್ಟದಾಯಕ ನಿನ್ನ ಮುಟ್ಟಿಭಜಿಪ ದಿವ್ಯ
ದೃಷ್ಟಿ ಪಾಲಿಸೊ ಸರ್ವೋತ್ಕೃಷ್ಟ ಮಹಿಮ ನೀನೆ |೧೬|

ಮಾತು ಲಾಲಿಸೊ ನಿಜತಾತ ನೀನೆ ಸೀತಾ
ನಾಥ ಗುರುಜಗನ್ನಾಥವಿಠಲನಾಣೆ |೧೭|


vyAsarAyA asmadgurO vyAsarAyA |pa|

vyAsarAyA tavOpAsana mALpa
viSESha suj~jAna Bakti lEsAgi salisayyA |a.pa|

dAsanAmaka dvija dESa muKana mani –
kUsAgi janiside BUsparSavillade |1|

SrIpAdarAyaru I pari ninnanu
kApADi nava varSha BUpati mADidarO |2|

daSama vatsaradalli asama j~jAni enisi
vasudEva sutanannu susamAdhiyali paDede |3|

alavaBOdhara mata jaladhi niSAkara
kaleyaMte dinadinadali vRuddhanAde nI |4|

caMpaka taru muKya kaMpita nadiyuta
paMpA kShEtradi mahA saMpattiniMdidde |5|

cakra tIrthadali markaTa baralaMdu
tarkisi yaMtrastha cakradi baMdhiside |6|

padma tIrthadali idda nijaguru
madhvarAyara taMdu siddhamADi iTTe |7|

maMda janake sudhA CaMdAgi idarartha
poMdadeMdu nInu caMdrike raciside |8|

initu mahAmahime GanavAgi janarige
anuBava mADiside anupama caritane |9|

iBaguha varatuMga uBaya pravAha madhya
SuBamaya sthaLadalli aBayanAgi niMte nI |10|

baMda janaraGa niMdrAde kaLeyuta
CaMdada nava SuBa vRuMdAvanadoLidde |11|

iMdu nimmaya pAda poMdi ennaya vRujina –
vRuMda pOdavu arkaniMda timiradaMte|12|

maMdajanarige amaMda BAgyanidhe
vaMdisi bEDuve naMdadi salahayya |13|

taMde tAyigaLu aMde biTTarenna
iMdu rakShakarillaveMdu ninnanu sArde |14|

poMdi koMDiruvavaneMdu ennanu kRupe
yiMda karedu kAyO naMdAdAyaka nIne|15|

iShTadAyaka ninna muTTiBajipa divya
dRuShTi pAliso sarvOtkRuShTa mahima nIne |16|

mAtu lAliso nijatAta nIne sItA –
nAtha gurujagannAthaviThalanANe |17|

Leave a Reply

Your email address will not be published. Required fields are marked *

You might also like

error: Content is protected !!