Composer : Shri Shyamasundara dasaru
ಗುರು ವ್ಯಾಸರಾಯಾ ಪಾಲಿಸೋ, ಮೊರೆಹೊಕ್ಕೆ ನಿನ್ನ |
ಶರನನ್ನ ಮಾತು ಲಾಲಿಸೋ |
ಕರುಣಾಕರ ಭವ ಕರಿಕರ ಗಾರದೆ, ಕರವ ಪಿಡಿದು ಪೊರೆಯೆಂದು |
ನಿನ್ನ ನಾ ಕರೆವೆ | ಬಾಯಿತೆರೆವೆ | ಆಲ್ಪರಿವೆ | ನತಜನ- ಸುರತರುವೆ
|ಅ.ಪ.|
ಮಧ್ವಮುನಿ ಸುಮತೋದ್ಧಾರಕ | ಯತಿಕುಲ ತಿಲಕ | ಅದ್ವೈತಾರಣ್ಯ
ಪಾವಕ | ವಿದ್ವದ್ ಜನತತಿ ಸದ್ವಿನುತನ ಪಾದ ಪದ್ಮಕೆ ನಮಿಸುವೆ,
ಶುದ್ಧ ಸುಜ್ಞಾನವ- ನೀಡೋ | ಅಘದೂಡೋ | ಕೃಪೆ ಮಾಡೋ |
ಸುತನೆಂದು ನೋಡೋ |೧|
ವಿರಚಸಿ ಗ್ರಂಥತ್ರಯವ | ಬೋಧಿಸಿ ಭೇದ | ಪೊರೆದಿ ದ್ವಿಜ
ಪರಿವಾರವ | ನೆರೆನಂಬಿದ ಭೂವರಗೆ ಧಾವಿಸುತ | ಭರದಿ ಬರುವ,
ಕುಹಯೋಗ ಕಂಟಕವ ದಯದಿ, ನೀ ತರಿದಿ | ಸುಖಗರೆದಿ |
ಧಾರುಣಿಯೋಳು ಮೆರೆದಿ |೨|
ವಂದಿಪೆ ಸುಗತಿದಾಯಕ | ಶ್ರೀವರ ಶ್ಯಾಮ-ಸುಂದರ |
ಕೃಷ್ಣೋಪಾಸಕ | ತಂದೆ ಎಂದು | ನಿನ್ನ ಪೊಂದಿ ಪ್ರಾರ್ಥಿಸುವೆ
ಬಂದು ಪೊರೆಯೋ , ಪುರಂದರ ದಾಸರ ಪ್ರಿಯ | ಕವಿಗೇಯ
ಶುಭಕಾಯಾ, ಕರುಣದಿ ಪಿಡಿ ಕೈಯ್ಯಾ |೩|
guru vyAsarAyA pAlisO, morehokke ninna |
sharananna mAtu lAlisO |
karuNAkara bhava karikara gArade, karava piDidu poreyeMdu |
ninna nA kareve | bAyitereve | Alparive | natajana- surataruve
|a.pa.|
madhwamuni sumatOddhAraka | yatikula tilaka | advaitAraNya
pAvaka | vidvad janatati sadvinutana pAda padmake namisuve,
shuddha suj~jAnava- nIDO | aghadUDO | kRupe mADO |
sutaneMdu nODO |1|
viracasi graMthatrayava | bOdhisi bhEda | poredi dvija
parivArava | nerenaMbida bhUvarage dhAvisuta | bharadi baruva,
kuhayOga kaMTakava dayadi, nI taridi | sukhagaredi |
dhAruNiyOLu meredi |2|
vaMdipe sugatidAyaka | shrIvara shyAma-suMdara |
kRuShNOpAsaka | taMde eMdu | ninna poMdi prArthisuve
baMdu poreyO , puraMdara dAsara priya | kavigEya
shubhakAyA, karuNadi piDi kaiyyA |3|
Leave a Reply