Composer : Shri Pranesha Dasaru
ಚಂದ್ರಿಕಾಚಾರ್ಯರ ಪಾದ ದ್ವಯಕೆ
ಎರಗುವೆ ಪ್ರತಿವಾಸರಕೆ |ಪ|
ನವ ವೃಂದಾವನ ಮಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ |೧|
ವಿಜಯ ಮೂರುತಿ ಶ್ರೀರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಯಿಸಿ ಸ್ಥಾಪಿಸಿ ಮಧ್ವಮತದ
ದಿಗ್ವಿಜಯ ತತ್ವಗಳ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆ ಇಳೆಯೊಳು ಸಾಧಿಸಿ ತೋರಿದ |೨|
ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲನ
ಪಂಚಮಂತ್ರದಿಂದ ಪೂಜಿಸಿ ಯತಿಸಿದ |೩|
caMdrikAcAryara pAda dvayake
eraguve prativAsarake |pa|
nava vRuMdAvana madhyadi SOBipa
navavidha varagaLa nIDuta satata
nava maNi mukuTa mastakadi SOBipa
navya jIvana SuBaPala kOruta
naMbida Baktara dOShagaLeNisade
suMdara raGupati rAmana tOrida |1|
vijaya mUruti shrIrAmana dhyAnisi
vijaya nagara sAmrAjya vistarisi
vijayisi sthApisi madhvamatada
digvijaya tatvagaLa tiruLanu sAri
akaLaMka carita SrIrAma caMdirana
mahime iLeyoLu sAdhisi tOrida |2|
yAMtrika tanadi tApavenisuva
yaMtrOdhAraka mUrtiya nilisi
maMtrAkShateya mahimeya tOrida
cittadaliTTu caMdrikA racisi
paMcamuKada prANESa viThThalana
paMcamaMtradiMda pUjisi yatisida |3|
Leave a Reply