Select script   
Aksharamukha

Kandugorala shiva

Composer : Shri Prasannavenkata dasaru

By Smt.Shubhalakshmi Rao

ಕಂದುಗೊರಳ ಶಿವ ಸುಂದರೇಶ್ವರನಾ |
ವಂದಿಸಿ ಬೇಡಾನಂದವ ದಿನ ದಿನಾ [ಪ]

ಚಂದ್ರಧರ ಶರಶ್ಚಂದ್ರವದನೆ |
ಮಂದಾಕಿನಿವರ ಭಕ್ತವೃಂದವನೆ ||
ಚಂದದಿ ಸಲಹುವ ನಂದಿಗಮನನೆ |
ಕುಂದನಳಿದು ಮುಕುಂದನ ತೋರ್ಪನನೆ [೧]

ಪಾತಾಳೇಶ್ವರ ಪ್ರಪಾತಕಿಳಿದ ಭವಜರ |
ಎತ್ತಿ ತನ್ನಾತುಮದಿ ಸ್ಥಾನವಿತ್ತು ಪರ ||
ಗತಿ ಸಾಧನ ದಾರಿಯ ತೋರಿದ ಮುನಿವರ |
ಚಿತ್ತಜೈಯ್ಯನತಿಪ್ರೀತಿಯ ಶಂಕರ [೨]

ಮುದದಿ ಶ್ರೀಹರಿ ಮಂಚ ಪದವಿ ಪಡೆದ |
ವಿಧಿಭವಾದ್ಯರಿಗೆಲ್ಲ ಸರ್ವತ್ರ ಬೇಕಾದ ||
ಸದ್ಯೋಜಾತಾದಿ ಪವಿತರೈದು ಮೊಗದ |
ಸ್ಪರ್ಧುನಿಪಿತ ಪ್ರಸನ್ವೆಂಕಟಗೆ ಸಖನಾದ [೩]


kaMdugoraLa Siva suMdarESvaranA |
vaMdisi bEDAnaMdava dina dinA [pa]

caMdradhara SaraScaMdravadane |
maMdAkinivara BaktavRuMdavane ||
caMdadi salahuva naMdigamanane |
kuMdanaLidu mukuMdana tOrpanane [1]

pAtALESvara prapAtakiLida Bavajara |
etti tannAtumadi sthAnavittu para ||
gati sAdhana dAriya tOrida munivara |
cittajaiyyanatiprItiya SaMkara [2]

mudadi SrIhari maMca padavi paDeda |
vidhiBavAdyarigella sarvatra bEkAda ||
sadyOjAtAdi pavitaraidu mogada |
spardhunipita prasanveMkaTage saKanAda [3]

Leave a Reply

Your email address will not be published. Required fields are marked *

error: Content is protected !!