Composer : Shri Purandara dasaru
ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗ
ಅನೇಕ ಬಂಧುಗಳು ಲಕ್ಷ ವೈದ್ಯರುಗಳು
ಇರಲಾಗಿ ಕಣ್ಣಕಣ್ಣ ಬಿಡುವರು
ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು
ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು
ಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ ||
ಆವನಾವನ ಕಾಯ್ವ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ ||ಪ||
ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಸಲಹಿದಳು ಧ್ರುವರಾಯನ
ಆವ ಸುತ ಸಲಹಿದನು ಆ ಉಗ್ರ ಸೇನನ
ಜೀವನಿಗೆ ಪೋಷಕನು ಶ್ರೀ ಹರಿಯಲ್ಲದೆ ||೧||
ಆವ ಬಂಧುವು ಸಲಹಿದನು ಗಜರಾಜನನು
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರರು ಸಲಹಿದರು ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ ||೨||
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕ ಪಕ್ಷಿ ಜಾತಿಗಳಿಗೆ
ಆವ ಪೋಷಕನು ಗರ್ಭದಲಿದ್ದ ಶಿಶುಗಳಿಗೆ
ದೇವ ಶ್ರೀ ಪುರಂದರ ವಿಠಲನಲ್ಲದಲೆ ||೩||
SrIpatiya kaTAkShavIkShaNavu tappuvAga
anEka baMdhugaLu lakSha vaidyarugaLu
iralAgi kaNNakaNNa biDuvaru
tApasiyaraNyadoLage obba oMTiyAgiralu
aMjabEDeMdu namma kaMjanABane baMdu
ApattugaLa pariharisuva namma puraMdara viThala ||
AvanAvana kAyva avaniyoLage
dEva dEvESa SrI hariyallade ||pa||
Ava taMdeyu salahidanu prahlAdana
Ava tAyi salahidaLu dhruvarAyana
Ava suta salahidanu A ugra sEnana
jIvanige pOShakanu SrI hariyallade ||1||
Ava baMdhuvu salahidanu gajarAjananu
Ava pati kAyda draupadiya mAna
Ava sOdararu salahidaru viBIShaNana
jIvarige dAtRu SrI hariyalladE ||2||
AvanAdhAra aDaviyoLippa mRugagaLige
Ava rakShaka pakShi jAtigaLige
Ava pOShakanu garBadalidda SiSugaLige
dEva shrI puraMdara viThalanalladale ||3||
Leave a Reply