Ena pelali tangi

Composer : Shri Purandara dasaru

By Smt.Shubhalakshmi Rao

ಏನ ಪೇಳಲಿ ತಂಗಿ ತಿಮ್ಮಯ್ಯನ
ಪಾದವನು ಕಂಡೆ
ಕನಸು ಕಂಡೆನ ಮನದಲಿ
ಕಳವಳಗೊಂಡೆನೆ ||ಪ||

ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವನಿಟ್ಟು, ಅಂದುಗೆ ಘಲುಕೆನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ [೧]

ಮಕರ ಕುಂಡಲನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವಿಟ್ಟು, ಗೆಜ್ಜೆ ಘಲುಕೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ [೨]

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ, ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ [೩]

ತಾಮರ ಕಮಲದಲ್ಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೇ, ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ [೪]

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯ ಮಂಟಪದಲ್ಲಿ, ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೆನೆ [೫]


Ena pELali taMgi timmayyana
pAdavanu kaMDe
kanasu kaMDena manadali
kaLavaLagoMDene ||pa||

pOnnada kaDaganiTTu timmayya tA
pOlva nAmavaniTTu, aMduge Galukenuta
ena muMde baMdu niMtiddanallE [1]

makara kuMDalaniTTu timmayya tA
kastUri tilakaviTTu, gejje Galukenuta
svAmi tA baMdu niMtiddanallE [2]

muttina pallakki yatigaLu
hottu niMtiddaralle, Catra cAmaradiMda
raMgayyana utsava mUrutiya [3]

tAmara kamaladalli kRuShNayya tA
baMdu niMtiddanallE, vAyu bOmmadigaLu
raMgayyana sEveya mADuvarE [4]

navaratna kettisida svAmi enna
hRudaya maMTapadalli, sarvABaraNadiMda
puraMdaraviThalana kUDidene [5]

Leave a Reply

Your email address will not be published. Required fields are marked *

You might also like

error: Content is protected !!