Rama namava nudi

Composer : Shri Purandara dasaru

By Smt.Shubhalakshmi Rao

ರಾಮನಾಮವ ನುಡಿ ನುಡಿ |
ಕಾಮಕ್ರೋಧವ ಬಿಡಿ ಬಿಡಿ |
ಶ್ರೀ ರಾಮನಾಮವ ನುಡಿ ನುಡಿ ||ಪ||
ಶ್ರೀ ರಾಮ್ ಜಯ್ ರಾಮ್ |

ಗುರುಗಳ ಚರಣವ ಹಿಡಿ ಹಿಡಿ |
ಹರಿ ನಿರ್ಮಾಲ್ಯವ ನೀ ಮುಡಿ ಮುಡಿ ||
ಕರಕರೆ ಭವಪಾಶ ಕಡಿ ಕಡಿ | ಬಂದ |
ದುರಿತವನೆಲ್ಲ ಹೊಡಿ ಹೊಡಿ |೧|

ಸಜ್ಜನರ ಸಂಗವ ಮಾಡೋ ಮಾಡೋ |
ದುರ್ಜನರ ಸಂಗವ ಬಿಡೋ ಬಿಡೋ ||
ಅರ್ಜುನ ಸಾರಥಿರೂಪ ನೋಡೋ ನೋಡೋ | ಹರಿ |
ಭಜನೆಯಲಿ ಮನ ಇಡೋ ಇಡೋ |೨|

ಕರಿರಾಜವರದನ ಸಾರೋ ಸಾರೋ |
ಶ್ರಮ ಪರಿಹರಿಸೆಂದು ಹೋರೋ ಹೋರೋ ||
ವರದ ಭೀಮೇಶನ ದೂರದಿರೋ | ನಮ್ಮ
ಪುರಂದರವಿಠಲನ ಸೇರೋ ಸೇರೋ |೩|


rAmanAmava nuDi nuDi |
kAmakrOdhava biDi biDi |
SrI rAmanAmava nuDi nuDi ||pa||
SrI rAm jay rAm |

gurugaLa caraNava hiDi hiDi |
hari nirmAlyava nee muDi muDi ||
karakare BavapASa kaDi kaDi | baMda |
duritavanella hoDi hoDi |1|

sajjanara saMgava mADO mADO |
durjanara saMgava biDO biDO ||
arjuna sArathirUpa nODO nODO | hari |
Bajaneyali mana iDO iDO |2|

karirAjavaradana sArO sArO |
Srama parihariseMdu hOrO hOrO ||
varada BImESana dUradirO | namma
puraMdaraviThalana sErO sErO |3|

Leave a Reply

Your email address will not be published. Required fields are marked *

You might also like

error: Content is protected !!