Composer : Shri Tupaki Venkataramanacharya
ಸಾಟಿಯುಂಟೆ ಶ್ರೀನಿವಾಸನ ದಾಸ ಕೂಟದ ಮ್ಯಾಳಕೆ
ಬೂಟಕದ ಮಾತಲ್ಲ ಕೇಳಿರೊ ಭಜನೆ ಮಾಡುವ ತಾಳಕೆ |ಪ|
ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು
ದಾಸ ಜನರ ಸಮೂಹದಳೊಗಾವಾಸವಾಗುತ ನಲಿವರು
ಸೂಸುತಿಹ ಗಂಗಾದಿ ನದಿಗಳು ಬ್ಯಾಸರದೆ ಬಂದಿರುವುವು
ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದ ಮಧುರವು | ೧ |
ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ
ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತ
ವಾರಿಜಾಕ್ಷನ ಪರಮ ಮಂಗಳ ಮೂರುತಿಯ ಮುಂದಿರಿಸುತ
ಮಾರುತನ ಮತವರಿತು ಬಹು ಗಂಭೀರ ಸ್ವರದಿಂದರುಹುತ | ೨ |
ಹಿಂದೆಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ
ಅಂದಿನಂದಿನ ದೋಷ ದುಷ್ಕೃತ ಒಂದು ನಿಲ್ಲದು ಕಡೆಯಲಿ
ಇಂದಿರಾಧವ ಶೇಷಭೂಧರ ಮಂದಿರನು ಮಹ ಹರುಷದಿ
ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ | ೩ |
sATiyuMTe SrInivAsana dAsa kUTada myALake
bUTakada mAtalla kELiro Bajane mADuva tALake |pa|
vAsudEvana varNisalu kamalAsanAdi surEMdraru
dAsa janara samUhadaLogAvAsavAguta nalivaru
sUsutiha gaMgAdi nadigaLu byAsarade baMdiruvuvu
kESavana koMDATa dhareyoLu mIsalaLiyada madhuravu | 1 |
bArisuta taMbUri tALava nAradara saMsmarisuta
BUri kiMkiNi maddaLeya shRuMgAra rasavanu surisuta
vArijAkShana parama maMgaLa mUrutiya muMdirisuta
mArutana matavaritu bahu gaMBIra svaradiMdaruhuta | 2 |
hiMdegaLisida halavu duritavu kuMduvudu nimiShArdhadi
aMdinaMdina dOSha duShkRuta oMdu nilladu kaDeyali
iMdirAdhava SEShaBUdhara maMdiranu maha haruShadi
muMde nalivuta manake pUrNAnaMdavIvanu nagutali | 3 |
Leave a Reply