Composer : Shri Ananda Vittala
ತೇರನೇರಿ ಮೆರೆದು ಬರುವ
ಭೂಸುರವಂದ್ಯ ಯಾರಕ್ಕ|
ಗುರು ರಾಘವೇಂದ್ರರೆಂತೆಂಬೊ
ಯತಿಕುಲ ತಿಲಕ ಕೇಳ್ತಂಗಿ |ಪ|
ಚಂದದಿ ಕುಂದಣ ಮುಕುಟವ ಧರಿಸಿದ
ಸುಂದರನೀತ ಯಾರಕ್ಕ |
ತಂದೇಯ ಅಘ ಹರಿದು ನರಹರಿಯ ತೋರಿದ
ಪ್ರಹ್ಲಾದರಾಯ ಕೇಳ್ತಂಗಿ |೧|
ವಿಪ್ರರು ದಾಸರು ಯತಿತತಿಗಲ ಕೂಡಿ
ಬರುತಿಹ ನೀತ ಯಾರಕ್ಕ|
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ
ವ್ಯಾಸರಾಯ ಕೇಳ್ತಂಗಿ |೨|
ವರಹಜ ನದಿಯ ತೀರದಿ ಇದ್ದು
ಭಕುತರ ಪೊರೆವವ ಯಾರಕ್ಕ|
ಹರುಷದಿ ಅನಂದ ವಿಠಲನ ಸಾರಿದ
ಪರಿಮಳಾರ್ಯ ಕೇಳ್ತಂಗಿ |೩|
tEranEri meredu baruva
bhUsuravaMdya yArakka|
guru rAghavEMdrareMteMbo
yatikula tilaka kELtaMgi |pa|
chaMdadi kuMdaNa mukuTava dharisida
suMdaraneeta yArakka |
taMdEya agha haridu narahariya tOrida
prahlAdarAya kELtaMgi |1|
vipraru dAsaru yatitatigala kooDi
barutiha neeta yArakka|
kappu kRuShNana oppisi kuNisida
vyAsarAya kELtaMgi |2|
varahaja nadiya teeradi iddu
bhakutara porevava yArakka|
haruShadi anaMda viThalana sArida
parimaLArya kELtaMgi |3|
Leave a Reply