Composer : Shri Vittalesha
ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ
ಬಾರೊ ಮಹ ಪ್ರಭುವೆ
ಚಾರು ಚರಣ ಯುಗ ಸಾರಿ ನಮಿಪೆ ಬೇಗ
ಬಾರೊ ಹೃದಯ ಸುಖ ಸಾರ ರೂಪವ ತೋರೊ ||ಅ.ಪ||
ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು
ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ
ಪುಲ್ಲ ಲೋಚನ ಶಿಶು ಪ್ರಹ್ಲಾದನಾಗಿ ಬಾರೊ ||೧||
ದೋಷ ಕಳೆದು ಸಿಂಹಾಸನ ವೇರಿದ
ದಾಸಕುಲವ ಪೊರೆದ
ಶ್ರೀಶ ನರ್ಚಕನಾಗಿ ಪೊಷಿಸಿ ಹರಿ ಮತ
ವ್ಯಾಸತ್ರಯವ ಗೈದು ವೇಷ ಕಳೆದು ಬಾರೊ ||೨||
ಮೂರ್ಜಗ ಮಾನಿತ ತೇಜೊ ವಿರಾಜಿತ
ಮಾಜದ ಮಹ ಮಹಿಮ
ಓಜೆಗೊಳಿಸಿ ಮತಿ ರಾಜಿವ ಬೋದದಿ
ಪೂಜೆಗೆಂಬುವ ಗುರು ರಾಜಾ ರೂಪದಿ ಬಾರೊ ||೩||
ಮಂತ್ರ ಸದನದೊಲು ಸಂತ ಸುಜನರಿಗೆ
ಸಂತೋಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ
ಶಾಂತ ಮೂರುತಿ ಎನ್ನ ಅಂತರಂಗದಿ ಬಾರೊ ||೪||
ಈ ಸಮಯದಿ ಎನ್ನಾಸೆ ನಿನ್ನೊಳು
ಬಲು ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಾಶೆ ಗೊಳಿಸುವಳೆ
ದೊಷ ಕಳೆದು ವಿಠಲೇಶ ಹೃದಯದಿ ಬಾರೊ ||೫||
kOri kareve guru SreerAghavEMdrane
bAro maha prabhuve
chAru charaNa yuga sAri namipe bEga
bAro hRudaya sukha sAra roopava tOro ||a.pa||
elli nODalu hari alle kANuvaneMdu
kShulla kaMbavanoDedu
nillade narahari chelvike tOrida
pulla lOchana shishu prahlAdanAgi bAro ||1||
dOSha kaLedu siMhAsana vErida
dAsakulava poreda
Sreesha narchakanAgi poShisi hari mata
vyAsatrayava gaidu vESha kaLedu bAro ||2||
moorjaga mAnita tEjo virAjita
mAjada maha mahima
OjegoLisi mati rAjiva bOdadi
poojegeMbuva guru rAjA roopadi bAro ||3||
maMtra sadanadolu saMta sujanarige
saMtOSha siri garedu
kaMtu pitana pAda saMtata sEvipa
shAMta mooruti enna aMtaraMgadi bAro ||4||
ee samayadi ennAse ninnoLu
balu soosi hariyutihudO
koosige janani niraashe goLisuvaLe
doSha kaLedu viThalEsha hRudayadi bAro ||5||
Leave a Reply