Composer : Shri Shripadarajaru
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ |ಪ|
ಕಸ್ತುರಿ ರಂಗನ ನೋಡದ
ಪರಿಮಳ ರಂಗನ ನೋಡದ |
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ |ಅ.ಪ|
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದದಲಿ ರಂಗನ ನೋಡದ |೧|
ಹರಿಪಾದೋದಕ ಸಮ ಕಾವೇರಿ
ವಿರಜಾ ನದಿಯಲಿ ಸ್ನಾನವ ಮಾಡಿ
ಪರಮ ವೈಕುಂಠ ರಂಗ ಮಂದಿರ,
ಪರವಾಸುದೇವನ ನೋಡದ |೨|
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ
ತೇರನೇರಿ ಬೀದಿಲಿ ಮೆರೆವ
ರಂಗವಿಠ್ಠಲ ರಾಯನ ನೋಡದ |೩|
kaMgaLidyAtakO kAvEri raMgana nODada |pa|
kasturi raMgana nODada
parimaLa raMgana nODada |
jagaMgaLoLage maMgaLa mUruti
raMgana shrIpAdaMgaLa nODada |a.pa|
eMdigAdaromme janaru
baMdu bhUmiyalli niMdu
caMdra puShkaraNi snAnava mADi
AnaMdadiMdadali raMgana nODada |1|
haripAdOdaka sama kAvEri
virajA nadiyali snAnava mADi
parama vaikuMTha raMga maMdira,
paravAsudEvana nODada |2|
hAra hIra vaijayaMti
tOra muttina haara padaka
tEranEri bIdili mereva
raMgaviThThala rAyana nODada |3|
Leave a Reply