Composer : Shri Raghavendra Tirtharu / Rayaru
ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ [ಪ]
ಸುಂದರ ವದನನೆ ನಂದಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ]
ನೊಂದೆನಯ್ಯ ಭವ ಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನನೆಂತೆಂದೆನ್ನ ಕುಂದುಗಳ ಎಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ||೧||
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢ ಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨||
ಧಾರುಣಿಯೊಳು ಬಲುಭಾರ ಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೊ ಹರಿಯೇ ||೩||
iMdu enage gOviMda ninnaya
pAdAraviMdava tOrO mukuMdane [pa]
suMdara vadanane naMdagOpiya kaMda
maMdarOddhAra AnaMda iMdirA ramaNa [a.pa]
noMdenayya bhava baMdhanadoLu siluki
muMde dAri kANade kuMdide jagadoLu
kaMdananeMteMdenna kuMdugaLa eNisade
taMde kAyO kRuShNa kaMdarpa janakane ||1||
mUDhatanadi bahu hEDi jIva nAnAgi
dRuDha Bakutiyanu mADalillavo hariye
nODalillavo ninna pADalillavo mahime
gADikAra kRuShNa bEDikoMbeno ninna ||2||
dhAruNiyoLu balubhAra jIva nAnAgi
dAritappi naDede sEride kujanara
ArU kAyuvarilla sAride ninagayya
dhIra vENugOpAla pArugANiso hariyE ||3||
Leave a Reply