Composer : Shri Aihole venkata dasaru
ದಿನಕರನುದಿಸಿದನು ಧರೆಯೊಳಗೆ
ದಿನಕರನುದಿಸಿದನು |
ದಾನವ ಕುಲದಲಿ ಕ್ಷೋಣಿಯೊಳಗೆ ||ಅ.ಪ||
ಪ್ರಥಮ ಪ್ರಹ್ಲಾದನಾಗಿ ಅವತಾರ ಮಾಡಿ
ಸತತ ಹರಿಯ ನುತಿಸಿ |
ಮತಿ ಹೀನನಾದ ತಂದೆಗೆ ನರಹರಿ ರೂಪವ
ರತಿಯಿಂದ ತೋರಿದ ಪ್ರಲ್ಹಾದರಾಜರೆಂಬ ||೧||
ವ್ಯಾಸಮುನಿಯು ಎನಿಸಿ ಸೋಸಿಲಿಂದ
ವಾಸವನುತನ ಭಜಿಸಿ |
ದಾಸನೆಂದು ಮೆರೆದೆ ನವ ವೃಂದಾವನದಿ
ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ||೨||
ತುಂಗಭದ್ರೆಯ ತೀರದಿ ಮಂಗಳ
ವರ ಮಂತ್ರಾಲಯ ಸ್ಥಳದಿ |
ಅಂಗಜ ಪಿತ ನಮ್ಮ ಐಹೊಳೆ ವೆಂಕಟನ
ಕಂಗಳಿಂದಳಿ ಕಂಡ ಗುರು ರಾಘವೇಂದ್ರರೆಂಬ ||೩||
dinakaranudisidanu dhareyoLage
dinakaranudisidanu |
dAnava kuladali kShONiyoLage ||a.pa||
prathama prahlAdanAgi avatAra mADi
satata hariya nutisi |
mati hInanAda taMdege narahari rUpava
ratiyiMda tOrida pralhAdarAjareMba ||1||
vyAsamuniyu enisi sOsiliMda
vAsavanutana Bajisi |
dAsaneMdu merede nava vRuMdAvanadi
sOsili karedare vAsa mADuvudakke ||2||
tuMgaBadreya tIradi maMgaLa
vara maMtrAlaya sthaLadi |
aMgaja pita namma aihoLe veMkaTana
kaMgaLiMdaLi kaMDa guru rAGavEMdrareMba ||3||
Leave a Reply