Devi ambujavalli ramanane

Composer : Shri Gopaladasaru

By Smt.Shubhalakshmi Rao

ದೇವಿ ಅಂಬುಜವಲ್ಲಿ ರಮಣನೆ |
ಭೂವರಾಹ ದಯಾನಿಧೇ ||
ಪವಮಾನನ ದಿವ್ಯ ಕರದಲಿ |
ಸೇವೆ ಸಂತತಗೊಳ್ಳುವಿ ||೧||

ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ |
ನೀ ವಿಹಾರವ ಮಾಡುವಿ ||
ಭವವಿಮೋಚಕ ಭಕ್ತವತ್ಸಲ |
ಕವಿಗಳಿಗೆ ಕರುಣಾಕರ ||೨||

ಅತ್ಯಗಾಧ ಸುಶೀಲ ಜಾಹ್ನವಿ |
ಸುತ್ತು ಷೋಡಶ ತೀರ್ಥದಿ ||
ನಿತ್ಯ ಪುಷ್ಕರಣಿಯ ಗರ್ಭದಿ |
ನಿತ್ಯ ಇರುವುದ ಕಂಡೆ ನಾ ||೩||

ಮತ್ತು ವಂದಿಪೆ ತೀರ್ಥ ತಟದಲಿ |
ಉತ್ತಮಾಗ್ನೇಯ ಭಾಗದಿ ||
ಚಿತ್ತವೇದ್ಯದಿ ಕಲ್ಪತರು
ಅಶ್ವತ್ಥ ರೂಪದಿ ಇರುವನ ||೪||

ಕರಗಳೆರಡನು ಕಟಿಯಲಿಟ್ಟು |
ಕೋರೆಹಲ್ಲನೆ ತೋರುತ ||
ಧರಿಸಿ ಚಿನ್ಮಯ ಸಾಲಗ್ರಾಮದ |
ಸರವು ಈ ಪರಿ ಬೆಳಗುತ ||೫||

ತನ್ನ ಶ್ವೇತವರಾಹ ಮೂರ್ತಿ |
ಎನ್ನ ಪೂರ್ವದ ಪುಣ್ಯದಿ ||
ನಿನ್ನ ಶುಭಕರ ಪಾದ ಪಂಕಜ |
ವನ್ನು ಕಂಡೆನು ಇಂದು ನಾ ||೬||

ಸುಂದರಾನನ ಕಂಜ ಮಧುಪನ |
ಇಂದು ನೋಡಿದ ಕಾರಣ ||
ಬಂದ ದುರಿತಗಳೆಲ್ಲ ಪೋದವು |
ಎಲ್ಲ ಶುಭಕರವಾದವು ||೭||

ಮಲ್ಲಮರ್ದನ ವೈಕುಂಠದಿಂದ |
ಮೆಲ್ಲಮೆಲ್ಲನೆ ಬಂದೆಯಾ ||
ಚನ್ನಿಕಾಮನದಲ್ಲಿ ಕುಳಿತು |
ಎಲ್ಲ ಭಕ್ತರ ಸಲಹುವಿ ||೮||

ಸೂಕರಾಸ್ಯನೆ ನಿನ್ನ ಪಾದಕೆ |
ಅನೇಕ ವಂದನೆ ಮಾಡುವೆ ||
ಶೋಕಹರ ಗೋಪಾಲವಿಠ್ಠಲ |
ನೀ ಕರುಣಿಸಿ ರಕ್ಷಿಸೋ ||೯||


dEvi aMbujavalli ramaNane |
BUvarAha dayAnidhE ||
pavamAnana divya karadali |
sEve saMtatagoLLuvi ||1||

avaniyoLu SrImuShNa kShEtradi |
nI vihArava mADuvi ||
BavavimOcaka Baktavatsala |
kavigaLige karuNAkara ||2||

atyagAdha suSIla jAhnavi |
suttu ShODaSa tIrthadi ||
nitya puShkaraNiya garBadi |
nitya iruvuda kaMDe nA ||3||

mattu vaMdipe tIrtha taTadali |
uttamAgnEya BAgadi ||
cittavEdyadi kalpataru
aSvattha rUpadi iruvana ||4||

karagaLeraDanu kaTiyaliTTu |
kOrehallane tOruta ||
dharisi cinmaya sAlagrAmada |
saravu I pari beLaguta ||5||

tanna SvEtavarAha mUrti |
enna pUrvada puNyadi ||
ninna SuBakara pAda paMkaja |
vannu kaMDenu iMdu nA ||6||

suMdarAnana kaMja madhupana |
iMdu nODida kAraNa ||
baMda duritagaLella pOdavu |
ella SuBakaravAdavu ||7||

mallamardana vaikuMThadiMda |
mellamellane baMdeyA ||
channikAmanadalli kuLitu |
ella Baktara salahuvi ||8||

sUkarAsyane ninna pAdake |
anEka vaMdane mADuve ||
SOkahara gOpAlaviThThala |
nI karuNisi rakShisO ||9||

Leave a Reply

Your email address will not be published. Required fields are marked *

You might also like

error: Content is protected !!