Composer : Shri Vijayadasaru
ಗುರುರಾಯ ನಿನ್ನ ದರುಶನ ಭಾಗ್ಯವ
ಕರುಣಿಸಲಾರೇಯ ನಿನ್ನ ಭಕ್ತರಿಗೆ |
ಸರಿ ಏನೊ ನಿನಗೀಪರಿ ಮೌನ,
ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.)
ದುರುಳ ಹಿರಣ್ಯನ ಶಿರವನು ತರಿಯಲು
ಕರಿ ನಿನಗಾಗೆ ಧರೆಗಿಳಿದಾಗ
ಮರೆತು ನಡೆದೆನೊ ನಿನ್ನ ಹರಿಕೆಗೆ,
ದೊರೆ ಮಾಡೊ ಗುರು ನರಹರಿ ಪ್ರಿಯನೆ (೧)
ಗುರು ವ್ಯಾಸರಯನೆ ನಿನ್ನ ಭಕುತಿಗೆ
ಭೂರಮಣ ನಿನ್ನ ಸಿರೆಯಾದಾಗ
ಬರೆದಿ ಚಂದ್ರಿಕೆಯ ನೀ ಕೀರ್ತಿಸಿ ಹರಿಯ
ಪರಮತ ದಹಿಸಿದಿ ಪರಮ ಸುಜ್ಞಾನಿ (೨)
ಸಿರಿವರ ವಿಜಯ ವಿಠ್ಠಲ ಪರನೆಂದೆ
ಮೂರು ಮೂರು ಅವತಾರದಿ ಬಂದೆ
ಧರೆಗೆ ಪುಣ್ಯವೆಂದು ನಿನ್ನ ರೂಪದಿ
ಹರಿದು ಬರಲಿ ಗುರು ಪರಿಮಳ ರಾಯ (೩)
gururAya ninna darushana bhAgyava
karuNisalArEya ninna bhaktarige |
sari Eno ninageepari mouna,
aritu vichArise anuchitaveniside (a.pa.)
duruLa hiraNyana shiravanu tariyalu
kari ninagAge dharegiLidAga
maretu naDedeno ninna harikege,
dore mADo guru narahari priyane (1)
guru vyAsarayane ninna bhakutige
bhooramaNa ninna sireyAdAga
baredi chaMdrikeya nI keertisi hariya
paramata dahisidi parama suj~jAni (2)
sirivara vijaya viThThala paraneMde
mUru mUru avatAradi baMde
dharege puNyaveMdu ninna roopadi
haridu barali guru parimaLa rAya (3)
Leave a Reply