Composer : Shri Abhinava Janardana Vittala
ಜಯ ಜಯತು ಶೀ ರಾಮ ಇನ ಕುಲಾಬ್ಧಿಗೆ ಸೋಮ
ಜಯ ಜಯ ಸುಗುಣ ಸ್ತೋಮ ಸಾರ್ವಭೌಮ ಲಲಾಮ
ಜಯ ಜಯ ರಮಾಧಾಮ ದುರುಳ ದೈತ್ಯ ವಿರಾಮ
ಜಯ ಜಯ ಸುಜನ ಪ್ರೇಮ ಪೂರ್ಣ ಕಾಮ [ಅ.ಪ]
ಜಯ ಜಯತು ಶೀ ರಾಮ |
ನಿನ್ನ ಅವತಾರ ದುಷ್ಟರಿಗೆ ಬಲು ಪರಿ ಘೋರ
ನಿನ್ನ ಅವತಾರ ಶಿಷ್ಟರಿಗೆ ನಿರಯವೆ ದೂರ |
ನಿನ್ನ ಅವತಾರ ಪರಿಹರಿಸಿತೀ ಭೂಭಾರ
ನಿನ್ನ ಪೋಲುವ ಧೀರರಿನ್ನುಂಟೆ ಶೂರ [೧]
ದಶಕಂಠನಿಗೆ ಪಾಪ ಪರಿಪೂರ್ಣವಯಿತೊ
ದಶರಥನ ಜನ್ಮಾಂತರದ ಸುಕೃತವೊದಗಿತೊ |
ದಶ ದಿಗಾಂತರದೊಳಗೆ ಅಸಮ ಪರ ದೈವನೆ
ತ್ರಿದಶರಿಂದ ನೀನವತರಿಸಿದೆ ಶೀ ರಾಮ [೨]
ಅರಣ್ಯದೊಳಗೊಬ್ಬ ಧಾರುಣಿ ಸುರ ಅಂದು
ನೀರೊಯ್ವುತಿರೆ ತನ್ನ ಆರ್ಯರಿಗೆ ಅವನ
ಸಂಹಾರ ಮಾಡಲು ಶಪಿಸೆ ಅದೆ ಕಾರಣದಳುದಿಸಿ
ಧೀರ ಅಭಿನವ ಜನಾರ್ದನ ವಿಠಲ ಮೆರೆದೆ [೩]
jaya jayatu SRI rAma ina kulAbdhige sOma
jaya jaya suguNa stOma sArvabhouma lalAma
jaya jaya ramAdhAma duruLa daitya virAma
jaya jaya sujana prEma pUrNa kAma [a.pa]
jaya jayatu SRI rAma |
ninna avatAra duShTarige balu pari ghOra
ninna avatAra SiShTarige nirayave dUra |
ninna avatAra pariharisitI bhUbhAra
ninna pOluva dheerarinnuMTe shUra [1]
dashakaMThanige pApa paripUrNavayito
dasharathana janmAMtarada sukRutavodagito |
dasha digAMtaradoLage asama para daivane
tridashariMda neenavatariside SRI rAma [2]
araNyadoLagobba dhAruNi sura aMdu
neeroyvutire tanna Aryarige avana
saMhAra mADalu shapise ade kAraNadaLudisi
dheera abhinava janArdana viThala merede [3]
Leave a Reply