Ee Jagadali Divya

Composer : Shri Lakumeesha ankita on Shri Jitamitra Tirtharu

By Smt.Shubhalakshmi Rao

ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ |
ಶ್ರೀ ಜಿತಾಮಿತ್ರರ ನಮಿಪೆ |ಪ|

ಮೂಜಗಾಧಿಪ ರೂಪಿ ಜಲಜಕ್ಕೆ |
ಸೋಜಿಗದಿಂದ ತಾವು ಉಣಿಸುತ |
ಶ್ರೀ ಜಗದ್ಗುರು ಮಧ್ವರಾಯರ |
ನೈಜ ಕೃಪೆಯನು ಪಡೆದು ಮೆರೆದ |ಅ.ಪ|

ಹತ್ತಾವತಾರನ ಉತ್ತಮ ಒಲಿಮೆಯಲಿ |
ಕೃತ್ತಿವಾಸಾಂಶ ಕ್ಷಿತಿಯಲಿ |
ಯೆತ್ತಿ ಜನ್ಮ ಜಿತ್ತಪ್ಪ ನಾಮದಿ |
ಎತ್ತುಗಳ ಹೂಡಿ ಕೃಷಿಯ ಮಾಡುತ |
ನಿತ್ಯ ಜನಿವಾರ ಧರಿಸಿ ಊಟದಿ |
ಮತ್ತೆ ತೆಗೆಯುತ ಧರಿಪ ವೃತ್ತಿಯುಳ್ಳ | ೧ |

ಶ್ರೀ ವಿಬುಧೇಂದ್ರರು ಈ ಊರಿಗೆ ಬರಲು |
ನೋವಿನೀತನ ಭಗಿನಿಯು |
ಭಾವ ಶುದ್ಧೀಲಿ ಯತಿಯ ಮೊರೆಯಿಡೆ |
ಠಾವಿಲೀತನ ಕರೆದು ಶಾಸಿಸೆ |
ಶ್ರೀ ವರ ನರಹರಿಯ ಸಾಲಿಗ್ರಾಮ |
ತಾವು ಕೊಟ್ಟು ಉಣಿಸೆನ್ನ ಉಣಿಸಿದೆ |೨ |

ಸುತ್ತಿ ದೇಶವ ಗುರುಗಳು ಮತ್ತೀ ಊರಿಗೆ ಬರುತ |
ಜಿತ್ತಪ್ಪನ ಪರಿಕೀಸುತ |
ಇತ್ತು ಆಶ್ರಮ ಜಿತಾಮಿತ್ರರೆಂದು |
ಮೂರ್ತಿ ಶ್ರೀ ಲಕುಮೀಶನ ಕೊಡೆ |
ಭಕ್ತಿಯಿಂದಲಿ ಒಲಿಸಿ ಗೋನದ |
ಉತ್ತಮ ತರು ಕೃಷ್ಣೆಯಲಿ ನಿಂತೆ | ೩ |


I jagadali divya tEjO mahime bIrida |
SrI jitAmitrara namipe |pa|

mUjagAdhipa rUpi jalajakke |
sOjigadiMda tAvu uNisuta |
SrI jagadguru madhvarAyara |
naija kRupeyanu paDedu mereda |a.pa|

hattAvatArana uttama olimeyali |
kRuttivAsAMSa kShitiyali |
yetti janma jittappa nAmadi |
ettugaLa hUDi kRuShiya mADuta |
nitya janivAra dharisi UTadi |
matte tegeyuta dharipa vRuttiyuLLa | 1 |

SrI vibudhEMdraru I Urige baralu |
nOvinItana Baginiyu |
BAva SuddhIli yatiya moreyiDe |
ThAvilItana karedu SAsise |
SrI vara narahariya sAligrAma |
tAvu koTTu uNisenna uNiside |2 |

sutti dESava gurugaLu mattI Urige baruta |
jittappana parikIsuta |
ittu ASrama jitAmitrareMdu |
mUrti SrI lakumISana koDe |
BaktiyiMdali olisi gOnada |
uttama taru kRuShNeyali niMte | 3 |

Leave a Reply

Your email address will not be published. Required fields are marked *

You might also like

error: Content is protected !!