Composer : Shri Purandara dasaru
ರಾಗಿ ತಂದಿರಾ – ಭಿಕ್ಷಕೆ – ರಾಗಿ ತಂದಿರಾ || ಪ.||
ಯೋಗ್ಯರಾಗಿ ಭೋಗ್ಯರಾಗಿ |
ಭಾಗ್ಯವಂತರಾಗಿ ನೀವು ||ಅ.ಪ||
ಅನ್ನದಾನವ ಮಾಡುವರಾಗಿ |
ಅನ್ನ ಛತ್ರವನಿಟ್ಟವ ರಾಗಿ ||
ಅನ್ಯವಾರ್ತೆಯ ಬಿಟ್ಟವರಾಗಿ |
ಅನುದಿನ ಭಜನೆಯ ಮಾಡುವರಾಗಿ ||೧||
ಮಾತಾಪಿತರನು ಸೇವಿಪರಾಗಿ |
ಪಾಪ ಕರ್ಮವ ಬಿಟ್ಟವರಾಗಿ |
ರೀತಿಯ ಬಾಳನು ಬಾಲುವರಾಗಿ |
ನೀತಿ ಮಾರ್ಗದಲಿ ಖ್ಯಾತರಾಗಿ ||೨||
ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ ||
ಗುರುವಿನ ಪಾದವ ಸ್ಮರಿಸುವರಾಗಿ |
ಪ್ರಾಣ ರಾಯರ ದಾಸರಾಗಿ ||೩||
ಕಾಮಕ್ರೋಧಗಳ-ನಳಿದವರಾಗಿ |
ನೇಮ ನಿಷ್ಠೆಗಳ ಮಾಡುವರಾಗಿ ||
ರಾಮನಾಮವ ಜಪಿಸುವರಾಗಿ |
ಪ್ರೇಮದಿ ಕುಣಿಕುಣಿದಾಡುವರಾಗಿ ||೪||
ಸಿರಿ ರಮಣನ ಸದಾ ಸ್ಮರಿಸುವರಾಗಿ |
ಕುರುಹಿಗೆ ಬಾಗೋರಂತವರಾಗಿ ||
ಕರೆಕರೆ ಸಂಸಾರವ ನೀಗುವರಾಗಿ |
ಪುರಂದರ ವಿಠಲನ ಸೇವಿಪರಾಗಿ ||೫||
rAgi taMdirA – bhikShake – rAgi taMdirA || pa.||
yOgyarAgi bhOgyarAgi |
bhAgyavaMtarAgi nIvu ||a.pa||
annadAnava mADuvarAgi |
anna CatravaniTTava rAgi ||
anyavArteya biTTavarAgi |
anudina bhajaneya mADuvarAgi ||1||
mAtApitaranu sEviparAgi |
pApa karmava biTTavarAgi |
rItiya bALanu bAluvarAgi |
nIti mArgadali KyAtarAgi ||2||
guru kAruNyava paDedavarAgi
guruvina marmava tiLidavarAgi ||
guruvina pAdava smarisuvarAgi |
prANa rAyara dAsarAgi ||3||
kAmakrOdhagaLa-naLidavarAgi |
nEma niShThegaLa mADuvarAgi ||
rAmanAmava japisuvarAgi |
prEmadi kuNikuNidADuvarAgi ||4||
siri ramaNana sadA smarisuvarAgi |
kuruhige bAgOraMtavarAgi ||
karekare saMsArava nIguvarAgi |
puraMdara viThalana sEviparAgi ||5||
Leave a Reply