Naale baruvenendu

Composer : Shri Gopaladasaru

By Smt.Shubhalakshmi Rao

ನಾಳೆ ಬರುವೆನೆಂದು ಹೇಳಿ ಮಧುರೆಗೆ
ಪೋಗಿ ಬಹಳ ದಿನವಾಯಿತಲ್ಲೊ ಉದ್ಧವ [ಪ]

ಕೇಳಿದ್ಯಾ ನೀ ಬಾಹವೇಳೆಯಲಿ ಕೃಷ್ಣನ
ಆಲೋಚನೆಯೊಳಿದ್ದೆವೊ ಉದ್ಧವ [ಅ.ಪ]

ಪಳ್ಳಿವಾಸಿಗಳ್ ನಾವು ಪರಿಪರಿ ಅಲಂಕರಿಸಿ
ಒಲಿಸಿಕೊಂಬುದನರಿಯೆವೊ ಉದ್ಧವ |
ಗೊಲ್ಲ ಸತಿಯರು ಸದಾ ಗೋರಕ್ಷಕರು
ಮೈಯೆಲ್ಲ ತೊಳೆಯಲರಿಯೆವೊ ಉದ್ಧವ |
ಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯ-
ನೆಲ್ಲ ತಿಳುಹಿಸಿಕೊಂಡೆವೊ ಉದ್ಧವ |
ಚಲ್ಲೆಗಂಗಳ ಚಪಲೆಯರು ಮಧುರೆ
ನಾರಿಯರ ಒಲುವಿಗೆ ನಾವೆದುರೇನೊ ಉದ್ಧವ |೧|

ಚೊಕ್ಕನಾದ ನಿತ್ಯ ತೃಪ್ತನಿಗೆ ಬೆಣ್ಣೆ
ಕಳವಿಕ್ಕಿದೆವಲ್ಲವೊ ಉದ್ಧವ |
ಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆ
ಸೊಕ್ಕಿನುಕ್ತಿಯ ನುಡಿದೆವೊ ಉದ್ಧವ |
ಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆ
ದಕ್ಕಿದನು ಎಂತಿದ್ದೆವೊ ಉದ್ಧವ |
ವಕ್ರಗತಿಯಾಗಿ ಅಕ್ರೂರ ಬಂದ್ಯೆಮ್ಮ
ಚಕ್ರಧರನಗಲಿಸಿದನೊ ಉದ್ಧವ |೨|

ಧೀರ ಸ್ವರಮಣ ದೋಷ ದೂರನ್ನ ಅಲ್ಪ
ಬಹು ಜಾರನೆಂದರಿತೆವಲ್ಲೊ ಉದ್ಧವ |
ಆರಾರ ಮನಕಿನ್ನು ತೋರದವನ ನಮ್ಮ
ಓರಗೆಯವನೆಂದರಿದೆವೊ ಉದ್ಧವ |
ಮುರಾರಿ ಅಜಪರಿವಾರದೊಡೆಯನ ನಾವು
ಪೋರನೆಂದಾಡಿಸಿದೆವೊ ಉದ್ಧವ |
ನಾರಿಯರು ನಾವಲ್ಪ ದಾರಿದ್ರ್ಯರಿಗೆ
ಶ್ರೀರಮಣನೆಂತೊದಗುವನೊ ಉದ್ಧವ |೩|

ನಿಧಿಯ ಬದಿಲಿದ್ದರು ವಿಧಿಸುವುದನರಿಯದೆ
ಮದಡೆಯರಾದೆವೊ ಉದ್ಧವ |
ಮದನನಾಟಕೆ ಮನವಿಕ್ಕಿ ಅವನಿಂದೊಂದು
ತತ್ವ ತಿಳಿಯಲಿಲ್ಲೊ ಉದ್ಧವ |
ಚದುರೆಯರು ನಮ್ಮ ಬಿಟ್ಟು ಕದಲನಿವನೆಂತೆಂಬ
ಮದದಿ ಮೋಸ ಪೋದೆವೊ ಉದ್ಧವ |
ಮಧುರೆಯಿಂದೆಮ್ಮ ತಮ್ಮ ಹೃದಯನೊಳಿಪ್ಪ-
ನೆಂದು ಚದುರ ಪೇಳಿಹನಂತೆಲೊ ಉದ್ಧವ |೪|

ಮತಿ ತಪ್ಪಿದೆವೊ ನಾವು ಸತಿಯರೆಲ್ಲೊಂದಾಗಿ
ರಥವ ನಿಲ್ಲಿಸದೆ ಪೋದೆವೊ ಉದ್ಧವ |
ಹಿತರಾರು ನಮಗೆ ಸಾರಥಿ ನಿನ್ನ ಸಹಾಯ
ದೊರೆತರೆತನವೆ ಮಾಳ್ಪೆವೊ ಉದ್ಧವ |
ಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ
ಶ್ರೀಪತಿಯು ಬಂದೊದಗುವಂತೆ ಉದ್ಧವ |
ಗತಿಯಾರೊ ಅವನ್ ಹೊರತು ಗೋಪಾಲವಿಠಲ
ಅಚ್ಯುತನ ಮಹಿಮೆ ಕಾಣೆವೊ ಉದ್ಧವ |೫|


nALe baruveneMdu hELi madhurege
pOgi bahaLa dinavAyitallo uddhava [pa]

kELidyA nI bAhavELeyali kRuShNana
AlOcaneyoLiddevo uddhava [a.pa]

paLLivAsigaL nAvu paripari alaMkarisi
olisikoMbudanariyevo uddhava |
golla satiyaru sadA gOrakShakaru
maiyella toLeyalariyevo uddhava |
ballidana sahavAsa mADyavana mahimeya-
nella tiLuhisikoMDevo uddhava |
callegaMgaLa capaleyaru madhure
nAriyara oluvige nAvedurEno uddhava |1|

cokkanAda nitya tRuptanige beNNe
kaLavikkidevallavo uddhava |
sikkisikoMDu rAsakrIDeyoLavage
sokkinuktiya nuDidevo uddhava |
kakkulAtili kAmAsaktarigiva namage
dakkidanu eMtiddevo uddhava |
vakragatiyAgi akrUra baMdyemma
cakradharanagalisidano uddhava |2|

dhIra svaramaNa dOSha dUranna alpa
bahu jAraneMdaritevallo uddhava |
ArAra manakinnu tOradavana namma
OrageyavaneMdaridevo uddhava |
murAri ajaparivAradoDeyana nAvu
pOraneMdADisidevo uddhava |
nAriyaru nAvalpa dAridryarige
SrIramaNaneMtodaguvano uddhava |3|

nidhiya badiliddaru vidhisuvudanariyade
madaDeyarAdevo uddhava |
madananATake manavikki avaniMdoMdu
tatva tiLiyalillo uddhava |
cadureyaru namma biTTu kadalanivaneMteMba
madadi mOsa pOdevo uddhava |
madhureyiMdemma tamma hRudayanoLippa-
neMdu cadura pELihanaMtelo uddhava |4|

mati tappidevo nAvu satiyarelloMdAgi
rathava nillisade pOdevo uddhava |
hitarAru namage sArathi ninna sahAya
doretaretanave mALpevo uddhava |
pathava tOriso namage muMdemma celva
SrIpatiyu baMdodaguvaMte uddhava |
gatiyAro avan horatu gOpAlaviThala
acyutana mahime kANevo uddhava |5|

Leave a Reply

Your email address will not be published. Required fields are marked *

You might also like

error: Content is protected !!