Hejje nodona baare

Composer : Shri Vadirajaru

By Smt.Shubhalakshmi Rao

ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನ
ಗೆಜ್ಜೆಯ ಕಾಲಿನ ಅರ್ಜುನ ಸಾರಥಿ
ಮೂರ್ಜಗದೊಡೆಯನ [ಪ]

ಮಚ್ಛನಾಗಿ ವೇದವ ತಂದವನಂತೆ
ಕೂರ್ಮನಾಗಿ ಭೂಧರ ಪೊತ್ತವನಂತೆ
ವರಹ ನರಹರಿಯಾಗಿ ದುರುಳರ ಸೀಳಿದ
ಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ (೧)

ಸೂರ್ಯಕೋಟಿ ಪ್ರಕಾಶದಿ ಮೆರೆವನ
ಚಂದ್ರಕೋಟಿ ಶೀತಲದಿಂದ ಬರುವನ
ಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳು
ಚೆಂದದಿಂದ ಕೊಳಲನೂದುತ ಬರುತಿಹ (೨)

ಮಾತೃ ದ್ರೋಹವ ಮಾಡಿದ ಪರಶುರಾಮನ
ಪಿತೃವಾಕ್ಯವ ಸಲಿಸಿದ ಶ್ರೀರಾಮನ
ಕೃಷ್ಣಾವತಾರನ ಬೌದ್ಧ ಸ್ವರೂಪನ
ಹಯವನೇರಿದ ಕಲ್ಕಿ ಹಯವದನನ ದಿವ್ಯ (೩)


hejje nODONa bAre gOpAlakRuShNana
gejjeya kAlina arjuna sArathi
mUrjagadoDeyana [pa]

macCanAgi vEdava taMdavanaMte
kUrmanAgi BUdhara pottavanaMte
varaha narahariyAgi duruLara sILida
celuva rUpadi dAnava bEDi tuLida puTTa (1)

sUryakOTi prakASadi merevana
caMdrakOTi SItaladiMda baruvana
maMdeya kAyuta maiyyella dhULgaLu
ceMdadiMda koLalanUduta barutiha (2)

mAtRu drOhava mADida paraSurAmana
pitRuvAkyava salisida SrIrAmana
kRuShNAvatArana bauddha svarUpana
hayavanErida kalki hayavadanana divya (3)

Leave a Reply

Your email address will not be published. Required fields are marked *

You might also like

error: Content is protected !!