Composer : Shri Purandara dasaru
ಬಣ್ಣಿಸಿ ಗೋಪಿ ತಾ ಹರಸಿದಳು || ಪ ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ ||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಾಯದ ಖಳರ ಮರ್ದನ ನೀನಾಗು ||
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀನೊಡೆಯನಾಗೆನುತ || ೧ ||
ಧೀರನು ನೀನಾಗು ಅತಿ ದಯಾಂಬುಧಿಯಾಗು |
ಆ ರುಕ್ಮಿಣಿಗೆ ಅರಸು ನೀನಾಗೆನುತ ||
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತ || ೨ ||
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದೇವ ನೀನಾಗು ||
ಶ್ರೀನಿವಾಸ ನೀನಾಗು ಶ್ರೀನಿಧಿ ನೀನಾಗು |
ಜ್ಞಾನಿ ಪುರಂದರವಿಠಲ ನಾಗೆನುತ || ೩ ||
baNNisi gOpi tA harasidaLu || pa ||
eNNeyanottuta yadukula tilakage || a.pa ||
AyuShyavaMtanAgu ati ballidanAgu |
mAyada KaLara mardana nInAgu ||
rAyara pAlisu rakkasara sOlisu |
vAyasutage nInoDeyanAgenuta || 1 ||
dhIranu nInAgu ati dayAMbudhiyAgu |
A rukmiNige arasu nInAgenuta ||
mArana pitanAgu madhusUdananAgu |
dvArAvatige nI doreyAgenuta || 2 ||
AnaMda nInAgu acyuta nInAgu |
dAnavAMtakanAgu dEva nInAgu ||
SrInivAsa nInAgu SrInidhi nInAgu |
j~jAni puraMdaraviThala nAgenuta || 3 ||
Leave a Reply