Composer : Shri Vidyaprasanna Tirtharu
ಮುರಳಿ ಬಾರಿಸೊ ಮಾಧವ ಕುಣಿಯುವೆ
ಮುರಳಿ ಬಾರಿಸೊ ಮಾಧವ [ಪ]
ಭವದ ಸಂತಾಪವು ಕೊನೆಗಾಣಲಿ
ಭುವಿಯೊಳು ಜೀವನ ಸವಿಯಾಗಲಿ
ನವವಿಧ ಭಕುತಿಯು ಹರಿದಾಡಲಿ
ಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ (೧)
ಅರಿಷಡ್ವರ್ಗಳೆಲ್ಲ ಮರೆಯಾಗಲಿ
ಹರುಷ ಮಾನಸದಲ್ಲಿ ಸೆರೆಯಾಗಲಿ
ಮುರಳಿಯ ಧ್ವನಿಯು ತಾ ದೊರೆಯಾಗಲಿ
ಪರಮ ವೈರಾಗ್ಯವೆ ಸಿರಿಯಾಗಲಿ ದೇವ (೨)
ಸಾಲೋಕ್ಯ ಸಾರೂಪ್ಯ ಸಾಯುಜ್ಯವು
ಈ ಲೋಕದಲ್ಲಿಹ ಈ ಲಾಭವು
ಶ್ರೀಲೋಲ ಗೊಪಾಲ ಬಾಲ ಪ್ರಸನ್ನನೆ
ಮೇಲಾಯಿತು ನರಜನ್ಮವಿರಲಿ ಎಂದೆಂದಿಗೂ (೩)
muraLi baariso mAdhava kuNiyuve
muraLi baariso mAdhava [pa]
bhavada saMtApavu konegANali
bhuviyoLu jIvana saviyAgali
navavidha bhakutiyu haridADali
kivi tuMba kELi nA naliyuve shrIkara (1)
ariShaDvargaLella mareyAgali
haruSha mAnasadalli sereyAgali
muraLiya dhvaniyu tA doreyAgali
parama vairAgyave siriyAgali dEva (2)
sAlOkya sArUpya sAyujyavu
ee lOkadalliha ee lAbhavu
shrIlOla gopAla bAla prasannane
mElAyitu narajanmavirali eMdeMdigU (3)
Leave a Reply