Kadana vatsava hari

Composer : Shri Vijayadasaru

By Smt.Shubhalakshmi Rao

ಕಾದನಾ ವತ್ಸವ ಹರಿ ಕಾದನಾ |
ಮೋದದಿಂದ ಮಾಧವ ||ಪ||

ವೇದವೇದ್ಯ ಸಾಧುವಿನುತ ರಾಧಿಕಾ
ರಮಣ ಕೃಷ್ಣ ||ಅ.ಪ.||

ಎಳೆ ಗರಿಕೆ ಇರುವ ಸ್ಥಳದಿ
ನೆರೆದು ವತ್ಸಗಳನೆ ನಿಲಿಸಿ |
ಕೊಳಲು ಕೈಲಿ ಪಿಡಿದು
ಮುರಳಿಗಾನ ಮಾಡುತ್ತಾ
ತನ್ನ ಶೆರಗು ತೆಗೆದು ಕೃಷ್ಣ
ಕರುಗಳನ್ನೆ ಬೆನ್ನೊರಿಸಿ |
ತಿನ್ನು ತಿನ್ನು ಹುಲ್ಲು ಯೆನುತ
ತನ್ನ ಕರಗಳೊತ್ತುತ್ತ (೧)

ಉಡುಗಳಂತೆ ಕರಗಳು ನಡುವೆ
ಚಂದ್ರ ಧರೆಯೊಳು |
ಪೊಡವಿಯೊಳಗೆ ಬೆಳಗಲು
ಆ ಮೃಡನು ಕೊಂಡಾಡಲು
ಒಂದು ತಿಂಗಳ ಕರುಗಳು
ಇಂದಿರೇಶನು ಮೇಯಿಸಲು |
ಒಂದು ವರುಷ ಕರುಗಳಂತೆ
ಆನಂದದಿಂದ ಬೆಳೆದವು (೨)

ಕನಕ ರಜತ ಸರಪಳಿ ಆ
ದನಕರುಗಳ ಕೊರಳಲ್ಲಿ |
ಮಿನುಗುತಿಪ್ಪ ಅರಳೆಲೆ
ಅನೇಕ ನಾದದಿಂದಲಿ
ಅಜಗಳಂತಿದ್ದ ಕರುಗಳು
ಗಜಗಳಂತೆ ಆದವು |
ತ್ರಿಜಗದೊಡೆಯ ವಿಜಯವಿಠಲ
ವ್ರಜಕೆ ದೊರೆಯಾಗಿ ತಾ (೩)


kAdanA vatsava hari kAdanA |
mOdadiMda mAdhava ||pa||

vEdavEdya sAdhuvinuta rAdhikA
ramaNa kRuShNa ||a.pa.||

eLe garike iruva sthaLadi
neredu vatsagaLane nilisi |
koLalu kaili piDidu
muraLigAna mADuttA
tanna Seragu tegedu kRuShNa
karugaLanne bennorisi |
tinnu tinnu hullu yenuta
tanna karagaLottutta (1)

uDugaLaMte karagaLu naDuve
caMdra dhareyoLu |
poDaviyoLage beLagalu
A mRuDanu koMDADalu
oMdu tiMgaLa karugaLu
iMdirESanu mEyisalu |
oMdu varuSha karugaLaMte
AnaMdadiMda beLedavu (2)

kanaka rajata sarapaLi A
danakarugaLa koraLalli |
minugutippa araLele
anEka nAdadiMdali
ajagaLaMtidda karugaLu
gajagaLaMte Adavu |
trijagadoDeya vijayaviThala
vrajake doreyAgi tA (3)

Leave a Reply

Your email address will not be published. Required fields are marked *

You might also like

error: Content is protected !!