Composer : Shri Shripadarajaru
ಇಕ್ಕೋ ನೋಡೆ ರಂಗನಾಥನ ಪುಟ್ಟ ಪಾದವ ||ಪ||
ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯ ಪಾದವ ||ಅ.ಪ||
ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ
ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ
ಪಂಕಜಾಸನನ ಹೃದಯದಲ್ಲಿ ನಲಿವ ಪಾದವ
ಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧||
ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವ
ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ
ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ
ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨||
ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ
ಬಂಡಿಲಿದ್ದ ಶಕಟಾಸುರನ ಒದ್ದ ಪಾದವ
ಅಂಡಜ ಹನುಮರ ಭುಜದೊಳು ಒಪ್ಪುವ ಪಾದವ
ಕಂಡೆವೆ ನಾವು ಶ್ರೀರಂಗವಿಠಲನ ದಿವ್ಯಪಾದವ ||೩||
ikkO nODe raMganAthana puTTa pAdava ||pa||
sikkite SrI lakShmIpatiya divya pAdava ||a.pa||
SaMKa cakra gadA padma aMkita pAdava
aMkuSa kuliSa dhvajarEKA aMkita pAdava
paMkajAsanana hRudayadalli naliva pAdava
saMkaTaharaNa veMkaTESana divya pAdava ||1||
lalane lakShmiyaMkadalli naliva pAdava
jalajAsanana aBIShTavella salisuva pAdava
mallara gelidu kaMsAsurana koMda pAdava
baliya meTTi BAgIrathiya paDeda pAdava ||2||
baMDeya bAleya mADida uddaMDa pAdava
baMDilidda SakaTAsurana odda pAdava
aMDaja hanumara BujadoLu oppuva pAdava
kaMDeve naavu SrIraMgaviThalana divyapAdava ||3||
Leave a Reply