Composer : Shri Gopala dasaru
ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ ಬಿಡಿಸಿ
ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ||
ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿದೆಯಾಗಿ
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೆ ||೧||
ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸಿರಿದ ನೆಲವೊ ಸರ್ವಕಾಲ ನಿನ್ನೊಡೆತನ ಎಂಬುವ ಬಗೆಯನು ಅರಿಯದೆ ||೨||
ನೆರೆನಂಬಿದ ಪಾವಟೆಗಳು ಎಲ್ಲಾ ಸರಿದು ಪೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತೂ ಇಲ್ಲ
ಪರಿಪರಿ ವಿಷಯದ ಆಸೆಯು ಎನಗೆ ಹಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ||೩||
ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ||೪||
ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳಿದ ಹರಿಕಥೆ ಸಂಯೋಗವೆಂಬೋದಿಲ್ಲ
ನೀಗುವಂಥ ಭವಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೇ ಬೇಡಿಕೊಂಬೆ ||೫||
hyAMge mADalayyA kRuShNa pOgutide AyuShya
maMgaLAMga BavaBaMga biDisi
ninna DiMgarigana mADo anaMgajanaka ||pa||
Esu janumada sukRutada Palavo tAnu janisalAgi
BUsura dEhada janumavu enage saMBavideyAgi
mOdatIrtha mata cihnitanAgade dOShake oLagAgi
lESa sAdhanava kANade dussahavAsadiMdalE dinadina kaLede ||1||
SaSimuKi kanakada Asege beretu vasupati ninnaDiya
hasanAgi ninna neneyade kRupeya gaLisade keTTenayya
niSihagalu sthiraveMdu tanuvanu pOShisalASisi jIya
usirida nelavo sarvakAla ninnoDetana eMbuva bageyanu ariyade ||2||
nerenaMbida pAvaTegaLu ellA saridu pOdavalla
maraLi I pari janumavu baruva BaravaseyaMtU illa
paripari viShayada Aseyu enage hiridu Ayitalla
hariye jagadi nInobbanallade porevarinnAru illavalla ||3||
avaniyoLage puNyakShEtra carisuva havaNike enagilla
pavanAtmaka guru madhva SAstrada pravacana kELalilla
tavakadiMda guruhiriyara sEvisi avara olisalilla
ravinaMdana kELidaruttara koDe vivara saraku oMdAdarilla ||4||
BAgavataroDagUDi upavAsa jAgara oMdina mADalilla
rAgadi Sukamuni pELida harikathe saMyOgaveMbOdilla
nIguvaMtha BavaBayava Bakuti vairAgyaveMbOdilla
yOgivaMdya gOpAlaviThala talebAgi ninnanE bEDikoMbe ||5||
Leave a Reply