Guru bhagya

Composer : Shri Gurugovinda vittala on Shri Tande muddumohana dasaru

By Smt.Shubhalakshmi Rao

ಗುರು ಭಾಗ್ಯ ಗುರುಭಾಗ್ಯ |
ಗುರು ಭಾಗ್ಯವಯ್ಯಾ [ಪ]

ನರಹರಿಯ ಕಲ್ಯಾಣ
ಪರಿಕಿಸುವ ಸೌಭಾಗ್ಯ [ಅ.ಪ]

ಸಿರಿಭೂಮಿ ದೇವಿ ಸಹ | ವರಭೋಗ ನರಹರಿಯ
ಪರಮ ಕಲ್ಯಾಣವೂ | ಜರುಗುತ್ತಿರುವುದನೂ
ಗುರು ಭಕ್ತರೊಡವೆರೆಸಿ | ಪರಿಕಿಸುವ ಪರಿಯಾಯ್ತು
ವರ ಸುಜನ ಸಂಗ ಫಲ | ವರ್ಣಿಸಲು ಅಳವೇ [೧]

ಕರಿಗಿರಿಯ ವರಭೋಗ | ನರಹರಿಯ ಕರುಣದಲಿ
ಪರಮ ಪ್ರಿಯರೆಂದೆನಿಪ | ಗುರು ಕಾರುಣ್ಯದೀ |
ಎರಡು ನಾಲ್ಕರ ಮಾಸ | ವರಸಪ್ತ ಸಿತ ಪಕ್ಷ
ವರರವಿಯ ದಿನ ಝಾವ | ಎರಡು ಮೂರರ ಮೇಲೆ [೨]

ಸೀತೆಪತಿ ರಾಮನಾ | ದೂತರ ಪ್ರೇರಣೆಯ
ಮಾತುಗಳು ಮತ್ತೆ ಗುರು | ಜಾತರುಕುತಿಗಳಾ |
ಆತು ಅಂಕಿತ ಮಾಲೆ | ಪ್ರೀತಿಯಿಂ ಗುರುದತ್ತ
ಶ್ರೀ ತಂದೆ ಮುದ್ದು ಮೋಹನ್ನ | ವಿಠಲಗರ್ಪಿಸಿದೆ [೩]

ತತುವ ಸುವ್ವಾಲಿ ಪರಿ | ವಿತತವಾಗಿರುವಂಥ
ಶತ ದಶದ ಮೇಲಾಗಿ | ಕೃತಗಳಾಗಿರುವಾ
ಕೃತಿಗಳನು ಪೋಣಿಸುತ | ತುತಿಸಿ ಭಕುತಿಯಲಿಂದ
ಕೃತಿ ಪತಿಯ ಕೊರಳಿಗ | ರ್ಪಿತವು ಎಂದೆನುವಾ [೪]

ಗುರುಗೋವಿಂದ ವಿಠಲನ | ಚರಣ ಯುಗ ಕಾಂಬಂಥ
ವರ ಮಾರ್ಗ ತೋರಿರುವ | ಪರಮ ಜ್ಞಾನಿಗಳಾ
ಕರುಣ ಕಿನ್ನೆಣೆಯುಂಟೆ | ಎರಡೊಂದು ಲೋಕದಲಿ
ಗುರು ಪಾದ ಸಂಸ್ಮರಿಸಿ | ಸ್ಮರಿಸಿ ಸುಖಿಯಾದೇ [೫]


guru BAgya guruBAgya |
guru BAgyavayyA [pa]

narahariya kalyANa
parikisuva sauBAgya [a.pa]

siriBUmi dEvi saha | varaBOga narahariya
parama kalyANavU | jaruguttiruvudanU
guru BaktaroDaveresi | parikisuva pariyAytu
vara sujana saMga Pala | varNisalu aLavE [1]

karigiriya varaBOga | narahariya karuNadali
parama priyareMdenipa | guru kAruNyadI |
eraDu nAlkara mAsa | varasapta sita pakSha
vararaviya dina JAva | eraDu mUrara mEle [2]

sItepati rAmanA | dUtara prEraNeya
mAtugaLu matte guru | jAtarukutigaLA |
Atu aMkita mAle | prItiyiM gurudatta
SrI taMde muddu mOhanna | viThalagarpiside [3]

tatuva suvvAli pari | vitatavAgiruvaMtha
Sata daSada mElAgi | kRutagaLAgiruvA
kRutigaLanu pONisuta | tutisi BakutiyaliMda
kRuti patiya koraLiga | rpitavu eMdenuvA [4]

gurugOviMda viThalana | caraNa yuga kAMbaMtha
vara mArga tOriruva | parama j~jAnigaLA
karuNa kinneNeyuMTe | eraDoMdu lOkadali
guru pAda saMsmarisi | smarisi suKiyAdE [5]

Leave a Reply

Your email address will not be published. Required fields are marked *

You might also like

error: Content is protected !!