Composer : Shri Jayesha vittala
ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆ
ಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ|
ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |
ಅಮಿತ ಬಂಧು ಕರುಣ ಸಿಂಧು ಮುದದಿ ಪಾಲಿಸೊ |೧|
ವಿಮ್ಲಮಾಡು ಹೃದಯ ಎನ್ನ ಶ್ರಮದ ಸಿಂಧು ಬತ್ತಿಸಯ್ಯ |
ಭ್ರಮೆಯ ಕಳೆದು ಭಾಗ್ಯ ನೀಡು ನೈಜ ಕರುಣದಿ |೨|
ಖ್ಯಾತ ಕೀರ್ತಿವಂತ ಸತತ ಭೂತನಾಥ ಸಖನೆ
ಎನ್ನ ಆತುರಕ್ಕೆ ಒದಗಿ ಸಲಹೊ ಆರ್ಯ ಮಂದಿರ |೩|
ಯಾತರವನು ಅಲ್ಲ ನಾನು ಪ್ರಾತ್ಯ ಮನದ ಸ್ವಪಚ ದೀನ
ನಾದ ದೂತ ರಂಗ ಧುಳಿ ರಕ್ಷಿಸೊ |೪|
ಕೃಷ್ಣಾ ನಿನಗೆ ಸತತ ನಮ್ಮ ಇಷ್ಟ ಸಿದ್ಧಿ ಮುಖ್ಯವೆಂದು
ಶಿಷ್ಟನಾದ ಮಧ್ವಮುನಿಯು ಪೇಳಿಹನು ಲಾಲಿಸೊ |೫|
ಇಷ್ಟದಾತ ಅರಿಷ್ಟ ಹರಣ ನಿಷ್ಟೇಯೀವ ಜಯೇಶ ವಿಠಲ
ತುಷ್ಟನಾಗಿ ಮಾತಣಾಡು ತಡವ ಮಾಡದೆ |೬|
gOkulEsha enna dOSha bhIkarAva nenasalAre
sAku sAku kShEma karta sharaNu shreeshanE |pa|
amita abhaya dAta vAta hRudayakamala sUrya sharaNu |
amita baMdhu karuNa siMdhu mudadi pAliso |1|
vimlamADu hRudaya enna shramada siMdhu battisayya |
bhrameya kaLedu bhAgya neeDu naija karuNadi |2|
khyAta keertivaMta satata bhUtanAtha sakhane
enna Aturakke odagi salaho Arya maMdira |3|
yAtaravanu alla nAnu prAtya manada svapacha dIna
nAda dUta raMga dhuLi rakShiso |4|
kRuShNA ninage satata namma iShTa siddhi mukhyaveMdu
shiShTanAda madhvamuniyu pELihanu lAliso |5|
iShTadAta ariShTa haraNa niShTEyIva jayEsha viThala
tuShTanAgi mAtaNADu taDava mADade |6|
Leave a Reply