Composer : Shri Purandara dasaru
ಏನು ಹೇಳಲಿ ನಾನು ಕೃಷ್ಣನ ಮಹಿಮೆ,
ಯಾರಿಗೂ ತಿಳಿಯದಮ್ಮ [ಪ]
ಹೊತ್ತಾರೆದ್ದು ಯಶೊದೆ
ಮುತ್ತು ಪೋಣಿಸುತಿದ್ದಳು
ಹತ್ತಿಲಿದ್ದ ಕೃಷ್ಣ ಬಂದು ಒಂದು
ಮುತ್ತು ತೆಗೆದು ಕೊಂಡು
ಸುತ್ತಲಿದ್ದ ಹುಡುಗರ ಸಹಿತ
ಹಿತ್ತಲೊಳಗೆ ದಿಟ್ಟ ಪೋದ (೧)
ಪರಿ ಪರಿ ಚಿಂತೆಯಿಂದ
ಯಶೋದೆ ನಾರಿಯರ ಕಳುಹಿದಳು
ಸಂದು ಸಂದಿಲಿ ಹುಡುಕಿ ಹುಡುಕಿ
ಕಂದ ಕಾಣಾನೆಂದು ಬರಲು
ಒಂದು ಕ್ಷಣದಲಿ ಕೃಷ್ಣ
ಬಂದು ಯೆದುರಾಗಿ ನಿಂತ (೨)
ಕಂದಯ್ಯನ ಕರ ಪಿಡಿದು
ಯಶೋದೆ ಕರೆತಂದಳು ಅರಮನೆಗೆ
ಕಂದ ಬಹಲ ಹಸಿದನೆಂದು,
ತುತ್ತು ಮಾಡಿ ಉಣಿಸಿದಳು
ಮುತ್ತು ಏನು ಮಾಡಿದೆಯೆಂದು
ಸಿಟ್ಟಿನಿಂದ ಕೇಳಿದಳು (೩)
ಹೆತ್ತ ತಾಯ ಕರೆದು ಕೊಂಡು,
ಹಿತ್ತಲೊಳಗೆ ಮುತ್ತಿನ ಗಿಡ ತಿರಿಸಿದ
ಬಂಟೆ ಬಂಟೆಗೆ ಎಂಟು ಎಂಟು
ಗೊಂಚು ಗೊಂಚು ಹೋಲುತಿರಲು
ಕಡಿದು ಕಡಿದು ರಾಶಿ ಹಾಕಿದ
ಪರಮ ಪುರಂದರ ವಿಠಲ ರಾಯ (೪)
Enu hELali naanu kRuShNana mahime,
yaarigoo tiLiyadamma [pa]
hottAreddu yashode
muttu pONisutiddaLu
hattilidda kRuShNa baMdu oMdu
muttu tegedu koMDu
suttalidda huDugara sahita
hittaloLage diTTa pOda (1)
pari pari chiMteyiMda
yashOde nAriyara kaLuhidaLu
saMdu saMdili huDuki huDuki
kaMda kANAneMdu baralu
oMdu kShaNadali kRuShNa
baMdu yedurAgi niMta (2)
kaMdayyana kara piDidu
yashOde karetaMdaLu aramanege
kaMda bahala hasidaneMdu,
tuttu mADi uNisidaLu
muttu Enu mADideyeMdu
siTTiniMda kELidaLu (3)
hetta taaya karedu koMDu,
hittaloLage muttina giDa tirisida
baMTe baMTege eMTu eMTu
goMchu goMchu hOlutiralu
kaDidu kaDidu rAshi hAkida
parama puraMdara viThala raaya (4)
Leave a Reply