Composer : Shri Vadirajaru
ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ|
ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದು
ಸಿದ್ದರಾದರು ಏನು ಮಾಡಿದನು ಪಾಪಿ ಮೂಢ
ಶಕುನಿಯ ಮಾತು ಕೇಳಿ
ಆಡಿ ಪಗಡೆ ಸೋಲಿಸಿ ಅವರನು
ಅಡವಿಗಟ್ಟಿದ ದುಷ್ಟ ದುರ್ಯೋಧನನು |೧|
ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯ
ನೀವು ಕಳುಹಿಸುತಿರೆ ಹೀಗೆ ಧನವು
ದ್ರವ್ಯವು ಇದ್ದ ಇವನಿಗೆ ದಯಾಧರ್ಮ
ಎಳ್ಳಷ್ಟು ಬೇಡವೆ
ಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨|
ವಿಪ್ರರ ಮಾತು ಕೇಳಿ ದೌಮ್ಯಚಾರ್ಯರ
ಪಾದಕ್ಕೆರಗಿ
ಅವರು ಹೇಳಿದಂತೆ ಮಾಡಿದ ಧರ್ಮಜ
ಸೂರ್ಯೋಪಾಸನೆಯನ್ನು
ಕಂಡು ಸೂರ್ಯ ಪ್ರತ್ಯಕ್ಷನಾಗಿ
ಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|
ಲಕ್ಷಕೋಟಿ ಬ್ರಾಹ್ಮಣರ ಭೋಜನ
ಆಲಸ್ಯವಿಲ್ಲದಂತೆ ಮಾಡಿಸಬೇಕು
ಎಂಬ ಮಾತನು ಕೇಳಿ ಕೊಟ್ಟ ಸೂರ್ಯ
ಅಕ್ಷಯ ಪಾತ್ರೆಯ
ಸ್ವಚ್ಚವಾಗಿ ತೊಳೆದು ಪತ್ನಿಯ ಕೈಯಲ್ಲಿ ಕೊಟ್ಟ |೩|
ಅಚ್ಯುತನ ನಾಮ ನಮಗೆ ಹಾಸಿಗೆ ತಲೆದಿಂಬು
ಅಕ್ಷಯಪಾತ್ರೆಯ ಕೊಟ್ಟು ತೆರಳಿದ ಸೂರ್ಯ
ಇಷ್ಟವಾದ ವನದೊಳಗೆ
ಅಷ್ಟ್ವೈಶ್ವರ್ಯದಿಂದಿದ್ದರು ಪಂಚ ಪಾಂಡವರು |೪|
ಮುತ್ತೈದೆಯರು ಉದಯ ಕಾಲದಲಿ
ಈ ಪದವ ಹೇಳಿ ಕೇಳಿದರೆ
ಅಷ್ಟ್ವೈಶ್ವರ್ಯ ಕೊಟ್ಟು ಪುತ್ರಸಂತಾನ
ಕೊಟ್ಟು ರಕ್ಷಿಸುವ ನಮ್ಮ ಹಯವದನ |೫|
eddAru vanavAsakke buddivaMta pAMDavaru |pa|
allidda janaru alli iralArareMdu
siddarAdaru Enu mADidanu pApi mUDha
Sakuniya mAtu kELi
ADi pagaDe sOlisi avaranu
aDavigaTTida duShTa duryOdhananu |1|
nimage pagaDeyADi sOlisida vArteya
nIvu kaLuhisutire hIge dhanavu
dravyavu idda ivanige dayAdharma
eLLaShTu bEDave
lOBa mOha pASadiMda bigidukoMDaru |2|
viprara mAtu kELi daumyacAryara
pAdakkeragi
avaru hELidaMte mADida dharmaja
sUryOpAsaneyannu
kaMDu sUrya pratyakShanAgi
Enu bEku bEDu eMdu varava koTTAnu |3|
lakShakOTi brAhmaNara BOjana
AlasyavilladaMte mADisabEku
eMba mAtanu kELi koTTa sUrya
akShaya pAtreya
svaccavAgi toLedu patniya kaiyalli koTTa |4|
acyutana nAma namage hAsige talediMbu
akShayapAtreya koTTu teraLida sUrya
iShTavAda vanadoLage
aShTvaiSvaryadiMdiddaru paMca pAMDavaru |5|
muttaideyaru udaya kAladali
I padava hELi kELidare
aShTvaiSvarya koTTu putrasaMtAna
koTTu rakShisuva namma hayavadana |6|
Leave a Reply