Composer : Shri Purandara dasaru
ದುಡು ದುಡು ಓಡಿ ಬಾರೊ ದುಡುಕುಗಾರ |
ದುಡು ದುಡು ಓಡಿ ಬಾರೊ | ಪ |
ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |
ಪಾಡಿ ಮೈಮರೆತು ನಾ ನೋಡಿ ಕುಣಿವೆನು | ಅ.ಪ |
ನಲಿವೇನು ನಿನ್ನ ನೋಡಿ ನಾಲ್ಮೊಗನಯ್ಯ |
ನಳನೆಯ ಮಧ್ಯದಲಿ |
ಕಾಲ್ಗೆಜ್ಜೆ ಪೆಂಡೆಗಳು ಗಲುಗಲು ಗಲುಕೆನುತ |
ಸುಲಲಿತ ಮಹಿಮನೆ ಕೋಳಲಾ ಕೈಯ್ಯಲ್ಲಿ ಪಿಡಿದು |೧|
ಬಿಡುವೋದು ಥರವಲ್ಲವೋ ಪಾಂಡವ ಪಕ್ಷ |
ತಡವೇಕೆ ಮಾಡುವಿಯೋ |
ಬಿಡುವೋದು ಥರವಲ್ಲ ಬಿಡಬ್ಯಾಡ ಬಿಡಬ್ಯಾಡ |
ಪಂಡರಿಯಲಿ ನಿಂತ ಪುಂಡಲೀಕ ವರದ |೨|
ಗುರುತಂದೆ ಪುರಂದರ ವಿಠಲ ರಾಯ |
ವರಪೀತ ಬಲಧರ |
ನೀರಜದಳ ನೇತ್ರ ನಿಗಮರ ಸುಂದರ |
ನಲಿವೆನು ನಾ ನೋಡಿ ಗುರುವಂತರ್ಗತ ಸ್ವಾಮಿ |೩|
duDu duDu ODi bAro duDukugAra |
duDu duDu ODi bAro | pa |
duDu duDu ODi bA nODi muddADuve |
pADi maimaretu nA nODi kuNivenu | a.pa |
nalivEnu ninna nODi nAlmoganayya |
naLaneya madhyadali |
kAlgejje peMDegaLu galugalu galukenuta |
sulalita mahimane kOLalA kaiyyalli piDidu |1|
biDuvOdu tharavallavO pAMDava pakSha |
taDavEke mADuviyO |
biDuvOdu tharavalla biDabyADa biDabyADa |
paMDariyali niMta puMDalIka varada |2|
gurutaMde puraMdara viThala rAya |
varapIta baladhara |
nIrajadaLa nEtra nigamara suMdara |
nalivenu nA nODi guruvaMtargata svAmi |3|
Leave a Reply