Bande Bande govinda

Composer : Shri Gopala dasaru

By Smt.Shubhalakshmi Rao

ಬಂದೆ ಬಂದೆ ಗೋವಿಂದ ಗೋವಳ
ಬಾಂಧವ ಭಕ್ತ ವತ್ಸಲ
ಇಂದಿರೇಶ ಶ್ರೀ ವೇಂಕಟೇಶ ನಿನ್ನ
ಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೇ
ಸ್ವಾಮಿ ಬಂದೆ, ಬಂದೇ ಸ್ವಾಮಿ ಬಂದೆ |ಅ.ಪ|

ನಡೆದು ನಡೆಸುತ ನುಡಿದು ನುಡಿಸುತ
ಅಡಿಗಡಿಗೆ ಕಾಪಾಡುತ
ಒಡನೆ ಆಡುತಾ ಬಿಡದೆ ಕ್ಷಣವನು
ಸಡಗರದಲ್ಲಿ ಕರೆತರಲು
ನಾನಿಲ್ಲಿಗೆ ಬಂದೇ ಸ್ವಾಮಿ ಬಂದೆ ,
ಬಂದೇ ಸ್ವಾಮಿ ಬಂದೆ ||೧||

ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರ
ಗುಪ್ತ ಗುಣಗಣ ಪೂರ್ಣನೆ
ಪ್ರಾಪ್ತ ನೀನೆನಗಾಗ ಬೇಕೆಂದು ವ್ಯಾಪ್ತಿ
ನಿನ್ನದು ಹುಡುಕತಲಿ ನಾನಿಲ್ಲಿಗೆ
ಬಂದೇ ಸ್ವಾಮಿ ಬಂದೆ,
ಬಂದೇ ಸ್ವಾಮಿ ಬಂದೆ ||೨||

ಏನು ಕೊಡಲಿಲ್ಲ ಏನು ಬೇಡಲಿಲ್ಲ
ಏನು ಪಡೆಯಲೊ ಕರುಣಿಯೇ
ನೀನು ಕೊಟ್ಟ ಸ್ವಾತಂತ್ರ್ಯದಾ ಫಲ
ನಿನಗೆ ಅರ್ಪಿಸ ಬೇಕೆನುತ ನಾನಿಲ್ಲಿಗೆ
ಬಂದೇ ಸ್ವಾಮಿ ಬಂದೆ ,
ಬಂದೇ ಸ್ವಾಮಿ ಬಂದೆ ||೩||

ನಮೋ ನಮೋ ನಾಗಾರಿ ವಾಹನ
ನಮೋ ನಮೋ ಸುರ ಸುಪ್ರಸನ್ನನೇ
ನಮೋ ನಮೋ ಗೋಪಾಲ ವಿಠ್ಠಲ
ನಮಿಪ ಭಕ್ತರ ಸಲಹುವನೆಂದು
ಬಂದೇ ಸ್ವಾಮಿ ಬಂದೆ,
ಬಂದೇ ಸ್ವಾಮಿ ಬಂದೆ ||೪||


baMde baMde gOviMda gOvaLa
bAMdhava bhakta vatsala
iMdirEsha shrI vEMkaTEsha ninna
saMdarushanake saagi naanillige baMdE
swAmi baMde, baMdE swAmi baMde |a.pa|

naDedu naDesuta nuDidu nuDisuta
aDigaDige kApADuta
oDane ADutA biDade kShaNavanu
saDagaradalli karetaralu
naanillige baMdE swAmi baMde ,
baMdE swAmi baMde ||1||

Apta animitta vyApta sarvatra
gupta guNagaNa pUrNane
prApta nInenagAga bEkeMdu vyApti
ninnadu huDukatali naanillige
baMdE swAmi baMde,
baMdE swAmi baMde ||2||

Enu koDalilla Enu bEDalilla
Enu paDeyalo karuNiyE
nInu koTTa svAtaMtryadA phala
ninage arpisa bEkenuta naanillige
baMdE swAmi baMde ,
baMdE swAmi baMde ||3||

namO namO nAgAri vAhana
namO namO sura suprasannanE
namO namO gOpAla viThThala
namipa bhaktara salahuvaneMdu
baMdE swAmi baMde,
baMdE swAmi baMde ||4||

Leave a Reply

Your email address will not be published. Required fields are marked *

You might also like

error: Content is protected !!