Composer : Shri Purandara dasaru
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ||
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ||
ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನ
ಪಟ್ಟದ ರಾಣಿಗೆ ಹೇಳಿ ಎನಗೆ ಪದವಿ ಕೊಡಿಸೊ
ನಿನ್ನ ಇಷ್ಟಭಕ್ತ ಜನರೊಳು ಎನ್ನ ಸೇರಿಸೊ ಈ
ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ |೧|
ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ, ಪೊಂ-
ಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪದ ಓರಿಗೆ ಉಣ್ಣಿಸೊ, ಮುಂದೆ
ಹುಟ್ಟಿಹ ಕರ್ಮಂಗಳ ಎನಗೆ ಬಿಡಿಸೊ |೨|
ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ನೀನು ಸೇರಿಸೊ
ಬಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೋ ಸ್ವಾಮಿ
ದಿಟ್ಟ ಪುರಂದರವಿಠಲ ದಯದಿ ಪಾಲಿಸೊ |೩|
veMkaTESa bEDikoMbe kRupeya pAlisO ||pa||
brahmaSaMkarAdi vaMdya enage mukti tOriso ||a||
naShTa modalAdaMtha kaShTa biDiso, ninna
paTTada rANige hELi enage padavi koDiso
ninna iShTaBakta janaroLu enna sEriso I
sRuShTiyoLu ninna dAsAnu dAsaneniso |1|
uTTu uMDu mikkiddella enage hAkiso, poM-
baTTaloLagina hAlu ucciShTa hAkiso
gaTyAgi sakkare tuppada Orige uNNiso, muMde
huTTiha karmaMgaLa enage biDiso |2|
kiTTagaTTida kabbiNakke puTava hAkiso
utkRuShTa baMgAradoLu enna nInu sEriso
baTTige uMgura mADi enna dharisO svAmi
diTTa puraMdaraviThala dayadi pAliso |3|
Leave a Reply