Composer : Shri Purandara dasaru
ಕೂಸಿನ ಕಂಡೀರ್ಯಾ ,
ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ||
ಬಾಲನ ಕಂಡೀರ್ಯಾ,
ಬಲವಂತನ ಕಂಡೀರ್ಯಾ ||ಅ.ಪ ||
ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕೆ ಎರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು |೧|
ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು |೨|
ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತ ಮತವನುದ್ಧರಿಸಿತು ಕೂಸು
ಮಧ್ವರಾಯರೆಂಬ ಹೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು |೩|
kUsina kaMDIryA ,
guru muKyaprANana kaMDIryA ||pa||
bAlana kaMDIryA,
balavaMtana kaMDIryA ||a.pa ||
aMjaneyudaradi puTTitu kUsu
rAmana caraNake eragitu kUsu
sItege uMgura koTTitu kUsu
laMkApuravane suTTitu kUsu |1|
baMDi annavanuMDitu kUsu
bakana prANava koMditu kUsu
viShada laDDuge medditu kUsu
maDadige puShpava koTTitu kUsu |2|
mAyAvAdigaLa gedditu kUsu
dvaita matavanuddharisitu kUsu
madhvarAyareMba hesarina kUsu
puraMdaraviThalana prEmada kUsu |3|
Leave a Reply