Lakshmi Hrudaya – Dirgha kriti

Composer : Shri Gurujagannatha dasaru

By Smt.Shubhalakshmi Rao

ಶ್ರೀ ಗುರು ಜಗನ್ನಾಥ ದಾಸ ವಿರಚಿತ ಶ್ರೀ ಲಕ್ಷ್ಮೀ ಹೃದಯ

ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ
ಸೋಮಸೋದರಿ ಪರಮ ಮಂಗಳೆ ತಪ್ತಕಾಂಚನಳೇ |
ಸೋಮಸೂರ್ಯ ಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ
ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ ||೧||

ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ
ನೈಜ ಕರದಲಿ ಪಿಡಿದುಕೊಂಡು ಭಕುತ ಜನತತಿಗೇ |
ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿ ವಂದ್ಯಳೆ
ಮೂಜಗತ್ತಿಗೆ ಮಾತೆ ಹರಿ ವಾಮಾಂಕದೊಳಗಿಪ್ಪೆ ||೨||

ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ
ಫಲಗಳನೀವ ಸಾಧನ ಸುಖವ ಕೊಡುತಿಪ್ಪ |
ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು
ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು ||೩ ||

ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ
ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ |
ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖ ಫಲದಾಯಿ ಧಾತ್ರಿಯೆ
ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ || ೪ ||

ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ
ತತಿಯ ನೀಡುವದ್ಯನಗೆ ಸರ್ವದ ಸರ್ವ ಗುಣಪೂರ್ಣೇ |
ನತಿಪ ಜನರಿಗನಂತ ಸೌಖ್ಯವ ನತಿಶಯದಿ ನೀನಿತ್ತ ವಾರ್ತೆಯು
ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ ||೫||

ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭೋಕ್ತ್ರೆ ಸರ್ವದ
ಸರ್ವ ವಿಶ್ವದಲಂತರಾತ್ಮಕೆ ವ್ಯಾಪ್ತೆ ನಿರ್ಲಿಪ್ತೆ |
ಸರ್ವ ವಸ್ತು ಸಮೂಹದೊಳಗೆ ಸರ್ವ ಕಾಲದಿ ನಿನ್ನ ಸಹಿತದಿ
ಸರ್ವ ಗುಣ ಸಂಪೂರ್ಣ ಶ್ರೀ ಹರಿ ತಾನೆ ಇರುತಿಪ್ಪ ||೬||

ತರಿಯೆ ನೀ ದಾರಿದ್ರ್ಯ ಶೋಕವ ಪರಿಯೆ ನೀನಜ್ಞಾನ ತಿಮಿರವ
ಇರಿಸು ತ್ವತ್ಪದ ಪದ್ಮ ಮನ್ಮನೊಸರಸಿ ಮಧ್ಯದಲಿ |
ಚರರ ಮನಸಿನ ದುಃಖ ಭಂಜನ ಪರಮ ಕಾರಣವೆನಿಪ ನಿನ್ನಯ
ಕರುಣಪೂರ್ಣ ಕಟಾಕ್ಷದಿಂದಭಿಷೇಕ ನೀ ಮಾಡೇ || ೭ ||

ಅಂಬಾ ಎನಗೆ ಪ್ರಸನ್ನಳಾಗಿ ತುಂಬಿ ಸೂಸುವ ಪರಮ ಕರುಣಾ
ವೆಂಬ ಪೀಯುಷ ಕಣದಿ ತುಂಬಿದ ದೃಷ್ಟಿ ತುದಿಯಿಂದ |
ಅಂಬುಜಾಕ್ಷಿಯೆ ನೋಡಿ ಎನ್ನ ಮನಿ ತುಂಬಿಸೀಗಲೆ ಧಾನ್ಯ ಧನಗಳ
ಹಂಬಲಿಸುವೆನು ಪಾದಪಂಕಜ ನಮಿಪೆನನವರತ || ೮ ||

ಶಾಂತಿನಾಮಕೆ ಶರಣ ಪಾಲಕೆ ಕಾಂತಿನಾಮಕೆ ಗುಣಗಣಾಶ್ರಯೇ
ಶಾಂತಿನಾಮಕೆ ದುರಿತನಾಶಿನಿ ಧಾತ್ರಿ ನಮಿಸುವೆನು |
ಭ್ರಾಂತಿನಾಶನಿ ಭವದ ಶಮದಿಂ ಶ್ರಾಂತನಾದೆನು ಭವದಿ ಎನಗೆ
ನಿಶಾಂತ ಧನ ನಿಧಿ ಧಾನ್ಯ ಕೋಶವನಿತ್ತು ಸಲಹುವುದು || ೯ ||

ಜಯತು ಲಕ್ಷ್ಮೀ ಲಕ್ಷಣಾಂಗಿಯೆ ಜಯತು ಪದ್ಮಾ ಪದ್ಮವಂದ್ಯಳೆ
ಜಯತು ವಿದ್ಯಾ ನಾಮೆ ನಮೋ ನಮೋ ವಿಷ್ಣುವಾಮಾಂಕೇ |
ಜಯಪ್ರದಾಯಕೆ ಜಗದಿವಂದ್ಯಳೆ ಜಯತು ಜಯ ಚನ್ನಾಗಿ ಸಂಪದ
ಜಯವೆ ಪಾಲಿಸು ಎನಗೆ ಸರ್ವದ ನಮಿಪೆನನವರತ ||೧೦||

ಜಯತು ದೇವೀ ದೇವ ಪೂಜ್ಯಳೆ ಜಯತು ಭಾರ್ಗವಿ ಭದ್ರ ರೂಪಳೆ
ಜಯತು ನಿರ್ಮಲ ಜ್ಞಾನವೇದ್ಯಳೆ ಜಯತು ಜಯ ದೇವಿ |
ಜಯತು ಸತ್ಯಾಭೂತಿ ಸಂಸ್ಥಿತೆ ಜಯತು ರಮ್ಯಾ ರಮಣ ಸಂಸ್ಥಿತೆ
ಜಯತು ಸರ್ವ ಸುರತ್ನ ನಿಧಿಯೊಳಗಿಪ್ಪೆ ನಿತ್ಯದಲಿ ||೧೧||

ಜಯತು ಶುದ್ಧಾ ಕನಕ ಭಾಸಳೆ ಜಯತು ಕಾಂತಾ ಕಾಂತಿ ಗಾತ್ರಳೆ
ಜಯತು ಜಯ ಶುಭ ಶಾಂತೆ ಶೀಘ್ರದೆ ಸೌಮ್ಯ ಗುಣ ರಮ್ಯೇ |
ಜಯತು ಜಯಗಳದಾಯಿ ಸರ್ವದ ಜಯವೆ ಪಾಲಿಸು ಸರ್ವ ಕಾಲದಿ
ಜಯತು ಜಯ ಜಯ ದೇವಿ ನಿನ್ನನು ವಿಜಯ ಬೇಡಿದೆನು ||೧೨||

ಆವ ನಿನ್ನಯ ಕಳೆಗಳಿಂದಲಿ ಆ ವಿರಿಂಚಿಯು ರುದ್ರ ಸುರಪತಿ
ದೇವ ವರಮುಖ ಜೀವರೆಲ್ಲರೂ ಸರ್ವಕಾಲದಲಿ |
ಜೀವಧಾರಣೆ ಮಾಡೋರಲ್ಲದೆ ಆವ ಶಕ್ತಿಯೂ ಕಾಣೆನವರಿಗೆ
ದೇವಿ ನೀ ಪ್ರಭು ನಿನ್ನ ಶಕ್ತಿಲಿ ಶಕ್ತರೆನಿಸುವರು || ೧೩ ||

ಆಯು ಮೊದಲಾಗಿಪ್ಪ ಪರಮಾದಾಯ ಸೃಷ್ಟಿಸು ಪಾಲನಾದಿ ಸ್ವಕೀಯ
ಕರ್ಮವ ಮಾಡಿಸುವಿ ನಿನಗಾರು ಸರಿಯುಂಟೇ |
ತೋಯಜಾಲಯೆ ಲೋಕನಾಥಳೆ ತಾಯಿ ಎನ್ನನು ಪೊರೆಯೇ ಎಂದು
ಬಾಯಿ ಬಿಡುವೆನು ನೋಕನೀಯನ ಜಾಯೆ ಮಾಂ ಪಾಹಿ ||೧೪||

ಬೊಮ್ಮ ಎನ್ನಯ ಫಣಿಯ ಫಲಕದಿ ಹಮ್ಮಿನಿಂದಲಿ ಬರೆದ ಲಿಪಿಯನು
ಅಮ್ಮ ಅದನನು ತೊಡೆದು ನೀ ಬರಿ ಬ್ಯಾರೆ ವಿಧದಿಂದ |
ರಮ್ಯವಾಗಿಹ ನಿನ್ನ ಕರುಣಾ ಹರ್ಮ್ಯದೊಳಗಿರುತಿಪ್ಪ ಭಾಗ್ಯವ
ಘಮ್ಮನೇ ದೊರೆವಂತೆ ಈ ಪರಿ ನಿರ್ಮಿಸೋತ್ತಮಳೆ ||೧೫||

ಕನಕ ಮುದ್ರಿಕೆ ಪೂರ್ಣ ಕಲಶವ ಎನಗೆ ಅರ್ಪಿಸು ಜನುಮ ಜನುಮದಿ
ಜನನಿ ಭಾಗ್ಯದಭಿಮಾನಿ ನಿನಗಭಿನಮಿಸಿ ಬಿನ್ನೈಪೆ |
ಕನಸಿಲಾದರು ಭಾಗ್ಯ ಹೀನನು ಎನಿಸಬಾರದು ಎನ್ನ ಲೋಕದಿ
ಎನಿಸು ಭಾಗ್ಯದ ನಿಧಿಯು ಪರಿ ಪರಿ ಉಣಿಸು ಸುಖಫಲವಾ || ೧೬||

ದೇವಿ ನಿನ್ನಯ ಕಳೆಗಳಿಂದಲಿ ಜೀವಿಸುವುದೀ ಜಗವು ನಿತ್ಯದಿ
ಭಾವಿಸೀಪರಿ ಎನಗೆ ಸಂತತ ನಿಖಿಲ ಸಂಪದವ |
ದೇವಿ ರಮ್ಯ ಮುಖಾರವಿಂದಳೆ ನೀ ವಲಿದು ಸೌಭಾಗ್ಯ ಪಾಲಿಸು
ಸೇವಕಾಧಮನೆಂದು ಬ್ಯಾಗನೆ ಒಲಿಯೇ ನೀ ಎನಗೆ ||೧೭||

ಹರಿಯ ಹೃದಯದಿ ನೀನೆ ನಿತ್ಯದಿ ಇರುವ ತೆರದಲಿ ನಿನ್ನ ಕಳೆಗಳು
ಇರಲಿ ಎನ್ನಯ ಹೃದಯ ಸದನದಿ ಸರ್ವಕಾಲದಲಿ |
ನಿರುತ ನಿನ್ನಯ ಭಾಗ್ಯ ಕಳೆಗಳು ಬೆರೆತು ಸುಖಗಳ ಸಲಿಸಿ ಸಲಹಲಿ
ಶಿರಿಯೆ ಶ್ರೀಹರಿ ರಾಣಿ ಸರಸಿಜ ನಯನೆ ಕಲ್ಯಾಣಿ ||೧೮||

ಸರ್ವ ಸೌಖ್ಯ ಪ್ರದಾಯಿ ದೇವಿಯೆ ಸರ್ವ ಭಕ್ತರಿಗಭಯ ದಾಯಿಯೆ
ಸರ್ವ ಕಾಲದಲಚಲ ಕಳೆಗಳ ನೀಡು ಎನ್ನಲ್ಲಿ |
ಸರ್ವ ಜಗದೊಳು ನನ್ನ ನಿನ್ನಯ ಸರ್ವ ಸುಕಳಾ ಪೂರ್ಣನೆನಿಸಿ
ಸರ್ವ ವಿಭವದಿ ಮೆರೆಸು ಸಂತತ ವಿಘ್ನವಿಲ್ಲದಲೆ ||೧೯||

ಮುದದಿ ಎನ್ನಯ ಫಾಲದಲಿ ಶಿರಿ ಪದುಮೆ ನಿನ್ನಯ ಪರಮ ಕಳೆಯು
ವದಗಿ ಸರ್ವದ ಇರಲಿ ಶ್ರೀ ವೈಕುಂಠ ಗತ ಲಕ್ಷ್ಮೀ |
ಉದಯವಾಗಲಿ ನೇತ್ರಯುಗಳದಿ ಸದಯ ಮೂರ್ತಿಯೆ ಸತ್ಯಲೋಕದ
ಚದುರೆ ಲಕುಮಿಯೆ ಕಳೆಯು ವಾಕ್ಯದಿ ನಿಲಿಸಲನವರತ || ೨೦||

ಶ್ವೇತ ದಿವಿಯೊಳಗಿರುವ ಲಕುಮಿಯೆ ನೀತವಾಗಿಹ ಕಳೆಯು ನಿತ್ಯದಿ
ಮಾತೆ ಎನ್ನಯ ಕರದಿ ಸಂತತ ವಾಸವಾಗಿರಲಿ |
ಪಾಥೊ ನಿಧಿಯೊಳಗಿಪ್ಪ ಲಕುಮಿಯೆ ಜಾತಕಳೆಯು ಮಮಾಂಗದಲಿ
ಸಂಪ್ರೀತಿ ಪೂರ್ವಕವಿರಲಿ ಸರ್ವದ ಪಾಹಿ ಮಾಂ ಪಾಹಿ ||೨೧||

ಇಂದು ಸೂರ್ಯರು ಎಲ್ಲಿ ತನಕಾ ಕುಂದದಲೆ ಇರುವರೋ ಶಿರಿ
ಇಂದಿರೇಶನು ಯಾವ ಕಾಲದ ತನಕ ಇರುತಿಪ್ಪ |
ಇಂದಿರಾತ್ಮಕ ಕಳೆಯ ರೂಪಗಳಂದಿನದ ಪರಿ ಅಂತರಿಪ್ಪವು
ಕುಂದು ಇಲ್ಲದೆ ಎನ್ನ ಬಳಿಯಲಿ ತಾವೆ ನೆಲಸಿರಲಿ ||೨೨||

ಸರ್ವಮಂಗಳೆ ಸುಗುಣ ಪೂರ್ಣಳೆ ಸರ್ವ ಐಶ್ವರ್ಯಾದಿ ಮಂಡಿತೆ
ಸರ್ವ ದೇವಗಣಾಭಿವಂದ್ಯಳೆ ಆದಿಮಹಲಕ್ಷ್ಮೀ |
ಸರ್ವಕಳೆ ಸಂಪೂರ್ಣೆ ನಿನ್ನಯ ಸರ್ವಕಳೆಗಳು ಎನ್ನ ಹೃದಯದಿ
ಸರ್ವಕಾಲದಲಿರಲಿ ಎಂದು ನಿನ್ನ ಪ್ರಾರ್ಥಿಸುವೆ ||೨೩||

ಜನನಿ ಎನ್ನಜ್ಞಾನ ತಿಮಿರವ ದಿನದಿನದಿ ಸಂಹರಿಸಿ ನಿನ್ನದು ನೆನಿಸಿ
ಧ್ಯಾನವ ಮಾಳ್ಪ ನಿರ್ಮಲ ಜ್ಞಾನ ಸಂಪದವ |
ಕನಕ ಮಣಿ ಧನ ಧಾನ್ಯ ಭಾಗ್ಯವ ತನಿತು ನೀ ಎನಗಿತ್ತು ಪಾಲಿಸು
ಮಿನುಗುತಿಹ ಘನವಾದ ನಿನ್ನಯ ಕಳೆಯು ಶೋಭಿಸಲಿ ||೨೪||

ನಿರುತ ತಮತತಿ ಹರಿಪ ಸೂರ್ಯನ ತೆರದಿ ಕ್ಷಿಪ್ರದಿ ಹರಿಸಲಕ್ಷ್ಮಿಯ
ಸರಕು ಮಾಡದೆ ತರಿದು ಓಡಿಸು ದುರಿತ ರಾಶಿಗಳ |
ಪರಿಪರಿಯ ಸೌಭಾಗ್ಯ ನಿಧಿಯನು ಹರುಷದಿಂದಲಿ ನೀಡಿ ಎನ್ನನು
ಢರಢರದಿ ಕೃತ ಕೃತ್ಯನಿಳೆಯೊಳಗೆನಿಸು ದಯದಿಂದ || ೨೫||

ಅತುಳ ಮಹದೈಶ್ವರ್ಯ ಮಂಗಳತತಿಯು ನಿನ್ನಯ ಕಳೆಗಳೊಳಗೇ
ವಿತತವಾಗಿ ವಿರಾಜಮಾನದಲಿಪ್ಪ ಕಾರಣದೀ |
ಶ್ರುತಿಯು ನಿನ್ನಯ ಮಹಿಮೆ ತಿಳಿಯದು ತುತಿಸಬಲ್ಲೆನೇ ತಾಯಿ ಪೇಳ್ವುದು
ಮತಿವಿಹೀನನು ನಿನ್ನ ಕರುಣಕೆ ಪಾತ್ರನೆನಿಸಮ್ಮ ||೨೬||

ನಿನ್ನ ಮಹಾದಾವೇಶ ಭಾಗ್ಯಕೆ ಎನ್ನ ಅರ್ಹನ ಮಾಡು ಲಕುಮಿಯೆ
ಘನ್ನತರ ಸೌಭಾಗ್ಯ ನಿಧಿ ಸಂಪನ್ನನೆನಿಸೆನ್ನ |
ರನ್ನೆ ನಿನ್ನಯ ಪಾದಕಮಲವ ಮನ್ನದಲಿ ಸಂಸ್ತುತಿಸಿ ಬೇಡುವೆ
ನಿನ್ನ ಪರತರ ಕರುಣ ಕವಚವ ತೊಡಿಸಿ ಪೊರೆಯಮ್ಮ ||೨೭||

ಪೂತ ನರನನು ಮಾಡಿ ಕಳೆಗಳ ವ್ರಾತದಿಂದಲಿ ಎನ್ನ ನಿಷ್ಠವ
ಘಾತಿಸೀಗಲೆ ಎನಗೆ ಒಲಿದು ಬಂದು ಸುಳಿ ಮುಂದೆ |
ಮಾತೆ ಭಾರ್ಗವಿ ಕರುಣಿ ನಿನ್ನಯ ನಾಥನಿಂದೊಡಗೂಡಿ ಸಂತತ
ಪ್ರೀತಳಾಗಿರು ಎನ್ನ ಮನೆಯೊಳು ನಿಲ್ಲು ನೀ ಬಿಡದೆ ||೨೮||

ಪರಮಶಿರಿ ವೈಕುಂಠ ಲಕುಮಿಯೆ ಹರಿಯ ಸಹಿತದಲೆನ್ನ ಮುಂದಕೆ
ಹರುಷ ಪಡುತಲಿ ಬಂದು ಶೋಭಿಸು ಕಾಲ ಕಳೆಯದಲೆ |
ವರದೆ ನಾ ಬಾರೆಂದು ನಿನ್ನನು ಕರೆದೆ ಮನವನು ಮುಟ್ಟಿ ಭಕುತಿಯ
ಭರದಿ ಬಾಗಿದ ಶಿರದಿ ನಮಿಸುವೆ ಕೃಪೆಯ ಮಾಡೆಂದು ||೨೯||

ಸತ್ಯಲೋಕದ ಲಕುಮಿ ನಿನ್ನಯ ಸತ್ಯ ಸನ್ನಿಧಿ ಎನ್ನ ಮನೆಯಲಿ
ನಿತ್ಯ ನಿತ್ಯದಿ ಪೆರ್ಚಿ ಹಬ್ಬಲಿ ಜಗದಿ ಜನತತಿಗೆ |
ಅತ್ಯಧಿಕ ಆಶ್ಚರ್ಯ ತೋರಿಸಿ ಮರ್ತ್ಯರೋತ್ತಮನೆನಿಸಿ ನೀ ಕೃತ
ಕೃತ್ಯನೀಪರಿ ಮಾಡಿ ಶಿರಿ ಹರಿಗೂಡಿ ನಲಿದಾಡೆ ||೩೦||

ಕ್ಷೀರವಾರಿಧಿ ಲಕುಮಿಯೇ ಪತಿ ನಾರಸಿಂಹನ ಕೂಡಿ ಬರುವುದು
ದೂರ ನೋಡದೆ ಸಾರೆಗೆರೆದು ಪ್ರಸಾದ ಕೊಡು ಎನಗೆ |
ವಾರಿಜಾಕ್ಷಿಯೆ ನಿನ್ನ ಕರುಣಾ ಸಾರ ಪೂರ್ಣ ಕಟಾಕ್ಷದಿಂದಲಿ
ಬಾರಿ ಬಾರಿಗೆ ನೋಡಿ ಪಾಲಿಸು ಪರಮ ಪಾವನ್ನೆ ||೩೧||

ಶ್ವೇತ ದ್ವೀಪದ ಲಕುಮಿ ತ್ರಿಜಗನ್ಮಾತೆ ನೀ ಎನ ಮುಂದೆ ಶೀಘ್ರದಿ
ನಾಥನಿಂದೊಡಗೂಡಿ ಬಾರೆ ಪ್ರಸನ್ನ ಮುಖ ಕಮಲೆ |
ಜಾತರೂಪ ಸುತೇಜರೂಪಳೆ ಮಾತರಿಶ್ವ ಮುಖಾರ್ಚಿತಾಂಘ್ರಿಯೆ
ಜಾತರೂಪೋದರಾಂಡ ಸಂಘಕೆ ಮಾತೆ ಪ್ರಖ್ಯಾತೆ ||೩೨||

ರತ್ನಗರ್ಭನ ಪುತ್ರಿ ಲಕುಮಿಯೆ ರತ್ನಪೂರಿತ ಭಾಂಡ ನಿಚಯವ
ಯತ್ನಪೂರ್ವಕ ತಂದು ಎನ್ನಯ ಮುಂದೆ ನೀ ನಿಲ್ಲು |
ರತ್ನಖಚಿತ ಸುವರ್ಣಮಾಲೆಯ ರತ್ನಪದಕದ ಹಾರ ಸಮುದಯ
ಜತ್ನದಿಂದಲಿ ನೀಡಿ ಸರ್ವದ ಪಾಹೀ ಪರಮಾಪ್ತೆ ||೩೩||

ಎನ್ನ ಮನೆಯಲಿ ಸ್ಥೈರ್ಯದಿಂದಲಿ ಇನ್ನು ನಿಶ್ಚಲಳಾಗಿ ನಿಂತಿರು
ಉನ್ನತಾದೈಶ್ವರ್ಯ ವೃದ್ಧಿಯಗೈಸು ನಿರ್ಮಲಳೆ |
ಸನ್ನುತಾಂಗಿಯೆ ನಿನ್ನ ತುತಿಪೆ ಪ್ರಸನ್ನ ಹೃದಯದಿ ನಿತ್ಯ

ನೀ ಪ್ರಹಸನ್ಮುಖದಿ ಮಾತಾಡು ವರಗಳ ನೀಡು ನಲಿದಾಡು ||೩೪||

ಶಿರಿಯೆ ಶಿರಿ ಮಹಾಭೂತಿ ದಾಯಿಕೆ ಪರಮೆ ನಿನ್ನೊಳಗಿಪ್ಪ
ಸುಮಹತ್ತರ ನವಾತ್ಮಕ ನಿಧಿಗಳೂರ್ಧ್ವಕೆ ತಂದು ಕರುಣದಲಿ |
ಕರದಿ ಪಡಿದದನೆತ್ತಿ ತೋರಿಸಿ ತ್ವರದಿ ನೀ ಎನಗಿತ್ತು ಪಾಲಿಸು
ಧರಣಿ ರೂಪಳೆ ನಿನ್ನ ಚರಣಕೆ ಶರಣು ನಾ ಮಾಳ್ಪೆ ||೩೫||

ವಸುಧೆ ನಿನ್ನೊಳಗಿಪ್ಪ ವಸುವನು ವಶವ ಮಾಳ್ಪುದು ಎನಗೆ ಸರ್ವದ
ವಸುಸುದೋಗ್ಧಿಯು ಎಂಬ ನಾಮವು ನಿನಗೆ ಇರುತಿಹದು
ಅಸಮ ಮಹಿಮಳೆ ನಿನ್ನ ಶುಭತಮ ಬಸುರಿನೊಳಗಿರುತಿಪ್ಪ
ನಿಧಿಯನು ಬೆಸೆಸು ಈಗಲೇ ಹಸಿದು ಬಂದಗೆ ಅಶನವಿತ್ತಂತೆ ||೩೬||

ಹರಿಯ ರಾಣಿಯೆ ರತ್ನಗರ್ಭಳೆ ಸರಿಯು ಯಾರೀ ಸುರರ ಸ್ತೋಮದಿ
ಸರಸಿಜಾಕ್ಷಿಯೆ ನಿನ್ನ ಬಸಿರೊಳಗಿರುವ ನವನಿಧಿಯ |
ಮೆರೆವ ಹೇಮದ ಗಿರಿಯ ತೆರದಲಿ ತೆರೆದು ತೋರಿಸಿ ಸಲಿಸು ಎನಗೆ
ಪರಮ ಕರುಣಾಶಾಲಿ ನಮೋ ನಮೋ ಎಂದು ಮೊರೆ ಪೊಕ್ಕೆ ||೩೭||

ರಸತಳದ ಶಿರಿ ಲಕುಮಿದೇವಿಯೆ ಶಶಿ ಸಹೋದರಿ ಶೀಘ್ರದಿಂದಲಿ
ಅಸಮ ನಿನ್ನಯ ರೂಪ ತೋರಿಸು ಎನ್ನ ಪುರದಲ್ಲಿ |
ಕುಸುಮಗಂಧಿಯೇ ನಿನ್ನನರಿಯೆನು ವಸುಮತೀ ತಳದಲ್ಲಿ ಬಹುಪರಿ
ಪೊಸತು ಎನಿಪುದು ನಿನ್ನ ಒಲುಮೆಯು ಸಕಲ ಜನತತಿಗೆ || ೩೮||

ನಾಗವೇಣಿಯೆ ಲಕುಮಿ ನೀ ಮನೊವೇಗದಿಂದಲಿ ಬಂದು ಎನ್ನಯ
ಜಾಗುಮಾಡದೆ ಶಿರದಿ ಹಸ್ತವನಿಟ್ಟು ಮುದದಿಂದ |
ನೀಗಿಸೀ ದಾರಿದ್ರ ದು:ಖವ ಸಾಗಿಸೀ ಭವಭಾರ ಪರ್ವತ
ತೂಗಿಸು ನೀ ಎನ್ನ ಸದನದಿ ಕನಕ ಭಾರಗಳಾ ||೩೯||

ಅಂಜಬೇಡವೊ ವತ್ಸಾ ಎನುತಲಿ ಮಂಜುಳೋಕ್ತಿಯ ನುಡಿದು ಕರುಣಾ
ಪುಂಜ ಮನದಲಿ ಬಂದು ಶೀಘ್ರದಿ ಕಾರ್ಯ ಮಾಡುವುದು |
ಕಂಜಲೋಚನೆ ಕಾಮಧೇನು ಸು-ರಂಜಿಪಾಮರ ತರುವು ಎನಿಸುವಿ
ಸಂಜಯಪ್ರದಳಾಗಿ ಸಂತತ ಪಾಹಿ ಮಾಂ ಪಾಹಿ || ೪೦ ||

ದೇವಿ ಶೀಘ್ರದಿ ಬಂದು ಭೂಮೀ-ದೇವಿ ಸಂಭವೆ ಎನ್ನ ಜನನಿಯೆ
ಕಾಮನಯ್ಯನ ರಾಣಿ ನಿನ್ನಯ ಭೃತ್ಯ ನಾನೆಂದು |
ಭಾವಿಸೀಪರಿ ನಿನ್ನ ಪುಡುಕಿದೆ ಸೇವೆ ನೀ ಕೈಕೊಂಡು ಮನ್ಮನೊ
ಭಾವ ಪೂರ್ತಿಸಿ ಕರುಣಿಸೆನ್ನನು ಶರಣು ಶರಣೆಂಬೆ || ೪೧||

ಜಾಗರೂಕದಿ ನಿಂತು ಮತ್ತೇ ಜಾಗರೂಕದಿ ಎನಗೆ ನಿತ್ಯದಿ
ತ್ಯಾಗಭೋಗಕೆ ಯೋಗ್ಯವೆನಿಪಾಕ್ಷಯ್ಯ ಹೇಮಮಯ |
ಪೂಗ ಕನಕ ಸಂಪೂರ್ಣ ಘಟಗಳ ಯೋಗ ಮಾಳ್ಪುದು ಲೋಕಜನನೀ
ಈಗ ಎನ್ನಯ ಭಾರ ನಿನ್ನದು ಕರೆದು ಕೈ ಪಿಡಿಯೆ || ೪೨ ||

ಧರಣಿಗತ ನಿಕ್ಷೇಪಗಳನುದ್ಧರಿಸಿ ನೀ ಎನ ಮುಂದೆ ಸೇರಿಸಿ
ಕಿರಿಯ ನಗೆಮೊಗದಿಂದ ನೋಡುತ ನೀಡು ನವನಿಧಿಯ |
ಸ್ಥಿರದಿ ಎನ ಮಂದಿರದಿ ನಿಂತೂ ಪರಮ ಮಂಗಳ ಕಾರ್ಯ ಮಾಡಿಸು
ಶಿರಿಯೆ ನೀನೇ ಒಲಿದು ಪಾಲಿಸು ಮೋಕ್ಷ ಸುಖ ಕೊನಿಗೆ || ೪೩ ||

ನಿಲ್ಲೆ ಲಕುಮೀ ಸ್ಥೈರ್ಯ ಭಾವದಿ ನಿಲ್ಲು ರತ್ನ ಹಿರಣ್ಯ ರೂಪಳೆ
ಎಲ್ಲ ವರಗಳನಿತ್ತು ನನಗೆ ಪ್ರಸನ್ನಮುಖಳಾಗು
ಎಲ್ಲು ಇರುತಿಹ ಕನಕ ನಿಧಿಗಳನೆಲ್ಲನೂ ನೀ ತಂದು ನೀಡುವುದು
ಫುಲ್ಲಲೋಚನೆ ತೋರಿ ನಿಧಿಗಳ ತಂದು ಪೊರೆಯಮ್ಮ || ೪೪ ||

ಇಂದ್ರಲೋಕದಲಿದ್ದ ತೆರದಲಿ ನಿಂದ್ರು ಎನ್ನಯ ಗೃಹದಿ ನಿತ್ಯದಿ
ಚಂದ್ರವದನೆಯೆ ಲಕುಮಿ ದೇವಿ ನೀಡೆ ಎನಗಭಯ |
ನಿಂದ್ರಲಾರೆನು ಋಣದ ಬಾಧೆಗೆ ತಂದ್ರಮತಿ ನಾನಾದೆ
ಭವದೊಳುಪೇಂದ್ರ ವಲ್ಲಭೆ ಅಭಯ ಪಾಲಿಸು ನಮಿಪೆ ಮಜ್ಜನನಿ || ೪೫ ||

ಬದ್ಧ ಸ್ನೇಹ ವಿರಾಜಮಾನಳೆ ಶುದ್ಧ ಜಾಂಬೂನದದಿ ಸಂಸ್ಥಿತೆ
ಮುದ್ದು ಮೋಹನ ಮೂರ್ತಿ ಕರುಣದಿ ನೋಡೆ ನೀ ಎನ್ನ |
ಬಿದ್ದೆ ನಾ ನಿನ್ನ ಪಾದ ಪದುಮಕೆ ಉದ್ಧರಿಪುದೆಂ ಬೇಡಿದೆನು
ಅನಿರುದ್ಧ ರಾಣಿ ಕೃಪಾಕಟಾಕ್ಷದಿ ನೋಡೆ ಮಾತಾಡೆ || ೪೬ ||

ಭೂಮಿ ಗತ ಶಿರಿದೇವಿ ಶೋಭಿತೆ ಹೇಮಮಯೆ ಎಲ್ಲೆಲ್ಲಿ ಇರುತಿಹೆ
ತಾಮರಸ ಸಂಭೂತೆ ನಿನ್ನಯ ರೂಪ ತೋರೆನಗೆ |
ಭೂಮಿಯಲಿ ಬಹು ರೂಪದಿಂದಲಿ ಪ್ರೇಮಪೂರ್ವಕ ಕ್ರೀಡೆಗೈಯುತ
ಹೇಮಮಯ ಪರಿಪೂರ್ಣ ಹಸ್ತವ ಶಿರದ ಮೇಲಿರಿಸು || ೪೭ ||

ಫಲಗಳೀವ ಸುಭಾಗ್ಯ ಲಕುಮಿಯೆ ಲಲಿತ ಸರ್ವ ಪುರಾಧಿ ವಾಸಿಯೆ
ಕಲುಷ ಶೂನ್ಯಳೆ ಲಕುಮಿ ದೇವಿಯೆ ಪೂರ್ಣ ಮಾಡೆನ್ನ |
ಕುಲಜೆ ಕುಂಕುಮ ಶೋಭಿಫಾಲಳೆ ಚಲಿತ ಕುಂಡಲ ಕರ್ಣ ಭೂಷಿತೆ
ಜಲಜಲೋಚನೆ ಜಾಗ್ರ ಕಾಲದಿ ಸಲಿಸು ಎನಗಿಷ್ಟ || ೪೮ ||

ತಾಯೆ ಛಂದದಲಂದಯೋಧ್ಯದಿ ದಯದಿ ನೀನೇ ನಿಂತು
ಪಟ್ಟಣ ಭಯವ ಓಡಿಸಿ ಜಾಗು ಮಾಡದೆ ಮತ್ತೆ ಮುದದಿಂದ |
ಜಯವ ನೀಡಿದ ತೆರದಿ ಎನ್ನಾಲಯದಿ ಪ್ರೇಮದಿ ಬಂದು ಕೂಡ್ವದು
ಜಯಪ್ರದಾಯಿನಿ ವಿವಿಧ ವೈಭವದಿಂದ ಒಡಗೂಡಿ || ೪೯ ||

ಬಾರೆ ಲಕುಮೀ ಎನ್ನ ಸದನಕೆ ಸಾರಿದೆನು ತವ ಪಾದ ಪದುಮಕೆ
ತೋರಿ ಎನ್ನಯ ಗೃಹದಿ ನೀನೆ ಸ್ಥಿರದಿ ನೆಲೆಸಿದ್ದು |
ಸಾರ ಕರುಣಾರಸವು ತುಂಬಿದ ಚಾರುಜಲರುಹ ನೇತ್ರಯುಗ್ಮಳೆ
ಪಾರುಗಾಣಿಸು ಪರಮ ಕರುಣಿಯೆ ರಿಕ್ತತನದಿಂದ || ೫೦ ||

ಶಿರಿಯೆ ನಿನ್ನಯ ಹಸ್ತ ಕಮಲವ ಶಿರದಿ ನೀನೇ ಇರಿಸಿ ಎನ್ನನು
ಕರುಣವೆಂಬಾಮೃತದ ಕಣದಲಿ ಸ್ನಾನ ಗೈಸಿನ್ನು |
ಸ್ಥಿರದಿ ಸ್ಥಿತಿಯನು ಮಾಡು ಸರ್ವದ ಸರ್ವ ರಾಜ ಗೃಹಸ್ಥ ಲಕುಮಿಯೆ
ತ್ವರದಿ ಮೋದದಿ ಯುಕ್ತಳಾಗಿರು ಎನ್ನ ಮುಂದಿನ್ನು || ೫೧ ||

ನೀನೆ ಆಶೀರ್ವದಿಸಿ ಅಭಯವ ನೀನೆ ಎನಗೆ ಇತ್ತು ಸಾದರ
ನೀನೆ ಎನ್ನ ಶಿರದಲಿ ಹಸ್ತವ ಇರಿಸು ಕರುಣದಲಿ |
ನೀನೆ ರಾಜರ ಗೃಹದ ಲಕ್ಷ್ಮಿಯು ನೀನೆ ಸರ್ವ ಸುಭಾಗ್ಯ ಲಕ್ಷ್ಮಿಯು
ಹೀನವಾಗದೆ ನಿನ್ನ ಕಳೆಗಳ ವೃದ್ಧಿ ಮಾಡಿನ್ನು || ೫೨ ||

ಆದಿಸಿರಿ ಮಹಲಕುಮಿ ವಿಷ್ಣುವಿನ ಮೋದಮಯ ವಾಮಾಂಕ
ನಿನಗನುವಾದ ಸ್ವ ಸ್ಥಳವೆಂದು ತಿಳಿದು ನೀನೆ ನೆಲೆಸಿದ್ದಿ |
ಆದಿ ದೇವಿಯೆ ನಿನ್ನ ರೂಪವ ಮೋದದಿಂದಲಿ ತೋರಿ ಎನ್ನೊಳು
ಕ್ರೋಧವಿಲ್ಲದೆ ನಿತ್ಯ ಎನ್ನನು ಪೊರೆಯೆ ಕರುಣದಲಿ || ೫೩ ||

ಒಲಿಯೆ ನೀ ಮಹಲಕುಮಿ ಬೇಗನೆ ಒಲಿಯೆ ಮಂಗಳಮೂರ್ತಿ ಸರ್ವದ
ನಲಿಯೆ ಚಲಿಸದೆ ಹೃದಯ ಮಂದಿರದಲ್ಲಿ ನೀ ನಿರುತ |
ಲಲಿತವೇದಗಳೆಲ್ಲಿ ತನಕಾ ತಿಳಿದು ಹರಿಗುಣ ಪಾಡುತಿಪ್ಪವೋ
ಜಲಜಲೋಚನ ವಿಷ್ಣು ನಿನ್ನೊಳು ಅಲ್ಲಿ ನೀನಿಪ್ಪೆ || ೫೪ ||

ಅಲ್ಲಿ ಪರಿಯಂತರದಿ ನಿನ್ನಯ ಎಲ್ಲ ಕಳೆಗಳು ಎನ್ನ ಮನಿಯಲಿ
ನಿಲ್ಲಿಸೀ ಸುಖ ವ್ರಾತ ನೀಡುತ ಸರ್ವಕಾಲದಲಿ |
ಎಲ್ಲ ಜನಕಾಹ್ಲಾದ ಚಂದಿರ ಕುಲ್ಲದೇ ಶುಭ ಪಕ್ಷ ದಿನದೊಳು
ನಿಲ್ಲದಲೇ ಕಳೆ ವೃದ್ಧಿಯೈದುವ ತೆರದಿ ಮಾಡೆನ್ನ || ೫೫ ||

ಶಿರಿಯೆ ನೀ ವೈಕುಂಠ ಲೋಕದಿ ಶಿರಿಯೆ ನೀ ಪಾಲ್ಗಡಲ ಮಧ್ಯದಿ
ಇರುವ ತೆರದಲಿ ಎನ್ನ ಮನಿಯೊಳು ವಿಷ್ಣು ಸಹಿತಾಗಿ
ನಿರುತ ಜ್ಞಾನಿಯ ಹೃದಯ ಮಧ್ಯದಿ ಮಿರುಗುವಂದದಲೆನ್ನ ಸದನದಿ
ಹರಿಯ ಸಹಿತದಿ ನಿತ್ಯ ರಾಜಿಸು ನೀಡಿ ಕಾಮಿತವ || ೫೬ ||

ಶ್ರೀನಿವಾಸನ ಹೃದಯ ಕಮಲದಿ ನೀನೆ ನಿಂತಿರುವಂತೆ ಸರ್ವದ
ಆ ನಾರಾಯಣ ನಿನ್ನ ಹೃದಯದಿ ಇರುವ ತೆರದಂತೆ |
ನೀನು ನಾರಾಯಣನು ಇಬ್ಬರು ಸಾನುರಾಗದಿ ಎನ್ನ ಮನದೊಳು
ನ್ಯೂನವಾಗದೆ ನಿಂತು ಮನೋರಥ ಸಲಿಸಿ ಪೊರೆಯೆಂದೆ || ೫೭ ||

ವಿಮಲತರ ವಿಜ್ಞಾನ ವೃದ್ಧಿಯ ಕಮಲೆ ಎನ್ನಯ ಮನದಿ ಮಾಳ್ಪುದು
ಅಮಿತ ಸುಖ ಸೌಭಾಗ್ಯ ವೃದ್ಧಿಯ ಮಾಡು ಮಂದಿರದಿ |
ರಮೆಯೆ ನಿನ್ನಯ ಕರುಣ ವೃದ್ಧಿಯ ಸುಮನದಿಂದಲಿ ಮಾಡು ಎನ್ನಲಿ
ಅಮರಪಾದಪೆ ಸ್ವರ್ಣವೃಷ್ಟಿಯ ಮಾಡು ಮಂದಿರದಿ || ೫೮ ||

ನಿನ್ನ ಕರುಣವು ಮೊದಲೊ ದೇವಿಯೆ ಎನ್ನ ಜನನವು ಮೊದಲೊ ಪೇಳ್ವದು
ಮುನ್ನ ಇದನನು ವಿಚಾರಗೈದು ವಿತ್ತ ಎನಗೀಯೆ |
ಘನ್ನ ಕರುಣಾನಿಧಿಯು ಎನುತಲಿ ಬಿನ್ನಹವ ನಾ ಮಾಡಿ ಯಾಚಿಪೆ
ಇನ್ನು ನಿಧಿಯನು ಇತ್ತು ಪಾಲಿಸು ದೂರ ನೋಡದಲೆ || ೭೫ ||

ತಂದೆ ತಾಯಿಯು ನೀನೆ ಲಕುಮಿ ಬಂಧು ಬಳಗವು ನೀನೆ ದೇವೀ
ಹಿಂದೆ ಮುಂದೇ ಎನಗೆ ನೀನೇ ಗುರುವು ಸದ್ಗತಿಯು |
ಇಂದಿರೆಯೆ ಎನ್ನ ಜೀವ ಕಾರಿಣಿ ಸಂದೇಹ ಎನಗಿಲ್ಲ ಪರಮಾನಂದ
ಸಮುದಯ ನೀಡೆ ಕರುಣವ ಮಾಡೆ ವರ ನೀಡೆ || ೭೬ ||

ನಾಥಳೆನಿಸುವಿ ಸಕಲ ಲೋಕಕೆ ಖ್ಯಾತಳೆಣಿಸುವೆ ಸರ್ವ ಕಾಲದಿ
ಪ್ರೀತಳಾಗಿರು ಎನಗೆ ಸಕಲವು ನೀನೆ ನಿಜವೆಂದೆ |
ಮಾತೆ ನೀನೇ ಎನಗೆ ಹರಿ ನಿಜ ತಾತ ಈರ್ವರು ನೀವೆ ಇರಲೀ
ರೀತಿಯಿಂದಲಿ ಭವದಿ ತೊಳಲಿಪುದೇನು ನಿಮ ನ್ಯಾಯ || ೭೭ ||

ಆದಿ ಲಕುಮಿ ಪ್ರಸನ್ನಳಾಗಿರು ಮೋದಜ್ಞಾನ ಸುಭಾಗ್ಯ ಧಾತ್ರಿಯೆ
ಛೇದಿಸಜ್ಞಾನಾದಿ ದೋಷವ ತ್ರಿಗುಣವರ್ಜಿತಳೆ |
ಸಾದರದಿ ನೀ ಕರೆದು ಕೈ ಪಿಡಿ ಮಾಧವನ ನಿಜ ರಾಣಿ ನಮಿಸುವೆ
ಬಾಧೆ ಗೊಳಿಸುವ ಋಣವ ಕಳೆದೂ ಶಿರಿಯೆ ಪೊರೆಯೆಂದೆ || ೭೮ ||

ವಚನಜಾಡ್ಯವ ಕಳೆವ ದೇವಿಯೆ ಎಚೆಯೆ ನೂತನ ಸ್ಪಷ್ಟ ವಾಕ್ಪದ
ನಿಚಯ ಪಾಲಿಸಿ ಎನ್ನ ಜಿಹ್ವಾಗ್ರದಲಿ ನೀ ನಿಂತು |
ರಚನೆ ಮಾಡಿಸು ಎನ್ನ ಕವಿತೆಯ ಪ್ರಚುರವಾಗುವ ತೆರದಿ ಮಾಳ್ಪುದು
ಉಚಿತವೇ ಸರಿಯೇನು ಪೇಳ್ವದು ತಿಳಿಯೆ ಸರ್ವಜ್ಞೆ || ೭೯ ||

ಸರ್ವ ಸಂಪದದಿಂದ ರಾಜಿಪೆ ಸರ್ವ ತೇಜೋರಾಶಿಗಾತ್ರಯೇ
ಸರ್ವರುತ್ತಮ ಹರಿಯ ರಾಣಿಯೆ ಸರ್ವರುತ್ತಮಳೆ |
ಸರ್ವ ಸ್ಥಳದಲಿ ದೀಪ್ಯಮಾನಳೆ ಸರ್ವ ವಾಕ್ಯಕೆ ಮುಖ್ಯ ಮಾನಿಯೆ
ಸರ್ವ ಕಾಲದಲೆನ್ನ ಜಿಹ್ವದಿ ನೀನೆ ನಟಿಸುವುದು || ೮೦ ||

ಸರ್ವ ವಸ್ತ್ವಪರೋಕ್ಷ ಮೊದಲೂ ಸರ್ವ ಮಹಾಪುರುಷಾರ್ಥ ದಾತಳೆ
ಸರ್ವಕಾಂತಿಗಳೊಳಗೆ ಶುಭ ಲಾವಣ್ಯ ದಾಯಕಳೇ |
ಸರ್ವ ಕಾಲದಿ ಸರ್ವ ಧಾತ್ರಿಯೆ ಸರ್ವ ರೀತಿಲಿ ಸುಮುಖಿಯಾಗಿ
ಸರ್ವ ಹೇಮ ಸುಪೂರ್ಣೆ ಎನ್ನಯ ನಯನದೊಳಗೆಸೆಯೆ || ೮೧ ||

ಸಕಲ ಮಹ ಪುರುಷಾರ್ಥ ದಾಯಿನಿ ಸಕಲ ಜಗವನು ಪೆತ್ತ ಜನನಿಯೆ
ಸಕಲರೀಶ್ವರೀ ಸಕಲ ಭಯಗಳ ನಿತ್ಯ ಸಂಹಾರೀ |
ಸಕಲ ಶ್ರೇಷ್ಠಳೆ ಸುಮುಖಿಯಾಗೀ ಸಕಲ ಭಾವವ ಧರಿಸಿ ಸರ್ವದ
ಸಕಲ ಹೇಮ ಸುಪೂರ್ಣೇ ಎನ್ನಯ ನಯನದೊಳಗೆಸೆಯೆ || ೮೨ ||

ಸಕಲ ವಿಧ ವಿಘ್ನಾಪಹಾರಿಣಿ ಸಕಲ ಭಕ್ತೋದ್ಧಾರಕಾರಿಣಿ
ಸಕಲ ಸುಖ ಸೌಭಾಗ್ಯದಾಯಿನಿ ನೇತ್ರದೊಳಗೆಸೆಯೇ |
ಸಕಲ ಕಲೆಗಳ ಸಹಿತ ನಿನ್ನಯ ಭಕುತನಾದವನೆಂದು ಸರ್ವದ
ವ್ಯಕುತಳಾಗಿರು ಎನ್ನ ಹೃದಯದ ಕಮಲ ಮಧ್ಯದಲಿ || ೮೩ ||

ನಿನ್ನ ಕರುಣಾ ಪಾತ್ರನಾಗಿಹ ಎನ್ನ ಗೋಸುಗ ನೀನೆ ತ್ವರದಿ
ಪ್ರಸನ್ನಳಾಗ್ಯಧಿ ದೇವಗಣನುತೆ ಸುಗುಣ ಪರಿಪೂರ್ಣೆ |
ಎನ್ನ ಪೆತ್ತಿಹ ತಾಯೇ ಸರ್ವದ ಸನ್ನಿಹಿತಳಾಗೆನ್ನ ಮನಿಯೊಳು
ನಿನ್ನ ಪತಿ ಸಹವಾಗಿ ಸರ್ವದ ನಿಲಿಸು ಶುಭದಾಯಿ || ೮೪ ||

ಎನ್ನ ಮುಖದಲಿ ನೀನೆ ನಿಂತು ಘನ್ನನಿವನೆಂದೆನಿಸಿ ಲೋಕದಿ
ಧನ್ಯ ಧನ್ಯನ ಮಾಡು, ವರಗಳ ನೀಡು ನಲಿದಾಡು |
ಅನ್ಯನಾ ನಿನಗಲ್ಲ ದೇವೀ ಜನ್ಯನಾದವನೆಂದು ತಿಳಿದೂ
ಅನ್ನ ವಸನವು ಧಾನ್ಯ ಧನವನು ನೀನೆ ಎನಗೀಯೆ || ೮೫ ||

ವತ್ಸ ಕೇಳೆಲೊ ಅಂಜಬೇಡವೋ ಸ್ವಚ್ಛ ಎನ್ನಯ ಕರವ ಶಿರದಲಿ
ಇಚ್ಛೆ ಪೂರ್ವಕ ನೀಡ್ದೆ ನಡಿ ಸರವತ್ರ ನಿರ್ಭಯದಿ |
ಉತ್ಸಹಾತ್ಮ ಮನೋಽನುಕಂಪಿಯೆ ಪ್ರೋತ್ಸಹದಿ ಕಾರುಣ್ಯ ದೃಷ್ಟಿಲಿ
ತುಚ್ಛ ಮಾಡದೆ ವೀಕ್ಷಿಸೀಗಲೆ ಲಕ್ಷ್ಮಿ ಒಲಿ ಎನಗೆ || ೮೬ ||

ಮುದದಿ ಕರುಣ ಕಟಾಕ್ಷ ಜನರಿಗೆ ಉದಯವಾಗಲು ಸಕಲ ಸಂಪದ
ಒದಗಿ ಬಪ್ಪುವು ಮಿಥ್ಯವಲ್ಲವು ಬುಧರ ಸಮ್ಮತವು |
ಅದಕೆ ನಿನ್ನಯ ಪದವ ನಂಬಿದೆ ಮುದದಿ ಎನ್ನಯ ಸದನದಲಿ ನೀನೊದಗಿ
ಭಾಗ್ಯದ ನಿಧಿಯ ಪಾಲಿಸು ಪದುಮೆ ನಮಿಸುವೆನು || ೮೭ ||

ರಾಮೆ ನಿನ್ನಯ ದೃಷ್ಟಿ ಲೋಕಕೆ ಕಾಮಧೇನೆಂದೆನಿಸಿ ಕೊಂಬುದು
ರಾಮೆ ನಿನ್ನಯ ಮನಸು ಚಿಂತಾರತ್ನ ಭಜಿಪರಿಗೆ |
ರಾಮೆ ನಿನ್ನಯ ಕರದ ದ್ವಂದ್ವವು ಕಾಮಿತಾರ್ಥವ ಕೇಳ್ವ ಜನರಿಗೆ
ಕಾಮಪೂರ್ತಿಪ ಕಲ್ಪವೃಕ್ಷವು ತಾನೆ ಎನಿಸಿಹುದು || ೮೮ ||

ನವವೆನಿಪ ನಿಧಿ ನೀನೆ ಇಂದಿರೆ ತವ ದಯಾಭಿಧ ರಸವೇ ಎನಗೇ
ಭವದಿ ದೇವಿ ರಸಾಯನವೆ ಸರಿ ಸರ್ವಕಾಲದಲಿ |
ಭುವನ ಸಂಭವೆ ನಿನ್ನ ಮುಖವೂ ದಿವಿಯೊಳೊಪ್ಪುವ ಚಂದ್ರನಂದದಿ
ವಿವಿಧ ಕಳೆಗಣ ಪೂರ್ಣವಾಗ್ಯಖಿಳಾರ್ಥ ಕೊಡುತಿಹುದು || ೮೯ ||

ರಸದ ಸ್ಪರ್ಶದಲಿಂದ ಲೋಹವು ಮಿಸುಣಿ ಭಾವವ ಐದೊ ತೆರದಲಿ
ಅಸಮ ಮಹಿಮಳೆ ನಿನ್ನ ಕರುಣ ಕಟಾಕ್ಷ ನೋಟದಲಿ |
ವಸುಧಿ ತಳದೊಳಗಿಪ್ಪ ಜೀವರ ಅಶುಭ ಕೋಟಿಗಳೆಲ್ಲ ಪೋಗೀ
ಕುಸುಮ ಗಂಧಿಯೆ ಮಂಗಳೋತ್ಸವ ಸತತವಾಗುವುದು || ೯೦ ||

ನೀಡು ಎಂದರೆ ಇಲ್ಲವೆಂಬುವ ರೂಢಿ ಜೀವರ ಮಾತಿಗಂಜುತ
ಬೇಡಿಕೊಂಬುದಕೀಗ ನಿನ್ನನು ಶರಣು ಪೊಂದಿದೆನು |
ನೋಡಿ ಕರುಣ ಕಟಾಕ್ಷದಿಂ ದಯ ಮಾಡಿ ಮನದಭಿಲಾಷೆ ಪೂರ್ತಿಸಿ
ನೀಡು ಎನಗಖಿಳಾರ್ಥ ಭಾಗ್ಯವ ಹರಿಯ ಸಹಿತದಲಿ || ೯೧ ||

ಕಾಮಧೇನು ಸುಕಲ್ಪತರು ಚಿಂತಾಮಣೀ ಸಹವಾಗಿ ನಿನ್ನಯ
ಕಾಮಿತಾರ್ಥಗಳೀವ ಕಳೆಗಳೆನಿಸಿ ಇರುತಿಹವು |
ರಾಮೆ ನಿನ್ನಯ ರಸರಸಾಯನ ಸ್ತೋಮದಿಂ ಶಿರ ಪಾದ ಪಾಣೀ
ಪ್ರೇಮಪೂರ್ವಕ ಸ್ಪರ್ಶವಾಗಲು ಹೇಮವಾಗುವುದು || ೯೨ ||

ಆದಿ ವಿಷ್ಣುನ ಧರ್ಮಪತ್ನಿಯೆ ಸಾದರದಿ ಹರಿ ಸಹಿತ ಎನ್ನಲಿ
ಮೋದದಿಂದಲಿ ಸನ್ನಿಧಾನವ ಮಾಡೆ ಕರುಣದಲಿ |
ಆದಿ ಲಕ್ಷ್ಮಿಯೆ ಪರಮಾನುಗ್ರಹವಾದ ಮಾತ್ರದಿ ಎನಗೆ ಪದೊ ಪದೆ
ಆದುಪುದು ಸರ್ವತ್ರ ಸರ್ವದ ನಿಧಿಯ ದರ್ಶನವು || ೯೩ ||

ಆವ ಲಕ್ಷ್ಮೀ ಹೃದಯ ಮಂತ್ರವ ಸಾವಧಾನದಿ ಪಠಣಗೈವನೊ
ಆವ ಕಾಲದಿ ರಾಜ್ಯಲಕ್ಷ್ಮಿಯನೈದು ಸುಖಿಸುವನು |
ಆವ ಮಹಾದಾರಿದ್ರ ದೋಷಿಯು ಸೇವಿಸೇ ಮಹ ಧನಿಕನಾಗುವ
ದೇವಿ ಅವನಾಲಯದಿ ಸರ್ವದ ಸ್ಥಿರದಿ ನಿಲಿಸುವಳು || ೯೪ ||

ಲಕುಮಿ ಹೃದಯದ ಪಠಣೆ ಮಾತ್ರದಿ ಲಕುಮಿ ತಾ ಸಂತುಷ್ಟಳಾಗೀ
ಸಕಲ ದುರಿತಗಳಳಿದು ಸುಖ ಸೌಭಾಗ್ಯ ಕೊಡುತಿಹಳು |
ವಿಕಸಿತಾನನೆ ವಿಷ್ಣುವಲ್ಲಭೆ ಭಕುತ ಜನರನು ಸರ್ವ ಕಾಲದಿ
ವ್ಯಕುತಳಾಗ್ಯವರನ್ನ ಪೊರೆವಳು ತನಯರಂದದಲಿ || ೯೫ ||

ದೇವಿ ಹೃದಯವು ಪರಮ ಗೋಪ್ಯವು ಸೇವಕನಿಗಖಿಳಾರ್ಥ ಕೊಡುವುದು
ಭಾವ ಪೂರ್ವಕ ಪಂಚಸಾವಿರ ಜಪಿಸೆ ಪುನಶ್ಚರಣ |
ಈ ವಿಧಾನದಿ ಪಠಣೆ ಮಾಡಲು ತಾ ವಲಿದು ಸೌಭಾಗ್ಯ ನಿಧಿಯನು
ತೀವ್ರದಿಂದಲಿ ಕೊಟ್ಟು ಸೇವಕರಲ್ಲಿ ನಿಲಿಸುವಳು || ೯೬ ||

ಮೂರು ಕಾಲದಿ ಜಪಿಸಲುತ್ತಮ ಸಾರ ಭಕುತಿಲಿ ಒಂದು ಕಾಲದಿ
ಧೀರಮಾನವ ಪಠಿಸಲವನಖಿಳಾರ್ಥವೈದುವನು |
ಆರು ಪಠಣವಗೈಯ್ಯಲಿದನನು ಭೂರಿ ಶ್ರವಣವ ಗೈದ ಮಾನವ
ಬಾರಿ ಬಾರಿಗೆ ಧನವ ಗಳಿಸುವ ಶಿರಿಯ ಕರುಣದಲಿ || ೯೭ ||

ಶ್ರೀ ಮಹತ್ತರ ಲಕ್ಷ್ಮಿಗೋಸುಗ ಈ ಮಹತ್ತರ ಹೃದಯ ಮಂತ್ರವ
ಪ್ರೇಮಪೂರ್ವಕ ಭಾರ್ಗವಾರದ ರಾತ್ರಿ ಸಮಯದಲಿ |
ನೇಮದಿಂದಲಿ ಪಂಚ ವಾರವ ಕಾಮಿಸೀಪರಿ ಪಠಣೆ ಮಾಡಲು
ಕಾಮಿತಾರ್ಥವನೈದಿ ಲೋಕದಿ ಬಾಳ್ವ ಮುದದಿಂದ || ೯೮ ||

ಶಿರಿಯ ಹೃದಯ ಸುಮಂತ್ರದಿಂದಲಿ ಸ್ಮರಿಸಿ ಅನ್ನವ ಮಂತ್ರಿಸಿಡಲೂ
ಶಿರಿಯ ಪತಿ ತಾನವರ ಮಂದಿರದೊಳಗೆ ಅವತರಿಪ |
ನರನೆ ಆಗಲಿ ನಾರಿಯಾಗಲಿ ಶಿರಿಯ ಹೃದಯ ಸುಮಂತ್ರದಿಂದಲಿ
ನಿರುತ ಮಂತ್ರಿತ ಜಲವ ಕುಡಿಯಲು ಧನಿಕ ಪುಟ್ಟುವನು || ೯೯ ||

ಆವನಾಶ್ವಿಜ ಶುಕ್ಲ ಪಕ್ಷದಿ ದೇವಿ ಉತ್ಸವ ಕಾಲದೊಳು ತಾ
ಭಾವ ಶುದ್ಧಿಲಿ ಹೃದಯ ಜಪ ಒಂದಧಿಕ ದಿನದಿನದಿ |
ಈ ವಿಧಾನದಿ ಜಪವ ಮಾಡಲು ಶ್ರೀವನದಿ ಸಂಪದವನೈದುವ
ಶ್ರೀವನಿತೆ ತಾ ಕನಕ ವೃಷ್ಟಿಯ ಕರೆವಳನವರತ || ೧೦೦ ||

ಆವ ಭಕುತನು ವರುಷ ದಿನ ದಿನ ಭಾವ ಶುದ್ಧಿಲಿ ಎಲ್ಲ ಪೊತ್ತೂ
ಸಾವಧಾನದಿ ಹೃದಯ ಮಂತ್ರವ ಪಠಿಸಲವನಾಗ |
ದೇವಿ ಕರುಣಕಟಾಕ್ಷದಿಂದಲಿ ದೇವ ಇಂದ್ರನಿಗಧಿಕನಾಗುವ
ಈ ವಸುಂಧರೆಯೊಳಗೆ ಭಾಗ್ಯದ ನಿಧಿಯು ತಾನೆನಿಪ || ೧೦೧ ||

ಶ್ರೀಶ ಪದದಲಿ ಭಕುತಿ ಹರಿಪದ ದಾಸ ಜನಪದ ದಾಸ ಭಾವವ
ಈಸು ಮಂತ್ರಗಳರ್ಥ ಸಿದ್ಧಿಯು ಗುರುಪದ ಸ್ಮೃತಿಯು |
ಲೇಸು ಜ್ಞಾನ ಸುಬುದ್ಧಿ ಪಾಲಿಸು ವಾಸವಾಗಿರು ಎನ್ನ ಮನೆಯಲಿ
ಈಶ ಸಹ ಎನ ತಾಯೆ ಉತ್ತಮ ಪದವು ನೀ ಶಿರಿಯೇ || ೧೦೨ ||

ಧರಣಿ ಪಾಲಕನೆನಿಸು ಎನ್ನನು ಪುರುಷರುತ್ತಮನೆನಿಸು ಸರ್ವದ
ಪರಮವೈಭವ ನಾನವಿಧವಾದಾರ್ಥ ಸಿದ್ಧಿಗಳಾ |
ಪಿರಿದು ಕೀರ್ತಿಯ ಬಹಳ ಭೋಗವ ಪರಮ ಭಕ್ತಿ ಜ್ಞಾನ ಸುಮತಿಯ
ಪರಿಮಿತಿಲ್ಲದೆ ಯಿತ್ತು ಪುನರಪಿ ಸಲಹು ಶ್ರೀದೇವಿ || ೧೦೩ ||

ವಾದಮಾಡೋದಕರ್ಥ ಸಿದ್ಧಿಯು ಮೋದತೀರ್ಥರ ಮತದಿ ದೀಕ್ಷವು
ಸಾದರದಿ ನೀನಿತ್ತು ಪಾಲಿಸು ವೇದದಭಿಮಾನಿ |
ಮೋದದಲಿ ಪುತ್ರಾರ್ಥ ಸಿದ್ಧಿಯು ಓದದಲೆ ಶಿರಿ ಬ್ರಹ್ಮವಿದ್ಯವು
ಆದಿ ಭಾರ್ಗವಿಯಿತ್ತು ಪಾಲಿಸು ಜನ್ಮ ಜನ್ಮದಲಿ || ೧೦೪ ||

ಸ್ವರ್ಣ ವೃಷ್ಟಿಯ ಎನ್ನ ಮನೆಯಲಿ ಕರೆಯೆ ಧಾನ್ಯ ಸಮೃದ್ಧಿ ದಿನ ದಿನ
ಭರದಿ ನೀ ಕಲ್ಯಾಣ ವೃದ್ಧಿಯ ಮಾಡೆ ಸಂಭ್ರಮದಿ |
ಶಿರಿಯೆ ಅತುಳ ವಿಭೂತಿ ವೃದ್ಧಿಯ ಹರುಷದಿಂದಲಿ ಗೈದು ಧರೆಯೊಳು
ಮೆರೆಯೆ ಸಂತತ ಉಪಮೆಯಿಲ್ಲದೆ ಹರಿಯ ನಿಜ ರಾಣಿ || ೧೦೫ ||

ಮಂದಹಾಸ ಮುಖಾರವಿಂದಳೆ ಇಂದುಸೂರ್ಯರ ಕೋಟಿಭಾಸಳೆ
ಸುಂದರಾಂಗಿಯೆ ಪೀತವಸನಳೆ ಹೇಮಭೂಷಣಳೇ |
ಕುಂದುಯಿಲ್ಲದ ಬೀಜ ಪೂರಿತ ಚಂದವಾದ ಸುಹೇಮಕಲಶಗ-ಳಿಂದ
ನೀನೊಡಗೂಡಿ ತೀವ್ರದಿ ಬರುವುದೆನ ಮನಿಗೆ || ೧೦೬ ||

ನಮಿಪೆ ಶ್ರೀ ಹರಿ ರಾಣಿ ನಿನಪದ ಕಮಲಯುಗಕನವರತ ಭಕುತಿಲಿ
ಕಮಲೆ ನಿನ್ನಯ ವಿಮಲ ಕರಯುಗ ಎನ್ನ ಮಸ್ತಕದಿ |
ಮಮತೆಯಿಂದಲಿ ಇಟ್ಟು ನಿಶ್ಚಲ ಅಮಿತ ಭಾಗ್ಯವ ನೀಡೆ ತ್ವರದೀ
ಕಮಲಜಾತಳೆ ರಮೆಯೆ ನಮೋ ನಮೋ ಮಾಳ್ಪೆನನವರತಾ || ೧೦೭||

ಮಾತೆ ನಿನ್ನಯ ಜಠರಕಮಲ ಸುಜಾತನಾಗಿಹ ಸುತನ ತೆರದಲಿ
ಪ್ರೀತಿ ಪೂರ್ವಕ ಭಾಗ್ಯ ನಿಧಿಗಳನಿತ್ತು ನಿತ್ಯದಲಿ |
ನೀತ ಭಕುತೀ ಜ್ಞಾನ ಪೂರ್ವಕ ದಾತ ಗುರು ಜಗನ್ನಾಥ ವಿಠಲನ
ಪ್ರೀತಿಗೊಳಿಸುವ ಭಾಗ್ಯ ಪಾಲಿಸಿ ಪೊರೆಯೆ ನೀ ಎನ್ನ || ೧೦೮ ||

|| ಶ್ರೀ ಕೃಷ್ಣಾರ್ಪಣಮಸ್ತು ||


shrI guru jagannAtha dAsa virachita shrI lakShmI hRudaya

SrI manOhare lakumi tavapada tAmarasayuga bhajipe nityadi
sOmasOdari parama maMgaLe taptakAMcanaLE |
sOmasUrya sutEjOrUpaLe hEmasannibha pItavasanaLe
cAmIkaramaya sarvabhUShaNa jAlamaMDitaLE ||1||

bIjapUrita hEmakalaSava rAjamAna suhEma jalajava
naija karadali piDidukoMDu bhakuta janatatigE |
mAjadale sakalEShTa nIDuva rAjamukhi mahadAdi vaMdyaLe
mUjagattige mAte hari vAmAMkadoLagippe ||2||

SrI mahattara bhAgyamAniyE staumi lakumi anAdi sarva sukAma
phalagaLanIva sAdhana sukhava koDutippa |
kAmajananiye smaripe nityadi prEmapUrvaka prErisennanu
hE mahESvari ninna vacanava dharisi bhajisuvenu ||3 ||

sarva saMpadavIva lakumiye sarva bhAgyavanIva dEviye
sarvamaMgaLavIva suravara sArvabhaumiyaLE |
sarva j~jAnavanIva j~jAniye sarva sukha phaladAyi dhAtriye
sarvakAladi bhajisi bEDide sarva puruShArtha || 4 ||

natipe vij~jAnAdi saMpada matiya nirmala citra vAkpada
tatiya nIDuvadyanage sarvada sarva guNapUrNE |
natipa janariganaMta saukhyava natiSayadi nInitta vArteyu
vitatavAgihadeMdu bEDide bhaktavatsalaLE ||5||

sarva jIvara hRudaya vAsini sarva sAra subhOktre sarvada
sarva viSvadalaMtarAtmake vyApte nirlipte |
sarva vastu samUhadoLage sarva kAladi ninna sahitadi
sarva guNa saMpUrNa SrI hari tAne irutippa ||6||

tariye nI dAridrya SOkava pariye nInaj~jAna timirava
irisu tvatpada padma manmanosarasi madhyadali |
carara manasina duHkha bhaMjana parama kAraNavenipa ninnaya
karuNapUrNa kaTAkShadiMdabhiShEka nI mADE || 7 ||

aMbA enage prasannaLAgi tuMbi sUsuva parama karuNA –
veMba pIyuSha kaNadi tuMbida dRuShTi tudiyiMda |
aMbujAkShiye nODi enna mani tuMbisIgale dhAnya dhanagaLa
haMbalisuvenu pAdapaMkaja namipenanavarata || 8 ||

SAMtinAmake SaraNa pAlake kAMtinAmake guNagaNASrayE
SAMtinAmake duritanASini dhAtri namisuvenu |
bhrAMtinASani bhavada SamadiM SrAMtanAdenu bhavadi enage
nishAMta dhana nidhi dhAnya kOSavanittu salahuvudu || 9 ||

jayatu lakShmI lakShaNAMgiye jayatu padmA padmavaMdyaLe
jayatu vidyA nAme namO namO viShNuvAmAMkE |
jayapradAyake jagadivaMdyaLe jayatu jaya cannAgi saMpada
jayave pAlisu enage sarvada namipenanavarata ||10||

jayatu dEvI dEva pUjyaLe jayatu bhArgavi bhadra rUpaLe
jayatu nirmala j~jAnavEdyaLe jayatu jaya dEvi |
jayatu satyAbhUti saMsthite jayatu ramyA ramaNa saMsthite
jayatu sarva suratna nidhiyoLagippe nityadali ||11||

jayatu SuddhA kanaka bhAsaLe jayatu kAMtA kAMti gAtraLe
jayatu jaya Subha shAMte SIghrade saumya guNa ramyE |
jayatu jayagaLadAyi sarvada jayave pAlisu sarva kAladi
jayatu jaya jaya dEvi ninnanu vijaya bEDidenu ||12||

Ava ninnaya kaLegaLiMdali A viriMciyu rudra surapati
dEva varamukha jIvarellarU sarvakAladali |
jIvadhAraNe mADOrallade Ava SaktiyU kANenavarige
dEvi nI prabhu ninna Saktili Saktarenisuvaru || 13 ||

Ayu modalAgippa paramAdAya sRuShTisu pAlanAdi svakIya
karmava mADisuvi ninagAru sariyuMTE |
tOyajAlaye lOkanAthaLe tAyi ennanu poreyE eMdu
bAyi biDuvenu nOkanIyana jAye mAM pAhi ||14||

bomma ennaya phaNiya phalakadi hamminiMdali bareda lipiyanu
amma adananu toDedu nI bari byAre vidhadiMda |
ramyavAgiha ninna karuNA harmyadoLagirutippa bhAgyava
ghammanE dorevaMte I pari nirmisOttamaLe ||15||

kanaka mudrike pUrNa kalaSava enage arpisu januma janumadi
janani bhAgyadabhimAni ninagabhinamisi binnaipe |
kanasilAdaru bhAgya hInanu enisabAradu enna lOkadi
enisu bhAgyada nidhiyu pari pari uNisu sukhaphalavA || 16||

dEvi ninnaya kaLegaLiMdali jIvisuvudI jagavu nityadi
bhAvisIpari enage saMtata nikhila saMpadava |
dEvi ramya mukhAraviMdaLe nI validu saubhAgya pAlisu
sEvakAdhamaneMdu byAgane oliyE nI enage ||17||

hariya hRudayadi nIne nityadi iruva teradali ninna kaLegaLu
irali ennaya hRudaya sadanadi sarvakAladali |
niruta ninnaya bhAgya kaLegaLu beretu sukhagaLa salisi salahali
shiriye SrIhari rANi sarasija nayane kalyANi ||18||

sarva saukhya pradAyi dEviye sarva bhaktarigabhaya dAyiye
sarva kAladalacala kaLegaLa nIDu ennalli |
sarva jagadoLu nanna ninnaya sarva sukaLA pUrNanenisi
sarva vibhavadi meresu saMtata vighnavilladale ||19||

mudadi ennaya phAladali shiri padume ninnaya parama kaLeyu
vadagi sarvada irali SrI vaikuMTha gata lakShmI |
udayavAgali nEtrayugaLadi sadaya mUrtiye satyalOkada
cadure lakumiye kaLeyu vAkyadi nilisalanavarata || 20||

SvEta diviyoLagiruva lakumiye nItavAgiha kaLeyu nityadi
mAte ennaya karadi saMtata vAsavAgirali |
pAtho nidhiyoLagippa lakumiye jAtakaLeyu mamAMgadali
saMprIti pUrvakavirali sarvada pAhi mAM pAhi ||21||

iMdu sUryaru elli tanakA kuMdadale iruvarO shiri
iMdirESanu yAva kAlada tanaka irutippa |
iMdirAtmaka kaLeya rUpagaLaMdinada pari aMtarippavu
kuMdu illade enna baLiyali tAve nelasirali ||22||

sarvamaMgaLe suguNa pUrNaLe sarva aiSvaryAdi maMDite
sarva dEvagaNAbhivaMdyaLe AdimahalakShmI |
sarvakaLe saMpUrNe ninnaya sarvakaLegaLu enna hRudayadi
sarvakAladalirali eMdu ninna prArthisuve ||23||

janani ennaj~jAna timirava dinadinadi saMharisi ninnadu nenisi
dhyAnava mALpa nirmala j~jAna saMpadava |
kanaka maNi dhana dhAnya bhAgyava tanitu nI enagittu pAlisu
minugutiha ghanavAda ninnaya kaLeyu SObhisali ||24||

niruta tamatati haripa sUryana teradi kShipradi harisalakShmiya
saraku mADade taridu ODisu durita rASigaLa |
paripariya saubhAgya nidhiyanu haruShadiMdali nIDi ennanu
DharaDharadi kRuta kRutyaniLeyoLagenisu dayadiMda || 25||

atuLa mahadaiSvarya maMgaLatatiyu ninnaya kaLegaLoLagE
vitatavAgi virAjamAnadalippa kAraNadI |
Srutiyu ninnaya mahime tiLiyadu tutisaballenE tAyi pELvudu
mativihInanu ninna karuNake pAtranenisamma ||26||

ninna mahAdAvESa bhAgyake enna arhana mADu lakumiye
ghannatara saubhAgya nidhi saMpannanenisenna |
ranne ninnaya pAdakamalava mannadali saMstutisi bEDuve
ninna paratara karuNa kavacava toDisi poreyamma ||27||

pUta narananu mADi kaLegaLa vrAtadiMdali enna niShThava
ghAtisIgale enage olidu baMdu suLi muMde |
mAte bhArgavi karuNi ninnaya nAthaniMdoDagUDi saMtata
prItaLAgiru enna maneyoLu nillu nI biDade ||28||

paramashiri vaikuMTha lakumiye hariya sahitadalenna muMdake
haruSha paDutali baMdu SObhisu kAla kaLeyadale |
varade nA bAreMdu ninnanu karede manavanu muTTi bhakutiya
bharadi bAgida Siradi namisuve kRupeya mADeMdu ||29||

satyalOkada lakumi ninnaya satya sannidhi enna maneyali
nitya nityadi perci habbali jagadi janatatige |
atyadhika AScarya tOrisi martyarOttamanenisi nI kRuta
kRutyanIpari mADi shiri harigUDi nalidADe ||30||

kShIravAridhi lakumiyE pati nArasiMhana kUDi baruvudu
dUra nODade sAregeredu prasAda koDu enage |
vArijAkShiye ninna karuNA sAra pUrNa kaTAkShadiMdali
bAri bArige nODi pAlisu parama pAvanne ||31||

SvEta dvIpada lakumi trijaganmAte nI ena muMde SIghradi
nAthaniMdoDagUDi bAre prasanna mukha kamale |
jAtarUpa sutEjarUpaLe mAtariSva mukhArcitAMghriye
jAtarUpOdarAMDa saMghake mAte prakhyAte ||32||

ratnagarbhana putri lakumiye ratnapUrita bhAMDa nicayava
yatnapUrvaka taMdu ennaya muMde nI nillu |
ratnakhacita suvarNamAleya ratnapadakada hAra samudaya
jatnadiMdali nIDi sarvada pAhI paramApte ||33||

enna maneyali sthairyadiMdali innu niScalaLAgi niMtiru
unnatAdaiSvarya vRuddhiyagaisu nirmalaLe |
sannutAMgiye ninna tutipe prasanna hRudayadi nitya nI
prahasanmukhadi mAtADu varagaLa nIDu nalidADu ||34||

shiriye shiri mahAbhUti dAyike parame ninnoLagippa
sumahattara navAtmaka nidhigaLUrdhvake taMdu karuNadali |
karadi paDidadanetti tOrisi tvaradi nI enagittu pAlisu
dharaNi rUpaLe ninna caraNake SaraNu nA mALpe ||35||

vasudhe ninnoLagippa vasuvanu vaSava mALpudu enage sarvada
vasusudOgdhiyu eMba nAmavu ninage irutihadu
asama mahimaLe ninna Subhatama basurinoLagirutippa

nidhiyanu besesu IgalE hasidu baMdage aSanavittaMte ||36||

hariya rANiye ratnagarbhaLe sariyu yArI surara stOmadi
sarasijAkShiye ninna basiroLagiruva navanidhiya |
mereva hEmada giriya teradali teredu tOrisi salisu enage
parama karuNASAli namO namO eMdu more pokke ||37||

rasataLada shiri lakumidEviye SaSi sahOdari SIghradiMdali
asama ninnaya rUpa tOrisu enna puradalli |
kusumagaMdhiyE ninnanariyenu vasumatI taLadalli bahupari
posatu enipudu ninna olumeyu sakala janatatige || 38||

nAgavENiye lakumi nI manovEgadiMdali baMdu ennaya
jAgumADade Siradi hastavaniTTu mudadiMda |
nIgisI dAridra du:khava sAgisI bhavabhAra parvata
tUgisu nI enna sadanadi kanaka bhAragaLA ||39||

aMjabEDavo vatsA enutali maMjuLOktiya nuDidu karuNA –
puMja manadali baMdu SIghradi kArya mADuvudu |
kaMjalOcane kAmadhEnu su-raMjipAmara taruvu enisuvi
saMjayapradaLAgi saMtata pAhi mAM pAhi || 40 ||

dEvi SIghradi baMdu bhUmI-dEvi saMbhave enna jananiye
kAmanayyana rANi ninnaya bhRutya nAneMdu |
bhAvisIpari ninna puDukide sEve nI kaikoMDu manmano
bhAva pUrtisi karuNisennanu SaraNu SaraNeMbe || 41||

jAgarUkadi niMtu mattE jAgarUkadi enage nityadi
tyAgabhOgake yOgyavenipAkShayya hEmamaya |
pUga kanaka saMpUrNa ghaTagaLa yOga mALpudu lOkajananI
Iga ennaya bhAra ninnadu karedu kai piDiye || 42 ||

dharaNigata nikShEpagaLanuddharisi nI ena muMde sErisi
kiriya nagemogadiMda nODuta nIDu navanidhiya |
sthiradi ena maMdiradi niMtU parama maMgaLa kArya mADisu
shiriye nInE olidu pAlisu mOkSha sukha konige || 43 ||

nille lakumI sthairya bhAvadi nillu ratna hiraNya rUpaLe
ella varagaLanittu nanage prasannamukhaLAgu
ellu irutiha kanaka nidhigaLanellanU nI taMdu nIDuvudu
phullalOcane tOri nidhigaLa taMdu poreyamma || 44 ||

iMdralOkadalidda teradali niMdru ennaya gRuhadi nityadi
caMdravadaneye lakumi dEvi nIDe enagabhaya |
niMdralArenu RuNada bAdhege taMdramati nAnAde
bhavadoLupEMdra vallabhe abhaya pAlisu namipe majjanani || 45 ||

baddha snEha virAjamAnaLe Suddha jAMbUnadadi saMsthite
muddu mOhana mUrti karuNadi nODe nI enna |
bidde nA ninna pAda padumake uddharipudeM bEDidenu
aniruddha rANi kRupAkaTAkShadi nODe mAtADe || 46 ||

bhUmi gata shiridEvi SObhite hEmamaye ellelli irutihe
tAmarasa saMbhUte ninnaya rUpa tOrenage |
bhUmiyali bahu rUpadiMdali prEmapUrvaka krIDegaiyuta
hEmamaya paripUrNa hastava Sirada mElirisu || 47 ||

phalagaLIva subhAgya lakumiye lalita sarva purAdhi vAsiye
kaluSha SUnyaLe lakumi dEviye pUrNa mADenna |
kulaje kuMkuma SObhiphAlaLe calita kuMDala karNa bhUShite
jalajalOcane jAgra kAladi salisu enagiShTa || 48 ||

tAye ChaMdadalaMdayOdhyadi dayadi nInE niMtu
paTTaNa bhayava ODisi jAgu mADade matte mudadiMda |
jayava nIDida teradi ennAlayadi prEmadi baMdu kUDvadu
jayapradAyini vividha vaibhavadiMda oDagUDi || 49 ||

bAre lakumI enna sadanake sAridenu tava pAda padumake
tOri ennaya gRuhadi nIne sthiradi nelesiddu |
sAra karuNArasavu tuMbida cArujalaruha nEtrayugmaLe
pArugANisu parama karuNiye riktatanadiMda || 50 ||

shiriye ninnaya hasta kamalava Siradi nInE irisi ennanu
karuNaveMbAmRutada kaNadali snAna gaisinnu |
sthiradi sthitiyanu mADu sarvada sarva rAja gRuhastha lakumiye
tvaradi mOdadi yuktaLAgiru enna muMdinnu || 51 ||

nIne ASIrvadisi abhayava nIne enage ittu sAdara
nIne enna Siradali hastava irisu karuNadali |
nIne rAjara gRuhada lakShmiyu nIne sarva subhAgya lakShmiyu
hInavAgade ninna kaLegaLa vRuddhi mADinnu || 52 ||

Adisiri mahalakumi viShNuvina mOdamaya vAmAMka
ninaganuvAda sva sthaLaveMdu tiLidu nIne nelesiddi |
Adi dEviye ninna rUpava mOdadiMdali tOri ennoLu
krOdhavillade nitya ennanu poreye karuNadali || 53 ||

oliye nI mahalakumi bEgane oliye maMgaLamUrti sarvada
naliye calisade hRudaya maMdiradalli nI niruta |
lalitavEdagaLelli tanakA tiLidu hariguNa pADutippavO
jalajalOcana viShNu ninnoLu alli nInippe || 54 ||

alli pariyaMtaradi ninnaya ella kaLegaLu enna maniyali
nillisI sukha vrAta nIDuta sarvakAladali |
ella janakAhlAda caMdira kulladE Subha pakSha dinadoLu
nilladalE kaLe vRuddhiyaiduva teradi mADenna || 55 ||

shiriye nI vaikuMTha lOkadi shiriye nI pAlgaDala madhyadi
iruva teradali enna maniyoLu viShNu sahitAgi
niruta j~jAniya hRudaya madhyadi miruguvaMdadalenna sadanadi
hariya sahitadi nitya rAjisu nIDi kAmitava || 56 ||

SrInivAsana hRudaya kamaladi nIne niMtiruvaMte sarvada
A nArAyaNa ninna hRudayadi iruva teradaMte |
nInu nArAyaNanu ibbaru sAnurAgadi enna manadoLu
nyUnavAgade niMtu manOratha salisi poreyeMde || 57 ||

vimalatara vij~jAna vRuddhiya kamale ennaya manadi mALpudu
amita sukha saubhAgya vRuddhiya mADu maMdiradi |
rameye ninnaya karuNa vRuddhiya sumanadiMdali mADu ennali
amarapAdape svarNavRuShTiya mADu maMdiradi || 58 ||

enna tejanava mADadiru suraranne ASrita kalpabhUjaLe
munna bhaktara ciMtAmaNi suradhEnu nInamma |
ghanna viSvada mAte nIne prasannaLAgiru enna bhavanadi
sannutAMgiye putra mitra kaLatra jana nIDe || 59 ||

Adi prakRutiye bommanAMDake Adi sthitilaya bIja bhUtaLe
mOda cinmaya gAtre prAkRuta dEha varjitaLe |
vEdavEdyaLe bommanAMDava AdikUrmada rUpadiMdala-
nAdikAladi pottu merevadu Enu citravidu || 60 ||

vEda modalu samasta suraru vEda stOmagaLiMda ninnayAgAdha
mahimava pogaLeneMdare Saktaravaralla
OdubArada maMdamati nAnAda kAraNa Saktiyillavu
bOdhadAyake nIne stavanava gaisu enniMda || 61 ||

maMda niMdali suguNa vRuMdava caMdadali nI nuDisi ennaya
maMdamatiyanu taridu nirmala j~jAniyeMdenisu
iMdireye tava pAdapadumada dvaMdva stutisuva Sakutiyittu
kuMdu bArada kavite pELisu eMdu vaMdipenu || 62 ||

vatsanocanava kELe nI shiri vatsalAMCana vakShamaMdire
tucCa mADade manake taMdu nIne pAlipudu |
svacCavAgiha sakala saMpada utsAhadi nI nIDi manmanO
icCe pUrtisu janani bEDuve nIne sarvaj~je || 63 ||

ninna moreyanuyaidi pUrvadi dhanyarAdaru dharaNiyoLagApanna
pAlake eMdu ninnanu naMbi morapokke |
ninna bhakutaganaMta saukhyavu ninnalE parabhakuti avanige
ninna karuNake pAtranAguvaneMdu Srutisiddha || 64 ||

ninna bhakutage hAni illavu banna baDisuvarillaveMdigu
munna bhavabhayavillaveMdA Srutiyu pELuvudu |
enna karuNAbalavu avanali ghannavAgI iruvudeMbA
ninna vacanava kELi I kShaNa prANa dharisihenu || 65 ||

nAnu ninnAdhIna jananiye nInu ennali karuNa mALpudu
hIna baDatana dOSha kaLedU nIne nelasiddU |
mAna mani dhana dhAnya bhakuti j~jAna sukha vairAgya mUruti
dhyAna mAnasa pUje mADisu nIne enniMda || 66 ||

ninna aMta:karuNadiMdali munna nAnE pUrNa kAmanu
innu Aguve parama bhakta kucElanaMdadali |
binnaipe tava pAda padmake banna nA baDalAre dEvI
enna nI kara piDidu pAlisu riktatanadiMda || 67 ||

kShaNavu jIvisalAre ninnaya karuNavillade avani taLadali
kShaNika phalagaLa bayasalArene mOkSha sukha dAyi |
gaNane mADade nIca dEvara haNidu biDuvI bAdhe koTTare
paNava mADuve ninna baLiyali mithyavEnilla || 68 ||

tanayanali vAtsalyadiMdali janani pAlali tuMbi tuLukuva
stanavanittu Adarisi uNisuva janani teradaMte
ninage suraroLu samara kANenu animiSEShara paDedu pAlisi
dinadinadi sukhavittu pAlisu karuNa vAridhiyE || 69 ||

Esu kalpadi ninage putranO Asu kalpadi mAte nIne
lEShavidakanumAnavillavu sakala Srutisiddha |
lEsu karuNAsAravenisuva sUsuvAmRuta dhAradiMdali
sOsiniMdabhiShEka gaidabhilAShe salisamma || 70 ||

dOShamaMdiranenipa ennali lESha puDakalu guNagaLilla viSESha
dRuShTi supAMsu kaNagaLa gaNane bahu sulabha
rASiyaMdadalippa ennagha sAsirAkShagaSakya gaNisalu
Esu pELali tAye tanayana tappu sahisamma || 71 ||

pApijanaroLagagragaNyanu kOpa pUrita citta maMdira
I payOjabhavAMDa puDukidarAru sariyilla
SrIpanarasiye kELu dOShavu lOpavAguva teradi mADI
rApu mADade salahu SrIhariNi kalyANi || 72 ||

karuNaSAliyaroLage nI balu karuNaSAliyu eMdu ninnaya
caraNayugakabhinamisi sArdenu poreye poreyeMdu |
haraNa nilladu haNavu illade SaraNaranudina porevo dEvi suparaNa
vAhana rANi ennanu kAye varavIye || 73 ||

udara kara Sira ToMka sUliya modalE sRuShTiya gaiyyadiralau

Shadhada sRuShTiyu vyarthavAguva teradi jagadoLage |
vidhiyu ennanu sRujisadiddare padume ninna dayALutanavU
pudugi pOditu eMdu tiLidA bomma sRujisidanu || 74 ||

ninna karuNavu modalo dEviye enna jananavu modalo pELvadu
munna idananu vicAragaidu vitta enagIye |
ghanna karuNAnidhiyu enutali binnahava nA mADi yAcipe
innu nidhiyanu ittu pAlisu dUra nODadale || 75 ||

taMde tAyiyu nIne lakumi baMdhu baLagavu nIne dEvI
hiMde muMdE enage nInE guruvu sadgatiyu |
iMdireye enna jIva kAriNi saMdEha enagilla paramAnaMda
samudaya nIDe karuNava mADe vara nIDe || 76 ||

nAthaLenisuvi sakala lOkake khyAtaLeNisuve sarva kAladi
prItaLAgiru enage sakalavu nIne nijaveMde |
mAte nInE enage hari nija tAta Irvaru nIve iralI
rItiyiMdali bhavadi toLalipudEnu nima nyAya || 77 ||

Adi lakumi prasannaLAgiru mOdaj~jAna subhAgya dhAtriye
CEdisaj~jAnAdi dOShava triguNavarjitaLe |
sAdaradi nI karedu kai piDi mAdhavana nija rANi namisuve
bAdhe goLisuva RuNava kaLedU shiriye poreyeMde || 78 ||

vacanajADyava kaLeva dEviye eceye nUtana spaShTa vAkpada
nicaya pAlisi enna jihvAgradali nI niMtu |
racane mADisu enna kaviteya pracuravAguva teradi mALpudu
ucitavE sariyEnu pELvadu tiLiye sarvaj~je || 79 ||

sarva saMpadadiMda rAjipe sarva tEjOrASigAtrayE
sarvaruttama hariya rANiye sarvaruttamaLe |
sarva sthaLadali dIpyamAnaLe sarva vAkyake mukhya mAniye
sarva kAladalenna jihvadi nIne naTisuvudu || 80 ||

sarva vastvaparOkSha modalU sarva mahApuruShArtha dAtaLe
sarvakAMtigaLoLage Subha lAvaNya dAyakaLE |
sarva kAladi sarva dhAtriye sarva rItili sumukhiyAgi
sarva hEma supUrNe ennaya nayanadoLageseye || 81 ||

sakala maha puruShArtha dAyini sakala jagavanu petta jananiye
sakalarISvarI sakala bhayagaLa nitya saMhArI |
sakala SrEShThaLe sumukhiyAgI sakala bhAvava dharisi sarvada
sakala hEma supUrNE ennaya nayanadoLageseye || 82 ||

sakala vidha vighnApahAriNi sakala bhaktOddhArakAriNi
sakala sukha saubhAgyadAyini nEtradoLageseyE |
sakala kalegaLa sahita ninnaya bhakutanAdavaneMdu sarvada
vyakutaLAgiru enna hRudayada kamala madhyadali || 83 ||

ninna karuNA pAtranAgiha enna gOsuga nIne tvaradi
prasannaLAgyadhi dEvagaNanute suguNa paripUrNe |
enna pettiha tAyE sarvada sannihitaLAgenna maniyoLu
ninna pati sahavAgi sarvada nilisu SubhadAyi || 84 ||

enna mukhadali nIne niMtu ghannanivaneMdenisi lOkadi
dhanya dhanyana mADu, varagaLa nIDu nalidADu |
anyanA ninagalla dEvI janyanAdavaneMdu tiLidU
anna vasanavu dhAnya dhanavanu nIne enagIye || 85 ||

vatsa kELelo aMjabEDavO svacCa ennaya karava Siradali
icCe pUrvaka nIDde naDi saravatra nirbhayadi |
utsahAtma manO&nukaMpiye prOtsahadi kAruNya dRuShTili
tucCa mADade vIkShisIgale lakShmi oli enage || 86 ||

mudadi karuNa kaTAkSha janarige udayavAgalu sakala saMpada
odagi bappuvu mithyavallavu budhara sammatavu |
adake ninnaya padava naMbide mudadi ennaya sadanadali nInodagi
bhAgyada nidhiya pAlisu padume namisuvenu || 87 ||

rAme ninnaya dRuShTi lOkake kAmadhEneMdenisi koMbudu
rAme ninnaya manasu ciMtAratna bhajiparige |
rAme ninnaya karada dvaMdvavu kAmitArthava kELva janarige
kAmapUrtipa kalpavRukShavu tAne enisihudu || 88 ||

navavenipa nidhi nIne iMdire tava dayAbhidha rasavE enagE
bhavadi dEvi rasAyanave sari sarvakAladali |
bhuvana saMbhave ninna mukhavU diviyoLoppuva caMdranaMdadi
vividha kaLegaNa pUrNavAgyakhiLArtha koDutihudu || 89 ||

rasada sparSadaliMda lOhavu misuNi bhAvava aido teradali
asama mahimaLe ninna karuNa kaTAkSha nOTadali |
vasudhi taLadoLagippa jIvara aSubha kOTigaLella pOgI
kusuma gaMdhiye maMgaLOtsava satatavAguvudu || 90 ||

nIDu eMdare illaveMbuva rUDhi jIvara mAtigaMjuta
bEDikoMbudakIga ninnanu SaraNu poMdidenu |
nODi karuNa kaTAkShadiM daya mADi manadabhilAShe pUrtisi
nIDu enagakhiLArtha bhAgyava hariya sahitadali || 91 ||

kAmadhEnu sukalpataru ciMtAmaNI sahavAgi ninnaya
kAmitArthagaLIva kaLegaLenisi irutihavu |
rAme ninnaya rasarasAyana stOmadiM Sira pAda pANI
prEmapUrvaka sparSavAgalu hEmavAguvudu || 92 ||

Adi viShNuna dharmapatniye sAdaradi hari sahita ennali
mOdadiMdali sannidhAnava mADe karuNadali |
Adi lakShmiye paramAnugrahavAda mAtradi enage pado pade
Adupudu sarvatra sarvada nidhiya darSanavu || 93 ||

Ava lakShmI hRudaya maMtrava sAvadhAnadi paThaNagaivano
Ava kAladi rAjyalakShmiyanaidu sukhisuvanu |
Ava mahAdAridra dOShiyu sEvisE maha dhanikanAguva
dEvi avanAlayadi sarvada sthiradi nilisuvaLu || 94 ||

lakumi hRudayada paThaNe mAtradi lakumi tA saMtuShTaLAgI
sakala duritagaLaLidu sukha saubhAgya koDutihaLu |
vikasitAnane viShNuvallabhe bhakuta janaranu sarva kAladi
vyakutaLAgyavaranna porevaLu tanayaraMdadali || 95 ||

dEvi hRudayavu parama gOpyavu sEvakanigakhiLArtha koDuvudu
bhAva pUrvaka paMcasAvira japise punaScaraNa |
I vidhAnadi paThaNe mADalu tA validu saubhAgya nidhiyanu
tIvradiMdali koTTu sEvakaralli nilisuvaLu || 96 ||

mUru kAladi japisaluttama sAra bhakutili oMdu kAladi
dhIramAnava paThisalavanakhiLArthavaiduvanu |
Aru paThaNavagaiyyalidananu bhUri SravaNava gaida mAnava
bAri bArige dhanava gaLisuva shiriya karuNadali || 97 ||

SrI mahattara lakShmigOsuga I mahattara hRudaya maMtrava
prEmapUrvaka bhArgavArada rAtri samayadali |
nEmadiMdali paMca vArava kAmisIpari paThaNe mADalu
kAmitArthavanaidi lOkadi bALva mudadiMda || 98 ||

shiriya hRudaya sumaMtradiMdali smarisi annava maMtrisiDalU
shiriya pati tAnavara maMdiradoLage avataripa |
narane Agali nAriyAgali shiriya hRudaya sumaMtradiMdali
niruta maMtrita jalava kuDiyalu dhanika puTTuvanu || 99 ||

AvanASvija Sukla pakShadi dEvi utsava kAladoLu tA
bhAva Suddhili hRudaya japa oMdadhika dinadinadi |
I vidhAnadi japava mADalu SrIvanadi saMpadavanaiduva
SrIvanite tA kanaka vRuShTiya karevaLanavarata || 100 ||

Ava bhakutanu varuSha dina dina bhAva Suddhili ella pottU
sAvadhAnadi hRudaya maMtrava paThisalavanAga |
dEvi karuNakaTAkShadiMdali dEva iMdranigadhikanAguva
I vasuMdhareyoLage bhAgyada nidhiyu tAnenipa || 101 ||

SrISa padadali bhakuti haripada dAsa janapada dAsa bhAvava
Isu maMtragaLartha siddhiyu gurupada smRutiyu |
lEsu j~jAna subuddhi pAlisu vAsavAgiru enna maneyali
ISa saha ena tAye uttama padavu nI shiriyE || 102 ||

dharaNi pAlakanenisu ennanu puruSharuttamanenisu sarvada
paramavaibhava nAnavidhavAdArtha siddhigaLA |
piridu kIrtiya bahaLa bhOgava parama bhakti j~jAna sumatiya
parimitillade yittu punarapi salahu SrIdEvi || 103 ||

vAdamADOdakartha siddhiyu mOdatIrthara matadi dIkShavu
sAdaradi nInittu pAlisu vEdadabhimAni |
mOdadali putrArtha siddhiyu Odadale shiri brahmavidyavu
Adi bhArgaviyittu pAlisu janma janmadali || 104 ||

svarNa vRuShTiya enna maneyali kareye dhAnya samRuddhi dina dina
bharadi nI kalyANa vRuddhiya mADe saMbhramadi |
shiriye atuLa vibhUti vRuddhiya haruShadiMdali gaidu dhareyoLu
mereye saMtata upameyillade hariya nija rANi || 105 ||

maMdahAsa mukhAraviMdaLe iMdusUryara kOTibhAsaLe
suMdarAMgiye pItavasanaLe hEmabhUShaNaLE |
kuMduyillada bIja pUrita caMdavAda suhEmakalaSaga-LiMda
nInoDagUDi tIvradi baruvudena manige || 106 ||

namipe SrI hari rANi ninapada kamalayugakanavarata bhakutili
kamale ninnaya vimala karayuga enna mastakadi |
mamateyiMdali iTTu niScala amita bhAgyava nIDe tvaradI
kamalajAtaLe rameye namO namO mALpenanavaratA || 107||

mAte ninnaya jaTharakamala sujAtanAgiha sutana teradali
prIti pUrvaka bhAgya nidhigaLanittu nityadali |
nIta bhakutI j~jAna pUrvaka dAta guru jagannAtha viThalana
prItigoLisuva bhAgya pAlisi poreye nI enna || 108 ||

|| shrI kRuShNArpaNamastu ||

Leave a Reply

Your email address will not be published. Required fields are marked *

You might also like

error: Content is protected !!