Composer : Shri Harapanahalli Bheemavva
ಎಲ್ಯಾಡಿಲ್ಲಿಗೆ ಬಂದನೆ ಈತನು ಕೌ-
ಸಲ್ಯಾದೇವಿಯ ಕಂದನೆ |
ಎಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯ ಕಂದ
ಫುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ [ಪ]
ಸನಕಾದಿ ಸುರರ್ವಂದಿತ ಮಾಣಿಕ್ಯ
ರತ್ನ ಪದಕ ಪಚ್ಛದಿ ಭೂಷಿತ |
ಜನಕ ಜಾನ್ಹವಿ ಜಾನಕಿ ರಾಮರಿಬ್ಬರು
ವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆ [೧]
ಕಂಡು ಶೂರ್ಪಣಖೀಯ ನಾಸಿಕ
ಭಂಗ ಮಾಡಿ ಮಾರೀಚನ್ವಧಿ |
ಮಂಡೋದರೀಪತಿ ಮರ್ದಕನಾಗಿದ್ದ
ಬಂದಯೋಧ್ಯಯನಾಳಿ ಭಕ್ತರ ಸಲಹೊ ದಾತ [೨]
ಬಿಲ್ಲು ಪಿಡಿದು ನಿಂತನೆ ಭೀಮೇಶ ಕೃಷ್ಣ
ಬಲ್ಲಿದ ಬಲವಂತನೆ
ಕಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ-
ವಲ್ಯದಾಯಕ ಸೀತಾವಲ್ಲಭೆಂದೆನಿಸೋದ [೩]
elyADillige baMdane Itanu kau-
salyAdEviya kaMdane |
elyADillige baMda celve kausalya kaMda
PullalOcane jAnaki lakShmaNarane kUDi [pa]
sanakAdi surarvaMdita mANikya
ratna padaka pacCadi BUShita |
janaka jAnhavi jAnaki rAmaribbaru
vanake baMdvAridhi kaTTi vAnarana kUDe [1]
kaMDu SUrpaNaKIya nAsika
BaMga mADi mArIcanvadhi |
maMDOdarIpati mardakanAgidda
baMdayOdhyayanALi Baktara salaho dAta [2]
billu piDidu niMtane BImESa kRuShNa
ballida balavaMtane
kalheNNu mADida karuNakRupALO kai-
valyadAyaka sItAvallaBeMdenisOda [3]
Leave a Reply