Raghuvarya karaja

Composer : Shri Gurugovinda dasaru

By Smt.Shubhalakshmi Rao

Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi


ರಘುವರ್ಯ ಕರಜಾತ ಶ್ರೀ | ರಘೂತ್ತಮ ತೀರ್ಥಾ |ಪ|
ಅಘಹರ ಶ್ರೀ ರಾಮ ಪದ ಭಜಕ ನೇಮಾ |ಅ.ಪ|

ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆ
ಸವನ ಮೂರರ ಮೇಲೆ | ಪವಡಿಸಿರೆ ತಾನೂ |
ಪವನ ಪಿತ ತೈಜಸನು | ಗುರುವರರ ರೂಪಿನಲಿ
ಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ [೧]

ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯ
ಸಮನ ವ್ಯಾಹರಣೆಯನು | ನೀ ಮಾಡಿ ಮುದದೀ |
ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿ
ಸುಮನಸರಿ-ಗುಣಿಸಿದೆಯೋ | ರಾಮ ಪದ ಭಜಕಾ [೨]

ತತುವನ್ಯಾಸವ ಮಾಡೆ | ತತ್ವ ದೇವತೆಗಳನು
ತತುತತೂ ರೂಪದಲಿ | ಸತತ ನೋಡುವನೇ |
ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆ
ಉತ್ತಮೋತ್ತಮನೆನುತ | ಬಹು ಮೆರೆಸಿದಾತ [೩]


raGuvarya karajAta SrI | raGUttama tIrthA |pa|
aGahara SrI rAma pada Bajaka nEmA |a.pa|

pravacanAcAryariM | davamAna taDeyadale
savana mUrara mEle | pavaDisire tAnU |
pavana pita taijasanu | guruvarara rUpinali
pravacisene nyAya sudhe | pravacisida mahimA [1]

prameya dIpike tatva | amama bRuhadAraNya
samana vyAharaNeyanu | nI mADi mudadI |
kamalanABana mahime | amRutavanu tegeyutali
sumanasari-guNisideyO | rAma pada BajakA [2]

tatuvanyAsava mADe | tatva dEvategaLanu
tatutatU rUpadali | satata nODuvanE |
kShitipati SrI gurU | gOviMda viThThalane
uttamOttamanenuta | bahu meresidAta [3]

Leave a Reply

Your email address will not be published. Required fields are marked *

You might also like

error: Content is protected !!