Composer : Shri Tande venkatesha vittala
Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi
ಪಾಹಿ ರಘೂತ್ತಮ ಗುರುರಾಯ
ವಿದ್ಯಾಯು ಯಶಶ್ರೀ ವಿಜ್ಞಾನಪ್ರದಾಯ ||ಪ||
ಪಾಹಿ ಪ್ರಮೋದಾಗಮಾನಂದಿತಾಯ | ದಿಗಧಿಪಾಯ |
ಗುಣಸಾಗರಾಯ | ಬುಧಗೇಯ ಅಜೇಯ | ಅ.ಪ |
ರಘುವರ್ಯ ಪಾದಾಬ್ಜ ಮಧುಲಿಪ್ಪರ |
ಅಘಶೈಲ ಮಘವಾನನಘಧೀವರ |
ನಿಗಮಾಗಮಾನಂದೋದಿತ ಭಾಸ್ಕರ |
ರಘುವರಾಬ್ಜ ಪದಯುಗಳೇಂದೀವರ |
ನಿಗದಿತಾ ಸುಗಾಶಾಯ ನಿಶ್ರೇಯ |೧|
ನತಕಲ್ಪದ್ರುಮ ಸಿದ್ಧ ನಿಕಟಾತ್ಮಜ |
ಶಿತಿಕಂಠಯುತನೀತ ವಾತಾತ್ಮಜ |
ಯತಿವರ್ಯಾಮೃತ ತತ್ವಕ್ರತು ಋತ್ವಿಜ |
ಕ್ಷಿತ್ಯಮೃತಾಂಧಸ ಸತ್ತಮ ದಕ್ಷಿಣ |
ಚಿತ್ತ ಜಾರಿಧುನಿ ನಿತ್ಯವಿಹಾರಿ |೨|
ನಿರವದ್ಯ ಸುಖ ಭಾವಬೋದಾತ್ಮಕ |
ಸಿರಿತಂದೆ ವೇಂಕಟೇಶ ವಿಠ್ಠಲಾರ್ಚಕ |
ಸ್ಮರ ಸಂವತ್ಸರ ಪುಷ್ಯ ಶುಕ್ಲಾಧಿಕ |
ಸ್ವರ್ಧಿನಾಭ್ರಪುರ ನಿರ್ಗಮನೋತ್ಸುಕ |
ದುರ್ಗಮ ಭವ ಸಂಸರ್ಗವಿದಾರಕ |೩|
pAhi raGUttama gururAya
vidyAyu yaSaSrI vij~jAnapradAya ||pa||
pAhi pramOdAgamAnaMditAya | digadhipAya |
guNasAgarAya | budhagEya ajEya | a.pa |
raGuvarya pAdAbja madhulippara |
aGaSaila maGavAnanaGadhIvara |
nigamAgamAnaMdOdita BAskara |
raGuvarAbja padayugaLEMdIvara |
nigaditA sugASAya nishrEya |1|
natakalpadruma siddha nikaTAtmaja |
SitikaMThayutanIta vAtAtmaja |
yativaryAmRuta tatvakratu Rutvija |
kShityamRutAMdhasa sattama dakShiNa |
citta jAridhuni nityavihAri |2|
niravadya suKa BAvabOdAtmaka |
siritaMde vEMkaTESa viThThalArcaka |
smara saMvatsara puShya SuklAdhika |
svardhinABrapura nirgamanOtsuka |
durgama Bava saMsargavidAraka |3|
Leave a Reply