Composer : Shri Gurugovinda dasaru
Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi
ನಮೋ ದೈಶಿಕಾರ್ಯ | ರಘೂತ್ತಮ ಪದ
ನಮೋ ದೇವತಾತ್ಮ ||ಪ||
ವಿಮಲ ರಾಮ ಸನ್ಮಹಿಮ ಭಜಕರ ಗುರು
ನಮೋ ನಮೋ ಪೂತಾತ್ಮ ||ಅ.ಪ.||
ನಾರಿ ಚೋರ ಸಂಹಾರ ಪದಾಂಬುಜ
ಆರಾಧನ ದೀಕ್ಷ
ಸಾರ ಸುರಸ ಗ್ರಂಥಾರಾಧಿಸೆ ಬಹು
ಚಾರು ವ್ಯಾಖ್ಯ ಕೃತ ದೀಕ್ಷ
ಭಾರಿ ಗ್ರಂಥ ಬೃಹದಾರಣ್ಯ ವಿವರಣ
ನ್ಯಾಯ ಗ್ರಂಥಲಕ್ಷ್ಯ
ಸಾರ ತತ್ವ ಪ್ರಭೆ ಚಾರುಗೀತ ಪ್ರಭೆ
ತೋರ್ದೆ ಭಾವದಕ್ಷ [೧]
ಭಾವುಕ ಜನ ಸದ್ಭಾವದಿ ಮೆರೆವ
ಸುಭಾವ ಬೋಧ ಕಾರ್ಯ
ತೀವ್ರ ಮನದ ದುರ್ಭಾವ ಕಳೆದು
ಹರಿ ಭಾವ ಈಯೊ ವರ್ಯ
ಭಾವ ಕೊಲಿವ ಕರ್ಮಾವಳಿಗಲ್ಲೆನೆ
ಜರಿ ಪೇಳ್ದೆ ದಾಸಾರ್ಯ
ಕಾವ ಕರುಣಿ ಹರಿಭಾವದಿ ನಿಲ್ಲುವ
ಭಾವ ಬೋಧಕೃತಿ ಆರ್ಯಾ [೨]
ಗುರುಗಳೆನಿಪ ರಘುವರ್ಯ ಕರಾಬ್ಜಜ
ಶರಣ ಕಲ್ಪವೃಕ್ಷ
ವಿರಚಿಸಿ ನ್ಯಾಸವ ವರ ಸು
ಅಂಗದೊಳು ಸುರರ ಕಾಂಬ ದಕ್ಷ
ಗುರು ತೈಜಸ ಒರೆಯೆ ನ್ಯಾಯ ಸುಧೆ
ಪೇಳ್ದ ಕೋಣಾಧ್ಯಕ್ಷ
ಪರಿಪರಿ ಪ್ರಾರ್ಥಿಪೆ ಗುರು ಗೋವಿಂದ-
ವಿಠಲನ ಚರಣದಿ ದೀಕ್ಷ [೩]
namO daiSikArya | raGUttama pada
namO dEvatAtma ||pa||
vimala rAma sanmahima Bajakara guru
namO namO pUtAtma ||a.pa.||
nAri cOra saMhAra padAMbuja
ArAdhana dIkSha
sAra surasa graMthArAdhise bahu
cAru vyAKya kRuta dIkSha
BAri graMtha bRuhadAraNya vivaraNa
nyAya graMthalakShya
sAra tatva praBe cArugIta praBe
tOrde BAvadakSha [1]
BAvuka jana sadBAvadi mereva
suBAva bOdha kArya
tIvra manada durBAva kaLedu
hari BAva Iyo varya
BAva koliva karmAvaLigallene
jari pELde dAsArya
kAva karuNi hariBAvadi nilluva
BAva bOdhakRuti AryA [2]
gurugaLenipa raGuvarya karAbjaja
SaraNa kalpavRukSha
viracisi nyAsava vara su
aMgadoLu surara kAMba dakSha
guru taijasa oreye nyAya sudhe
pELda kONAdhyakSha
paripari prArthipe guru gOviMda-
viThalana caraNadi dIkSha [3]
Leave a Reply