Composer : Shri Prasanna Venkata dasaru
ಅವರಿವರನು ಭಜಿಸುವುದೇತಕೆ ಶ್ರೀ |
ಧವನ ಸೇವಕನೆ ಮಮ ಗುರುವಾಗಿರು [ಪ]
ವ್ಯಾಸಮುನಿರಾಯರಿಂದ ಈ |
ಭುವನಕಧಿಕ ಬ್ರಹದಾರಣ್ಯದಲಿ
ಧಾವಿಸಿ ಬಂದಾನಂದದಿ ನಿಂದಿಹ |
ಪವನಸುತ ಪಾವನ್ನ ಕಾಯನಿರೆ (೧)
ಸಾವಿನ ವಶದಲ್ಲಿರುವರ ರಕ್ಷಿಸಿ |
ಜೀವ ತುಂಬಿ ಸಂಜೀವಿನಿಯಿಂದಲಿ
ಸ್ತವನವ ಮಾಡುವರವಗುಣ ಕಳೆದು |
ಕಾವನಯ್ಯ ಪದರಜ ತೋರುವವರಿರೆ (೨)
ನವವಿಧದಿಪ್ಪಾವನ ಗುಣಕ್ರೀಯೆಯ |
ನವವಿಧ ಭಕುತಿಯಿಂತುತಿಸ್ಯನುಭವಿಸುವ
ಪ್ರವಾಬ್ರಹ್ಮತವ ಪರಮ ಪುರುಷ ಹರಿ |
ದೇವ ಸಿರಿಪ್ರಸನ್ವೆಂಕಟನುತನಿಧೆ (೩)
avarivaranu BajisuvudEtake SrI |
dhavana sEvakane mama guruvAgiru [pa]
vyAsamunirAyariMda I |
Buvanakadhika brahadAraNyadali
dhAvisi baMdAnaMdadi niMdiha |
pavanasuta pAvanna kAyanire (1)
sAvina vaSadalliruvara rakShisi |
jIva tuMbi saMjIviniyiMdali
stavanava mADuvaravaguNa kaLedu |
kAvanayya padaraja tOruvavarire (2)
navavidhadippAvana guNakrIyeya |
navavidha BakutiyiMtutis-yanuBavisuva
pravAbrahmatava parama puruSha hari |
dEva siriprasanveMkaTanutanidhe (3)
Leave a Reply