Composer : Shri Gurugovinda vittala
ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ||ಪ.||
ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ |
ಹಂಚಿ ಕೇಳಿ ದೈತ್ಯಯರ ವಂಚಕನೆ ಬಾರೋ ||ಅ.ಪ.||
ಪಾಯುಪಸ್ಥ ಕರ್ಮಗೈವ ಅಪಾನ ಬಾರೋ |
ವಾಯುವ ನೀ ನಿರೋಧಿಸೆ ಕಾಯ್ವರಾರೋ ||
ಗೋಣು ಮುರಿವ ಭಾರ ಹೊರುವ ಜಾಣ ಬಾರೋ |
ಪ್ರಾಣ ಪಂಚ ವ್ಯೂಹ ಮುಖ್ಯ ವ್ಯಾನ ಬಾರೋ||೧||
ಉದಕ ಅನ್ನಕ್ಕವಶುದಾನ ಬಾರೋ |
ಮುದದಿ ಶ್ವಾಸ ಮಂತ್ರ ಜಪ
ಜಾಣ ಬಾರೋ || ವೈದಿಕ ಲೌಕಿಕ ಶಬ್ದ ನುಡಿಸೆ ಬಾರೋ,
ಊರ್ಧ್ವಗತಿ ದಾತನೆ ಉದಾನ ಬಾರೋ ||೨||
ಪಾನ ಅನ್ನಗಳ ಹಂಚೆ ಸಮಾನ ಬಾರೋ |
ಧ್ಯಾನವಿಂತು ಈವ ಮುಖ್ಯಪ್ರಾಣ ಬಾರೋ ||
ಕರುಣಾಸಾಗರ ದೇಹವೀಣೆ ಚರಿಸೆ ಬಾರೋ |
ಗುರುಗೋವಿಂದ ವಿಠ್ಠಲಾದೀಷ್ಟಿತ ಗುರುವೇ ಬಾರೋ ||೩||
prANa bArO jagatrANa bArO
prANi sakala karma mALpa jANa bArO ||pa.||
paMcharUpadi prapaMcha vyApta bArO |
haMchi kELi daityayara vaMchakane bArO ||a.pa.||
pAyupastha karmagaiva apAna bArO |
vAyuva nI nirOdhise kAyvarArO ||
gONu muriva bhAra horuva jANa bArO |
prANa paMcha vyUha mukhya vyAna bArO||1||
udaka annakkavashudAna bArO |
mudadi shvAsa maMtra japa
jANa bArO || vaidika loukika shabda nuDise bArO,
Urdhvagati dAtane udAna bArO ||2||
pAna annagaLa haMche samAna bArO |
dhyAnaviMtu Iva mukhyaprANa bArO ||
karuNAsAgara dEhavINe charise bArO |
gurugOviMda viThThalAdIShTita guruvE bArO ||3||
Leave a Reply